ಮಧ್ಯಪ್ರದೇಶದ ಭಿಂದ್‌ ನಗರದ ಆರ್‌ಎಸ್‌ಎಸ್‌ ಕಚೇರಿ ಮೈದಾನದಲ್ಲಿ 35 ವರ್ಷ ಹಳೆಯ ಗ್ರೆನೇಡ್‌ ಪತ್ತೆಯಾಗಿದೆ.

ಭಿಂದ್‌ (ಮ.ಪ್ರ): ಇಲ್ಲಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೈದಾನದಲ್ಲಿ ಭಾನುವಾರ 35 ವರ್ಷ ಹಳೆಯ ಗ್ರೆನೇಡ್‌ ಪತ್ತೆಯಾಗಿದೆ.

ಇದು ನಿಷ್ಕ್ರಿಯ ಸ್ಥಿತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ಮಕ್ಕಳು ಮೈದಾನದಲ್ಲಿ ಆಟವಾಡುವ ವೇಳೆ ಗ್ರೆನೇಡ್‌ ಪತ್ತೆಯಾಗಿ ಪೊಲೀಸರಿಗೆ ಮಾಹಿತಿ ನೀಡಿದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಂಬ್‌ ನಿಷ್ಕ್ರೀಯ ದಳ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಬಳಿಕ ಇದು 35 ವರ್ಷ ಹಳೆಯದ್ದಾಗಿದೆ, ಇದು ಹತ್ತಿರದ ಪೊಲೀಸ್‌ ತರಬೇತಿ ಕೇಂದ್ರದಿಂದ ಮಣ್ಣನ್ನು ಹೊತ್ತು ಮೈದಾನದಲ್ಲಿ ಹಾಕಿದಾಗ, ಅದರ ಜೊತೆ ನಿಷ್ಕ್ರಿಯ ಬಾಂಬ್‌ ಬಂದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.