ಪತ್ನಿ ಕೊಂದು ಮನೆಯಲ್ಲಿಟ್ಟ, 3 ದಿನ ಬಳಿಕ ನೆರೆಮನೆಯವರ ಮೂಲಕ ಪೊಲೀಸರಿಗೆ ಮಾಹಿತಿ

| Published : Mar 04 2024, 01:15 AM IST

ಪತ್ನಿ ಕೊಂದು ಮನೆಯಲ್ಲಿಟ್ಟ, 3 ದಿನ ಬಳಿಕ ನೆರೆಮನೆಯವರ ಮೂಲಕ ಪೊಲೀಸರಿಗೆ ಮಾಹಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ನಿಯನ್ನು ಸ್ವತಃ ಕೊಂದು ಮನೆಯಲ್ಲಿಟ್ಟುಕೊಂಡಿದ್ದ ಪತಿ ಮೂರು ದಿನಗಳ ಬಳಿಕ ತಪ್ಪೊಪ್ಪಿಕೊಂಡು ತನ್ನನ್ನು ಪೊಲೀಸರಿಗೆ ಕೂಗಾಡಿಕೊಂಡ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.

ನವದೆಹಲಿ: ಕೌಟುಂಬಿಕ ಕಲಹ ತಾರಕಕ್ಕೇರಿದ ಕಾರಣ ಪತ್ನಿಯನ್ನು ಕೊಂದು ತನ್ನನ್ನು ಪೊಲೀಸರಿಗೆ ಒಪ್ಪಿಸುವಂತೆ ಸ್ವತಃ ಪತಿ ಕೂಗಾಡಿಕೊಂಡ ಘಟನೆ ಗಾಜಿಯಾಬಾದ್‌ನ ಫ್ಲಾಟ್‌ವೊಂದರಲ್ಲಿ ನಡೆದಿದೆ.

ಪತಿ ನರೇಶ್‌ ಕುಮಾರ್‌ ತನ್ನ ಪತ್ನಿ ಸುನೀತಾರನ್ನು (51) ಕೊಂದು ಮೂರು ದಿನಗಳವರೆಗೆ ಶವವನ್ನು ಮನೆಯಲ್ಲಿಯೇ ಇರಿಸಿದ್ದ.

ಶವ ದುರ್ವಾಸನೆ ಬೀರಲು ಪ್ರಾರಂಭವಾದ ಬಳಿಕ ಮನೆಯ ಹೊರಗೆ ಬಂದು ಪತ್ನಿಯನ್ನು ತಾನೇ ಕೊಂದಿದ್ದು, ಪೊಲೀಸರಿಗೊಪ್ಪಿಸುವಂತೆ ಕಿರುಚಾಡಿದ್ದಾನೆ.

ಬಳಿಕ ಪೊಲೀಸರು ಬಂದು ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಬಳಿಕ ಪತ್ನಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಆಕೆಯ ಪೋಷಕರಿಗೆ ಒಪ್ಪಿಸಿದ್ದಾರೆ.