ಆರ್‌ಎಸ್‌ಎಸ್ ಸಿದ್ಧಾಂತದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ: ರಾಹುಲ್‌

| Published : Apr 16 2024, 01:02 AM IST / Updated: Apr 16 2024, 06:35 AM IST

ಆರ್‌ಎಸ್‌ಎಸ್ ಸಿದ್ಧಾಂತದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ: ರಾಹುಲ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿರುವುದು ಸಂಘ ಪರಿವಾರದ ವಸಾಹತುಶಾಹಿ ಸಿದ್ಧಾಂತಕ್ಕೆ ಒಳಗಾಗುವುದಕ್ಕೆ ಅಲ್ಲ’ ಎಂದು ವಯನಾಡ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಮತ್ತು ಆರೆಸ್ಸೆಸ್‌ ವಿರುದ್ಧ ಕಿಡಿಕಾರಿದ್ದಾರೆ.

ವಯನಾಡ್‌ (ಕೇರಳ ): ‘ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿರುವುದು ಸಂಘ ಪರಿವಾರದ ವಸಾಹತುಶಾಹಿ ಸಿದ್ಧಾಂತಕ್ಕೆ ಒಳಗಾಗುವುದಕ್ಕೆ ಅಲ್ಲ’ ಎಂದು ವಯನಾಡ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಮತ್ತು ಆರೆಸ್ಸೆಸ್‌ ವಿರುದ್ಧ ಕಿಡಿಕಾರಿದ್ದಾರೆ.

ವಯನಾಡ್‌ನಲ್ಲಿ ರೋಡ್ ಶೋ ನಡೆಸಿ ಎರಡನೇ ಹಂತದ ಲೋಕಸಭಾ ಚುನಾವಣೆ ಪ್ರಚಾರವನ್ನು ಉದ್ಘಾಟಿಸಿ ಮಾತನಾಡಿದ ರಾಹುಲ್ ‘ಬಿಜೆಪಿ ಮತ್ತು ನರೇಂದ್ರ ಮೋದಿ ಒಂದು ರಾಷ್ಟ್ರ, ಒಂದು ಭಾಷೆ, ಒಂದು ನಾಯಕನನ್ನು ನೋಡುತ್ತಾರೆ. ಇದು ದೇಶದ ಮೂಲಭೂತ ತಪ್ಪು ಗ್ರಹಿಕೆ. ಒಂದೇ ನಾಯಕ ಎನ್ನುವ ಕಲ್ಪನೆ ಯುವ ಸಮುದಾಯಕ್ಕೆ ಅವಮಾನ ಮಾಡಿದಂತಾಗುತ್ತದೆ. ಯಾವುದೇ ವಿಚಾರವನ್ನು ಬಲವಂತದ ಹೇರಿಕೆ ಮಾಡಬಾರದು. ಅದು ವ್ಯಕ್ತಿಯ ಮನಸ್ಸಿನಿಂದ ಬರಬೇಕು. ಭಾರತ ಹೂಗುಚ್ಛದಂತೆ. ಅದರಲ್ಲಿ ಪ್ರತಿ ಹೂವಿಗೂ ಬೆಲೆ ನೀಡಬೇಕು’ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

‘ ಬಿಜೆಪಿ ಓರ್ವ ನಾಯಕ ಎನ್ನುವ ಸಿದ್ಧಾಂತಕ್ಕೆ ಜೋತು ಬಿದ್ದಿದೆ. ಯಾಕೆ ದೇಶದಲ್ಲಿ ಹೆಚ್ಚಿನ ನಾಯಕರಿರಬಾರದು..? ಯುವ ಸಮುದಾಯದವರು ಯಾಕೆ ನಾಯಕರಾಗಬಾರದು..? ಸಾಮಾನ್ಯ ಆಟೋ ಚಾಲಕನೋ ..? ಪೊಲೀಸ್ ಅಧಿಕಾರಿಯೋ ಯಾಕೆ ನಾಯಕನಾಗಬಾರದು...? ಒಬ್ಬನೇ ವ್ಯಕ್ತಿ ಯಾಕೆ ನಾಯಕನಾಗಬೇಕು..? ಇದೇ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಇರುವ ವ್ಯತ್ಯಾಸ’ ಎಂದು ರಾಹುಲ್ ಹೇಳಿದರು.

‘ಕಾಂಗ್ರೆಸ್ ದೇಶದ ಜನರ ನಂಬಿಕೆಯನ್ನು ಗೌರವಿಸುತ್ತದೆ. ಅವರ ಭಾಷೆ , ಧರ್ಮವನ್ನು ಪ್ರೀತಿಸುತ್ತದೆ. ಆದರೆ ಬಿಜೆಪಿ ಬಲವಂತಾಗಿ ತಮ್ಮ ಸಿದ್ಧಾಂತವನ್ನು ಹೇರಲು ಬಯಸುತ್ತದೆ. ಆರ್ ಎಸ್ ಎಸ್ ಸಿದ್ಧಾಂತದಿಂದ ದೇಶವನ್ನು ವಸಾಹತುಶಾಹಿಯಾಗಿ ಮಾಡುವುದಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿಲ್ಲ. ಪ್ರತಿಯೊಬ್ಬ ನಾಗರಿಕನು ಭಾರತವನ್ನು ಆಳಬೇಕು’ ಎಂದರು.