ಭಾರತದ ಶತಕೋಟ್ಯಾಧೀಶರ ಪಟ್ಟಿಯೊಂದನ್ನು ಹುರೂನ್‌ ಸಂಸ್ಥೆ ಬಿಡುಗಡೆ: 284 ಶತಕೋಟ್ಯಾಧಿಪತಿಗಳು

| N/A | Published : Mar 28 2025, 12:33 AM IST / Updated: Mar 28 2025, 03:18 AM IST

Mukesh nita ambani love story

ಸಾರಾಂಶ

ಭಾರತದ ಶತಕೋಟ್ಯಾಧೀಶರ ಪಟ್ಟಿಯೊಂದನ್ನು ಹುರೂನ್‌ ಸಂಸ್ಥೆ ಬಿಡುಗಡೆ ಮಾಡಿದೆ. ವರದಿ ಅನ್ವಯ, ಭಾರತದಲ್ಲಿ 284 ಶತಕೋಟ್ಯಾಧಿಪತಿಗಳಿದ್ದಾರೆ. ಇದರೊಂದಿಗೆ ಅತಿಹೆಚ್ಚು ಶತಕೋಟ್ಯಾಧಿಪತಿಗಳನ್ನು ಹೊಂದಿವರ ಪಟ್ಟಿಯಲ್ಲಿ ಭಾರತ 3ನೇ ಸ್ಥಾನ ಪಡೆದಕೊಂಡಿದೆ.

ಮುಂಬೈ: ಭಾರತದ ಶತಕೋಟ್ಯಾಧೀಶರ ಪಟ್ಟಿಯೊಂದನ್ನು ಹುರೂನ್‌ ಸಂಸ್ಥೆ ಬಿಡುಗಡೆ ಮಾಡಿದೆ. ವರದಿ ಅನ್ವಯ, ಭಾರತದಲ್ಲಿ 284 ಶತಕೋಟ್ಯಾಧಿಪತಿಗಳಿದ್ದಾರೆ. ಇದರೊಂದಿಗೆ ಅತಿಹೆಚ್ಚು ಶತಕೋಟ್ಯಾಧಿಪತಿಗಳನ್ನು ಹೊಂದಿವರ ಪಟ್ಟಿಯಲ್ಲಿ ಭಾರತ 3ನೇ ಸ್ಥಾನ ಪಡೆದಕೊಂಡಿದೆ.

2024ಕ್ಕೆ ಹೋಲಿಸಿದರೆ ಭಾರತದಲ್ಲಿ 13 ಜನರು ಹೊಸದಾಗಿ ಶತಕೋಟ್ಯಾಧಿಪತಿಗಳ ಪಟ್ಟಿ ಸೇರಿದ್ದಾರೆ. ಇನ್ನು ಭಾರತೀಯರ ಪೈಕಿ ಮುಕೇಶ್‌ ಅಂಬಾನಿ ಆಸ್ತಿ ಶೇ.13ರಷ್ಟು ಇಳಿಕೆಯಾಗಿ 8.6 ಲಕ್ಷ ಕೋಟಿ ರು. ಇಳಿಕೆಯಾಗಿದ್ದರೂ, ಈಗಲೂ ಅವರೇ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇನ್ನು ರೋಶನಿ ನಾದರ್‌ 3.5 ಲಕ್ಷ ಕೋಟಿ ಮೌಲ್ಯದ ಆಸ್ತಿಯೊಂದಿಗೆ ದೇಶದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ.

ಟಾಪ್‌ 10: ಮುಕೇಶ್‌ ಅಂಬಾನಿ (8.6 ಲಕ್ಷ ಕೋಟಿ ರು.), ಅದಾನಿ ಗ್ರೂಪ್ಸ್‌ನ ಗೌತಮ್‌ ಅದಾನಿ (8.4 ಲಕ್ಷ ಕೋಟಿ ರು.), ಎಚ್‌ಸಿಎಲ್‌ನ ರೋಶನಿ ನಾದರ್‌ (3.5 ಲಕ್ಷ ಕೋಟಿ ರು.), ಸನ್‌ ಫಾರ್ಮಾದ ದಿಲೀಪ್‌ ಸಾಂಘ್ವಿ (2.5 ಲಕ್ಷ ಕೋಟಿ ರು.), ವಿಪ್ರೋದ ಅಜಿಂ ಪ್ರೇಂಜಿ (2.2 ಲಕ್ಷ ಕೋಟಿ ರು.), ಆದಿತ್ಯ ಬಿರ್ಲಾದ ಕುಮಾರ್‌ ಮಂಗಳಂ ಬಿರ್ಲಾ (2 ಲಕ್ಷ ಕೋಟಿ ರು.), ಸೀರಂ ಇನ್ಸ್‌ಸ್ಟಿಟ್ಯೂಟ್‌ನ ಸೈರಸ್‌ ಪೂನಾವಾಲಾ (2 ಲಕ್ಷ ಕೋಟಿ ರು.), ಬಜಾಜ್‌ ಆಟೋದ ನೀರಜ್‌ ಬಜಾಜ್‌ (1.6 ಲಕ್ಷ ಕೋಟಿ ರು.), ಆರ್‌ಜೆ ಕ್ರಾಪ್‌ನ ರವಿ ಜೈಪುರಿಯಾ (1.4 ಲಕ್ಷ ಕೋಟಿ ರು.), ಡಿ ಮಾರ್ಟ್‌ನ ರಾಧಾಕೃಷ್ಣ ದಮಾನಿ (1.4 ಲಕ್ಷ ಕೋಟಿ ರು.) ಸ್ಥಾನ ಪಡೆದಿದ್ದಾರೆ.

ಚೀನಾಕ್ಕಿಂತ ಹೆಚ್ಚು:

ಚೀನಾದ ಶತಕೋಟ್ಯಾಧಿಪತಿಗಳ ಸರಾಸರಿ ಆಸ್ತಿ 29027 ಕೋಟಿ ರು. ಇದ್ದರೆ, ಭಾರತದ ಶತಕೋಟ್ಯಾಧಿಪತಿಗಳ ಸರಾಸರಿ ಆಸ್ತಿ 34,514 ಕೋಟಿ ರು.ಇದೆ

ಭಾರತದ ಜಿಡಿಪಿಯ 1/3 ಸಂಪತ್ತು ದೇಶದ ಶತಕೋಟ್ಯಾಧೀಶರ ಬಳಿ

ಭಾರತದ ಒಟ್ಟು ಜಿಡಿಪಿಯ ಮೂರನೇ ಒಂದರಷ್ಟು ಸಂಪತ್ತನ್ನು ದೇಶದ 284 ಕೋಟ್ಯಾಧಿಪತಿಗಳು ಹೊಂದಿದ್ದಾರೆ. ಇವರೆಲ್ಲರ ಬಳಿ 98 ಲಕ್ಷ ಕೋಟಿ ರು. ಸಂಪತ್ತಿದ್ದು, ಇದು ಭಾರತದ ಜಿಡಿಪಿಯ ಶೇ.33ರಷ್ಟು.

ಭಾರತದ 2 ಕಿರಿಯ ಕೋಟ್ಯಾಧೀಪತಿಗಳು

34 ವರ್ಷದ ಶಶಾಂಕ್‌ ಕುಮಾರ್‌ ಮತ್ತು ಹರ್ಶಿಲ್‌ ಮಾಥುರ್‌ 8,643 ಕೋಟಿ ರು. ಮೌಲ್ಯದ ಆಸ್ತಿಯೊಂದಿಗೆ ದೇಶದ ಕಿರಿಯ ಕೋಟ್ಯಾಧಿಪತಿಗಳು ಎನಿಸಿಕೊಂಡಿದ್ದಾರೆ.