ಸಾರಾಂಶ
ಭಾರತಮಾತಾ ಲಿಪಿ ಆಕೃತಿಯಲ್ಲಿ ಸಸಿ ನೆಟ್ಟು ಗಿನ್ನೆಸ್ ದಾಖಲೆ ನಿರ್ಮಿಸಲಾಗಿದೆ. ಮಹಾರಾಷ್ಟ್ರದಲ್ಲಿ 65,724 ಸಸಿ ನೆಟ್ಟು ರೆಕಾರ್ಡ್ ಮಾಡಲಾಗಿದೆ.
ಚಂದ್ರಾಪುರ: ಭಾರತ್ ಮಾತಾ ಎಂದು ಹಿಂದಿಲಿಪಿಯಲ್ಲಿ ಬರೆಯುವ ಆಕೃತಿಯಲ್ಲಿ ಬರೋಬ್ಬರಿ 65,724 ಸಸಿಗಳನ್ನು ನೆಡುವ ಮೂಲಕ ಮಹಾರಾಷ್ಟ್ರದ ತಾಡೋಬಾ ಅಂಧಾರಿ ಹುಲಿ ರಕ್ಷಿತಾರಣ್ಯದಲ್ಲಿ ಶನಿವಾರ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಲಾಗಿದೆ.
ಅಲ್ಲಿ ನಡೆಯುತ್ತಿರುವ ತಾಡೋಬಾ ಹಬ್ಬದ ಅಂಗವಾಗಿ ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಸಿಬ್ಬಂದಿ 26 ತಳಿಗಳ 65,724 ಸಸಿಗಳನ್ನು ಹಿಂದಿಯಲ್ಲಿ ಭಾರತ್ ಮಾತಾ ಎಂದು ಬರೆಯುವ ಲಿಪಿಯ ಆಕೃತಿಯಲ್ಲಿ ಸಸಿ ನೆಡುವಲ್ಲಿ ಶ್ರಮಿಸಿದ್ದಾರೆ.
ಈ ಸಂದರ್ಭದಲ್ಲಿ ಹಾಜರಿದ್ದ ಗಿನ್ನೆಸ್ ಸಂಸ್ಥೆಯ ಪ್ರತಿನಿಧಿ ಸ್ವಪ್ನಿಲ್ ಅರಣ್ಯ ಸಚಿವರಿಗೆ ಪ್ರಮಾಣಪತ್ರ ನೀಡಿದರು.