ದಕ್ಷಿಣದಲ್ಲೇ ಸ್ತನ ಕ್ಯಾನ್ಸರ್‌ ಸಾವು ಹೆಚ್ಚು

| Published : Mar 25 2024, 12:46 AM IST / Updated: Mar 25 2024, 03:33 PM IST

ಸಾರಾಂಶ

ದೇಶದ ಪೂರ್ವ ಮತ್ತು ಈಶಾನ್ಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಉತ್ತರದ ದೆಹಲಿಯಲ್ಲೇ ಸ್ತನ ಕ್ಯಾನ್ಸರ್‌ ಸಮಸ್ಯೆಯಿಂದಾಗಿ ಸಾವಿನ ಸಂಖ್ಯೆ ಹೆಚ್ಚು ಎಂದು ಭಾರತೀಯ ವೈದ್ಯಕೀಯ ಮಂಡಳಿ (ಐಸಿಎಂಆರ್‌) ಅಧ್ಯಯನ ವರದಿ ಹೇಳಿದೆ.

ನವದೆಹಲಿ: ದೇಶದ ಪೂರ್ವ ಮತ್ತು ಈಶಾನ್ಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಉತ್ತರದ ದೆಹಲಿಯಲ್ಲೇ ಸ್ತನ ಕ್ಯಾನ್ಸರ್‌ ಸಮಸ್ಯೆಯಿಂದಾಗಿ ಸಾವಿನ ಸಂಖ್ಯೆ ಹೆಚ್ಚು ಎಂದು ಭಾರತೀಯ ವೈದ್ಯಕೀಯ ಮಂಡಳಿ (ಐಸಿಎಂಆರ್‌) ಅಧ್ಯಯನ ವರದಿ ಹೇಳಿದೆ.

ಅಲ್ಲದೆ 2025ರ ವೇಳೆಗೆ ಈ ಸಮಸ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಅಧ್ಯಯನ ವರದಿ ಎಚ್ಚರಿಸಿದೆ.2012-16ರ ಅವಧಿಯಲ್ಲಿ ದೇಶದಲ್ಲಿ ಸ್ತನ ಕ್ಯಾನ್ಸರ್‌ನಿಂದಾಗಿ ಸಾವಿನ ಪ್ರಮಾಣದ ಆಧರಿಸಿ ಈ ಅಧ್ಯಯನ ವರದಿ ಸಿದ್ಧಪಡಿಸಲಾಗಿದೆ. 

ಈ ಲೆಕ್ಕಾಚಾರದ ಅನ್ವಯ 2016ರಲ್ಲಿ ಪ್ರತಿ 1 ಲಕ್ಷ ಜನರಿಗೆ ಸ್ತನ ಕ್ಯಾನ್ಸರ್‌ನಿಂದ ಸಂಭವಿಸುವ ಸಾವಿನ ಪ್ರಮಾಣ 515.4 ಎಂದು ಅಂದಾಜಿಸಲಾಗಿದೆ.

ಇನ್ನು ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಕಡಿಮೆ. ನಗರ ಪ್ರದೇಶಗಳಾದ ಬೆಂಗಳೂರು, ಚೆನ್ನೈ ಹಾಗೂ ದಿಲ್ಲಿಯಲ್ಲಿ ಸ್ತನ ಕ್ಯಾನ್ಸರ್‌ ಹೆಚ್ಚಿದೆ ಎಂದು ವರದಿ ಹೇಳಿದೆ.