ಕದನ ಕಾಲದಲ್ಲಿ ಅಧಿಕಾರಿಗಳಿಗೆ ನೆರವಾಗಿದ್ದ ಈ ರಹಸ್ಯ ಕೈಪಿಡಿ!

| N/A | Published : May 13 2025, 01:35 AM IST / Updated: May 13 2025, 04:30 AM IST

ಕದನ ಕಾಲದಲ್ಲಿ ಅಧಿಕಾರಿಗಳಿಗೆ ನೆರವಾಗಿದ್ದ ಈ ರಹಸ್ಯ ಕೈಪಿಡಿ!
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನದ ಉದ್ಧಟತನದಿಂದ ದೇಶದಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾದ ಸಮರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಹಿರಿಯ ಅಧಿಕಾರಿಗಳಿಗೆ ನೆರವಾಗಿದ್ದು 2010ರಲ್ಲಿ ಸರ್ಕಾರ ಹೊರತಂದ, ನೀಲಿ ಮುಖಪುಟದ ‘ಯೂನಿಯನ್‌ ವಾರ್‌ ಬುಕ್‌’ ಎಂಬ ರಹಸ್ಯ ಪುಸ್ತಕ.

ನವದೆಹಲಿ: ಪಾಕಿಸ್ತಾನದ ಉದ್ಧಟತನದಿಂದ ದೇಶದಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾದ ಸಮರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಹಿರಿಯ ಅಧಿಕಾರಿಗಳಿಗೆ ನೆರವಾಗಿದ್ದು 2010ರಲ್ಲಿ ಸರ್ಕಾರ ಹೊರತಂದ, ನೀಲಿ ಮುಖಪುಟದ ‘ಯೂನಿಯನ್‌ ವಾರ್‌ ಬುಕ್‌’ ಎಂಬ ರಹಸ್ಯ ಪುಸ್ತಕ.

ಸಾರ್ವಜನಿಕವಾಗಿ ಲಭ್ಯವಿರದ ಈ ಪುಸ್ತಕದಲ್ಲಿ, ಸಂಘರ್ಷದ ಸಮಯದಲ್ಲಿ ಸರ್ಕಾರದ ವಿವಿಧ ಅಂಗಗಳು ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಕಾರ್ಯ ನಿರ್ವಹಿಸಬೇಕು ಎಂಬುದನ್ನು ವಿವರವಾಗಿ ವಿವರಿಸಲಾಗಿದೆ. ಅಗ್ನಿಶಾಮಕ ಕವಾಯತು, ಸ್ಥಳಾಂತರಿಸುವಿಕೆ ಸೇರಿದಂತೆ ತುರ್ತು ಪ್ರತಿಕ್ರಿಯೆಗೆ ಅಗತ್ಯವಾದ ಎಲ್ಲಾ ವಿಶಯಗಳಿರುವ ಈ ಪುಸ್ತಕದ ತಯಾರಿ ಮತ್ತು ಪರಿಷ್ಕರಣೆಯಲ್ಲಿ ತೊಡಗುವ ರಕ್ಷಣೆ, ಗೃಹ ವ್ಯವಹಾರ ಮತ್ತು ಸಂಪುಟ ಸಚಿವಾಲಯದ ಅಧಿಕಾರಿಗಳು ಕೂಡ ಅದಲ್ಲಿರುವ ಮಾಹಿತಿಯನ್ನು ಗೌಪ್ಯವಾಗಿಡುತ್ತಾರೆ. ಕೇಂದ್ರ ಸಚಿವಾಲಯಗಳನ್ನು ಹೊರತುಪಡಿಸಿ ಪ್ರತಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಬಳಿ ಇದರ ಒಂದು ಪ್ರತಿ ಇರುತ್ತದೆ.

26/11 ಮುಂಬೈ ದಾಳಿ ನಡೆದ ಎರಡೇ ವರ್ಷಗಳಲ್ಲಿ (2010), ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರ ನೇತೃತ್ವದಲ್ಲಿ ಈ ಕೈಪಿಡಿಯ ರಚನೆಯಾಯಿತು. ಇದರಲ್ಲಿ ತಾಂತ್ರಿಕ ಪ್ರಗತಿ ಸೇರಿದಂತೆ ಪ್ರಸ್ತುತ ಸ್ಥಿತಿಯ ಅಗತ್ಯತೆಗಳಿಗೆ ತಕ್ಕಹಾಗೆ ಪ್ರತಿ 15 ವರ್ಷಗಳಿಗೊಮ್ಮೆ ಅಪ್‌ಡೇಟ್‌ ಮಾಡಲಾಗುತ್ತದೆ.