ಸಾರಾಂಶ
ತಮ್ಮ ಸರಳತೆಯಿಂದಲೇ ಎಲ್ಲರ ಮನ ಗೆಲ್ಲುವ ರಾಜ್ಯಸಭೆ ಸದಸ್ಯೆ ಹಾಗೂ ಇನ್ಫೋಸಿಸ್ ಸಂಸ್ಥಾಪಕಿ ಸುಧಾ ಮೂರ್ತಿ ಕಳೆದ 30 ವರ್ಷಗಳಿಂದ ತಾವು ಒಂದೂ ಸೀರೆಯನ್ನು ಕೊಂಡಿಲ್ಲ ಎಂಬ ಕುತೂಹಲದ ವಿಷಯ ಬಹಿರಂಗಪಡಿಸಿದ್ದಾರೆ.
ನವದೆಹಲಿ: ತಮ್ಮ ಸರಳತೆಯಿಂದಲೇ ಎಲ್ಲರ ಮನ ಗೆಲ್ಲುವ ರಾಜ್ಯಸಭೆ ಸದಸ್ಯೆ ಹಾಗೂ ಇನ್ಫೋಸಿಸ್ ಸಂಸ್ಥಾಪಕಿ ಸುಧಾ ಮೂರ್ತಿ ಕಳೆದ 30 ವರ್ಷಗಳಿಂದ ತಾವು ಒಂದೂ ಸೀರೆಯನ್ನು ಕೊಂಡಿಲ್ಲ ಎಂಬ ಕುತೂಹಲದ ವಿಷಯ ಬಹಿರಂಗಪಡಿಸಿದ್ದಾರೆ.
ವಾಯ್ಸ್ ಆಫ್ ಫ್ಯಾಷನ್ ಎಂಬ ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು. ‘ಕಾಶಿಗೆ ಹೋದವರು ತಮ್ಮ ಇಷ್ಟದ ಏನನ್ನಾದರೂ ಅಲ್ಲಿ ಬಿಡಬೇಕು. ನನಗೆ ಶಾಪಿಂಗ್ ಮಾಡುವುದು ಅತಿ ಪ್ರಿಯವಾಗಿದ್ದ ಕಾರಣ ಸೀರೆಯನ್ನೇ ತ್ಯಾಗ ಮಾಡಿದೆ. ಅಂದಿನಿಂದ ಸಹೋದರಿಯರು ಹಾಗೂ ನಾನು ಕೆಲಸ ಮಾಡುವ ಎನ್‌ಜಿಓಗಳು ಉಡುಗೊರೆಯಾಗಿ ನೀಡುವ ಸೀರೆಗಳನ್ನೇ ಧರಿಸುತ್ತಿದ್ದೇನೆ’ ಎಂದಿದ್ದಾರೆ.
ಸುಧಾ ಮೂರ್ತಿ ಚಿಕ್ಕಂದಿನಿಂದಲೇ ತಮ್ಮ ತಾಯಿ ಹಾಗೂ ಅಜ್ಜಿಯಿಂದ ಸರಳ ಜೀವನ ನಡೆಸುವುದನ್ನು ಕಲಿತಿರುವುದಾಗಿ ಹೇಳಿದ್ದಾರೆ.