ಪ್ರತಿ ವಾಹನಕ್ಕೆ ಒಂದು ದಿನಕ್ಕೆ ಗರಿಷ್ಠ 200 ಲೀ ಡೀಸೆಲ್‌ ಖರೀದಿ ಮಿತಿ ಹೇರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಸಂಸ್ಥೆಗಳು ಪೆಟ್ರೋಲ್‌ ಬಂಕ್‌ಗಳಲ್ಲಿ ಸಗಟು ಪ್ರಮಾಣದಲ್ಲಿ ಪೆಟ್ರೋಲ್‌, ಡೀಸೆಲ್‌ ಖರೀದಿ ಮಾಡುವಂತಿಲ್ಲ ಎಂದು ನಿರ್ಬಂಧ ಹೇರಿದೆ.

ಬಂಕ್‌ಗಳಲ್ಲಿ ಸಗಟು ಖರೀದಿಗೂ ನಿಷೇಧನವದೆಹಲಿ: ಪ್ರತಿ ವಾಹನಕ್ಕೆ ಒಂದು ದಿನಕ್ಕೆ ಗರಿಷ್ಠ 200 ಲೀ ಡೀಸೆಲ್‌ ಖರೀದಿ ಮಿತಿ ಹೇರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಸಂಸ್ಥೆಗಳು ಪೆಟ್ರೋಲ್‌ ಬಂಕ್‌ಗಳಲ್ಲಿ ಸಗಟು ಪ್ರಮಾಣದಲ್ಲಿ ಪೆಟ್ರೋಲ್‌, ಡೀಸೆಲ್‌ ಖರೀದಿ ಮಾಡುವಂತಿಲ್ಲ ಎಂದು ನಿರ್ಬಂಧ ಹೇರಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಪೂರೈಕೆಯ ಸರಣಿಯಲ್ಲಿ ಉಂಟಾಗಿರುವ ವ್ಯತ್ಯಯವು ಸ್ಥಳೀಯವಾಗಿ ಕೊರತೆ ಸೃಷ್ಟಿಸದಂತೆ ತಡೆಯಲು ಈ ಕ್ರಮ ಕೈಗೊಂಡಿದ್ದಾಗಿ ಸರ್ಕಾರ ಹೇಳಿದೆ.

ಬಂಕ್‌ಗಳಲ್ಲಿ 95.20 ರು.ಗೆ ಸಿಗುವ ಡೀಸೆಲ್‌ ಅನ್ನು ಸಗಟಿನಲ್ಲಿ ತೆಗೆದುಕೊಂಡರೆ 134.50 ರು. ಪಾವತಿಸಬೇಕಾಗುವುದು. ಹೀಗಿರುವಾಗ ಸಗಟಿಗೆ ಹೆಚ್ಚು ಹಣ ಪಾವತಿಸುವುದನ್ನು ತಪ್ಪಿಸಲು ಕಾರ್ಖಾನೆಗಳು ಬಂಕ್‌ಗಳತ್ತ ಮುಖ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮಿತಿ ನಿಗದಿ ಮಾಡಲಾಗಿದೆ.

ಡೀಸೆಲ್‌ಗೆ ಸಾಮಾನ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬೇಡಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಮುಂದಿನ 90 ದಿನಗಳವರೆಗೆ ಈ ನೀತಿ ಅನ್ವಯವಾಗುವಂತೆ ಆದೇಶಿಸಲಾಗಿದೆ.