ಮಹಿಳಾ ಅಧಿಕಾರಿ ಲಿಂಗ ಪರಿವರ್ತನೆಗೆ ಹಣಕಾಸು ಇಲಾಖೆ ಒಪ್ಪಿಗೆ

| Published : Jul 10 2024, 12:40 AM IST

ಮಹಿಳಾ ಅಧಿಕಾರಿ ಲಿಂಗ ಪರಿವರ್ತನೆಗೆ ಹಣಕಾಸು ಇಲಾಖೆ ಒಪ್ಪಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಲಿಂಗ ಮತ್ತು ಹೆಸರು ಬದಲಾವಣೆಯನ್ನು ಮಾಡಿಕೊಳ್ಳುವುದಕ್ಕೆ ಅನುಮತಿ ನೀಡುವಂತೆ ಕೋರಿ ಭಾರತೀಯ ಕಂದಾಯ ಸೇವೆ( ಐಆರ್‌ಎಸ್‌) ಅಧಿಕಾರಿ ಸಲ್ಲಿಸಿದ್ದ ಮನವಿಗೆ ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆಯನ್ನು ನೀಡಿದೆ

ನವದೆಹಲಿ: ತಮ್ಮ ಲಿಂಗ ಮತ್ತು ಹೆಸರು ಬದಲಾವಣೆಯನ್ನು ಮಾಡಿಕೊಳ್ಳುವುದಕ್ಕೆ ಅನುಮತಿ ನೀಡುವಂತೆ ಕೋರಿ ಭಾರತೀಯ ಕಂದಾಯ ಸೇವೆ( ಐಆರ್‌ಎಸ್‌) ಅಧಿಕಾರಿ ಸಲ್ಲಿಸಿದ್ದ ಮನವಿಗೆ ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆಯನ್ನು ನೀಡಿದೆ. ಈ ಮೂಲಕ ನಾಗರಿಕ ಸೇವೆ ಅಧಿಕಾರಿಯೊಬ್ಬರ ಈ ರೀತಿಯ ಅಪರೂಪದ ಮನವಿಯನ್ನು ಒಪ್ಪಿಕೊಂಡಿರುವುದು ದೇಶದಲ್ಲೇ ಇದು ಮೊದಲನೇ ಪ್ರಕರಣ.2013ರ ಬ್ಯಾಚ್‌ನ ಮಹಿಳಾ ಅಧಿಕಾರಿ ಎಂ ಅನುಸೂಯ ಎನ್ನುವವರು ಸರ್ಕಾರಕ್ಕೆ ಈ ರೀತಿಯ ಮನವಿಯೊಂದನ್ನು ಮಾಡಿಕೊಂಡಿದ್ದರು. ಅವರ ಹೆಸರನ್ನ ಅನುಕತಿರ್ ಸೂರ್ಯ ಎಂದು ಬದಲಾಯಿಸಲು ಮತ್ತು ಹೆಣ್ಣಿನಿಂದ ಪುರುಷನಾಗಿ ಲಿಂಗವನ್ನುಪರಿವರ್ತನೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿದ್ದರು.ಹಿರಿಯ ಅಧಿಕಾರಿಗಳು ಇದನ್ನು ಪ್ರಗತಿಪರ ಎಂದು ಶ್ಲಾಘಿಸಿದ್ದಾರೆ. ಅಲ್ಲದೇ ಮನವಿಗೆ ಅನುಮತಿ ನೀಡಿ‘ ಎಲ್ಲ ಅಧಿಕೃತ ದಾಖಲೆಗಳಲ್ಲಿ ಎಂ ಅನುಕತಿರ್ ಸೂರ್ಯ ಎಂದು ಗುರುತಿಸಲಾಗುತ್ತದೆ’ ಎಂದು ಹಣಕಾಸು ಸಚಿವಾಲಯ ತನ್ನ ಆದೇಶದಲ್ಲಿ ಹೇಳಿದೆ.