ಸಾರಾಂಶ
ಕೋಲ್ಕತಾದ ಕಾನೂನು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರದ ಕರಾಳ ಘಟನೆ ಮಾಸುವ ಮುನ್ನವೇ, ಇನ್ನೊಂದು ಅತ್ಯಾಚಾರ ಪ್ರಕರಣ ಸದ್ದು ಮಾಡಿದೆ. ಆಪ್ತ ಸಮಾಲೋಚಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಐಐಎಂ ಕಾಲೇಜಿನ ವಿದ್ಯಾರ್ಥಿಯೊಬ್ಬ ಅತ್ಯಾಚಾರ ಎಸಗಿದ್ದಾನೆ.
ಕೋಲ್ಕತಾ: ಕೋಲ್ಕತಾದ ಕಾನೂನು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರದ ಕರಾಳ ಘಟನೆ ಮಾಸುವ ಮುನ್ನವೇ, ಇನ್ನೊಂದು ಅತ್ಯಾಚಾರ ಪ್ರಕರಣ ಸದ್ದು ಮಾಡಿದೆ. ಆಪ್ತ ಸಮಾಲೋಚಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಕೋಲ್ಕತಾದ ಐಐಎಂ ಕಾಲೇಜಿನ ವಿದ್ಯಾರ್ಥಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆಯ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?: ಮಹಿಳೆ ಐಐಎಂ ಕಾಲೇಜಿನ ವಸತಿಗೃಹಕ್ಕೆ ಆಪ್ತ ಸಮಾಲೋಚನೆ ನಡೆಸಲು ತೆರಳಿದ್ದಳು. ಆಗ ನೀಡಲಾದ ಡ್ರಗ್ಸ್ ಮಿಶ್ರಿತ ಪಾನೀಯವನ್ನು ಸೇವಿಸಿದ ಬಳಿಕ ಮಹಿಳೆ ಪ್ರಜ್ಞೆ ತಪ್ಪಿದರು. ಎಚ್ಚರವಾದಾಗ ತನ್ನ ಮೇಲೆ ಅತ್ಯಾಚಾರ ನಡೆದಿರುವುದು ತಿಳಿದ ಮಹಿಳೆಯ, ಹರಿದೇವಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ವಿಷಯ ಬಹಿರಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುವುದು ಎಂದು ಆರೋಪಿ ಬೆದರಿಸಿದ್ದಾಗಿಯೂ ಆಕೆ ದೂರಿದ್ದಾರೆ. ಈ ಹಿನ್ನೆಲೆ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ.
ಅತ್ತ ಸಂತ್ರಸ್ತೆಯ ತಂದೆ, ‘ನನ್ನ ಮಗಳು ಆಟೋದಿಂದ ಬಿದ್ದು ಪ್ರಜ್ಞೆ ತಪ್ಪಿದ್ದಳು. ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ’ ಎಂದು ಹೇಳಿದ್ದರು.