ಸಾರಾಂಶ
ರೈಲ್ವೆ ಹಳಿಗಳ ನಡುವೆ ಸೌರಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಯೊಂದನ್ನು ಭಾರತೀಯ ರೈಲ್ವೆ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ.
ನವದೆಹಲಿ: ರೈಲ್ವೆ ಹಳಿಗಳ ನಡುವೆ ಸೌರಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಯೊಂದನ್ನು ಭಾರತೀಯ ರೈಲ್ವೆ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ.
ವಾರಾಣಸಿಯ ಬನಾರಸ್ ಲೋಕೋಮೋಟಿವ್ ವರ್ಕ್ಸ್ ಉತ್ಪಾದನಾ ಘಟಕದಲ್ಲಿ 70 ಮೀ. ಉದ್ದದ ಟ್ರ್ಯಾಕ್‌ನಲ್ಲಿ ಈ ಸೌರಫಲಕಗಳನ್ನು ಅಳವಡಿಸಲಾಗಿದೆ, ಈ ಸೌರಫಲಕವು ನಿತ್ಯ 67 ಯೂನಿಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ.
ಗರಿಷ್ಠ 15 ಕಿಲೋವ್ಯಾಟ್ ಉತ್ಪಾದಿಸುವ 28 ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನವನ್ನು ಭಾರತೀಯ ರೈಲ್ವೆಯ 1.2 ಲಕ್ಷ ಕಿಮೀ ಟ್ರ್ಯಾಕ್ ನೆಟ್‌ವರ್ಕ್‌ಗಳಿಗೆ ಅಳವಡಿಸುವ ಚಿಂತನೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.