ಭಾರತದ ಗುಪ್ತಚರ ಮಾಹಿತಿಗಳನ್ನು ಕೇವಲ 200 ರು. ಆಸೆಗಾಗಿ ಪಾಕಿಸ್ತಾನಕ್ಕೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

| Published : Dec 01 2024, 01:34 AM IST / Updated: Dec 01 2024, 07:28 AM IST

ಸಾರಾಂಶ

ಭಾರತದ ಗುಪ್ತಚರ ಮಾಹಿತಿಗಳನ್ನು ಕೇವಲ 200 ರು. ಆಸೆಗಾಗಿ ಪಾಕಿಸ್ತಾನಕ್ಕೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗುಜರಾತ್‌ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಅಧಿಕಾರಿಗಳು ಬಂಧಿಸಿದ್ದಾರೆ.

ಅಹಮದಾಬಾದ್‌: ಭಾರತದ ಗುಪ್ತಚರ ಮಾಹಿತಿಗಳನ್ನು ಕೇವಲ 200 ರು. ಆಸೆಗಾಗಿ ಪಾಕಿಸ್ತಾನಕ್ಕೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗುಜರಾತ್‌ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಅಧಿಕಾರಿಗಳು ಬಂಧಿಸಿದ್ದಾರೆ.

ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಜೆಟ್ಟಿಯಲ್ಲಿ ವೆಲ್ಡರ್‌ ಕಂ ಕಾರ್ಮಿಕ ಆಗಿದ್ದ ದೀಪೇಶ್‌ ಗೋಹೆಲ್‌ ಬಂಧಿತ. ಕರಾವಳಿ ಕಾವಲು ಪಡೆಯ ಹಡಗುಗಳು ಓಡಾಟದ ಕುರಿತಂತೆ ಪಾಕಿಸ್ತಾನ ಏಜೆಂಟ್‌ಗೆ ಈತ ಮಾಹಿತಿ ರವಾನಿಸುತ್ತಿದ್ದ.

ಏಳು ತಿಂಗಳ ಹಿಂದೆ ಈತ ಫೇಸ್‌ಬುಕ್‌ನಲ್ಲಿ ‘ಸಾಹೀಮಾ’ ಎಂಬ ಪ್ರೊಫೈಲ್‌ ನೇಮ್‌ ಸಂಪರ್ಕಕ್ಕೆ ಬಂದಿದ್ದ. ಪಾಕಿಸ್ತಾನ ನೌಕಾಪಡೆಯ ಬೇಹುಗಾರ್ತಿಯಾಗಿದ್ದ ಆಕೆ, ಕರಾವಳಿ ಕಾವಲು ಪಡೆಯ ಹಡಗಿನ ಓಡಾಟದ ಕುರಿತು ಪ್ರತಿ ಮಾಹಿತಿ ನೀಡಿದಾಗ ಗೋಹೆಲ್‌ಗೆ 200 ರು. ನೀಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನದಿಂದ ಗೋಹೆಲ್‌ಗೆ ಸಂದೇಶಗಳು ಬರುತ್ತಿದ್ದವು. ಅವುಗಳ ಮೇಲೆ ನಿಗಾ ಇಟ್ಟಾಗ ಈ ದೇಶದ್ರೋಹಿ ಕೃತ್ಯ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.