ಸಾರಾಂಶ
ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್, ಲಂಡನ್‌ನಲ್ಲಿ ನಡೆದ ‘ಬದಲಾಗುತ್ತಿರುವ ವಿಶ್ವದಲ್ಲಿ ಬ್ರಿಟನ್ ಭವಿಷ್ಯ’ ಎನ್ನುವ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ದೆಹಲಿ : ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್, ಲಂಡನ್‌ನಲ್ಲಿ ನಡೆದ ‘ಬದಲಾಗುತ್ತಿರುವ ವಿಶ್ವದಲ್ಲಿ ಬ್ರಿಟನ್ ಭವಿಷ್ಯ’ ಎನ್ನುವ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಈ ವೇಳೆ ನಡೆದ ಸಂವಾದದಲ್ಲಿ ಭಾಗಿಯಾದ ರಾಜೀವ್, ಕಳೆದ 10 ವರ್ಷಗಳಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಭಾರತದ ಸಾಧನೆ, ಸಾಧನೆಗೆ ಎದುರಾದ ಸವಾಲು, ಅದನ್ನು ಸರ್ಕಾರ ಎದುರಿಸಿದ ರೀತಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಹಲವು ವಿಚಾರಗಳಲ್ಲಿ ಬಿಚ್ಚಿಟ್ಟಿದ್ದಾರೆ. ಜೊತೆಗೆ ಭಾರತವು ಡಿಜಿಟಲ್ ಆಡಳಿತದಲ್ಲಿ ವಿಶ್ವಕ್ಕೆ ಮಾದರಿಯಾಗಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅವರ ಸಂವಾದದ ಪೂರ್ಣ ಪಾಠ ಇಲ್ಲಿದೆ. ಭಾರತ ಡಿಜಿಟಲೀಕರಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವುದೇಕೆ?
ಕಳೆದ ಮೂರು ದಶಕಗಳಲ್ಲಿ ತಂತ್ರಜ್ಞಾನದ ಸಾಮರ್ಥ್ಯದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ತಂತ್ರಜ್ಞಾನ ಎನ್ನುವುದು ಭರವಸೆ, ಪಾರದರ್ಶಕತೆ, ಆರ್ಥಿಕತೆ ಮತ್ತು ಜನರ ಜೀವನವೇ ಎನ್ನುವ ರೀತಿ ಬೆಳೆದಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಭಾರತದಲ್ಲಿ ತಂತ್ರಜ್ಞಾನ ಎನ್ನುವುದು ಕೇವಲ ಭರವಸೆಯಲ್ಲ. ಹಲವು ವರ್ಷಗಳಿಂದ ಇದು ದೇಶದಲ್ಲಿ ಬಳಕೆಯಾಗುತ್ತಿದೆ. ಜೊತೆಗೆ ತಂತ್ರಜ್ಞಾನ ಅಪ್ಪಿಕೊಳ್ಳುವುದರಿಂದ ಪಾರದರ್ಶಕತೆ, ವಿಶ್ವಾಸಾರ್ಹತೆಯ ಜೊತೆಗೆ ಒಂದು ಪೀಳಿಗೆಯ ಅಭಿವೃದ್ಧಿಗೂ ಸಹಕಾರಿ.
ಡಿಜಿಟಲ್ ಗುರುತು ಹೇಗೆ ಮುಖ್ಯ ಪಾತ್ರವಹಿಸುತ್ತೆ?
ಭಾರತದಲ್ಲಿ 120 ಕೋಟಿಗೂ ಅಧಿಕ ನಾಗರಿಕರು ಡಿಜಿಟಲ್ ಗುರುತು ಹೊಂದಿದ್ದಾರೆ. ಡಿಜಿಟಲ್ ಗುರುತು ಎನ್ನುವುದು ದೇಶದ ತಳಪಾಯವಿದ್ದಂತೆ. ಉತ್ತಮ ದೇಶ, ಉತ್ತಮ ಜನರಿದ್ದರೂ ದೇಶದಲ್ಲಿ ಈ ಹಿಂದೆ ನಿಷ್ಟ್ರಿಯ ಆಡಳಿತವಿತ್ತು. 2014ಕ್ಕೂ ಮುನ್ನ ಏಷ್ಯಾದ ಹಲವು ಸಮ್ಮೇಳನಗಳಲ್ಲಿ ನಾನು ಭಾಗಿಯಾಗಿದ್ದೆ. ಆ ಸಂದರ್ಭದಲ್ಲಿ ಏಷ್ಯಾದ ಹಲವು ದೇಶಗಳಲ್ಲಿ ಪ್ರಜಾಪ್ರಭುತ್ವ ಜನರಿಗೆ ತಲುಪುತ್ತಿಲ್ಲ ಎನ್ನುವ ಮಾತುಗಳು ಪದೇ ಪದೇ ಕೇಳಿ ಬಂದಿತ್ತು. ಚೀನಾದಂತಹ ಸರ್ವಾಧಿಕಾರತ್ವ ಹೊಂದಿರುವ ದೇಶಗಳು ಮಾತ್ರ ಜನರಿಗೆ ಯೋಜನೆ ತಲುಪಿಸುವ ಕೆಲಸ ಮಾಡುತ್ತಿದ್ದವು. ಭಾರತದಂತಹ ದೇಶಗಳು ಜನರಿಗೆ ತಲುಪಿಸಬೇಕು ಎನ್ನುವ ಮನೋಭಾವನೆಯನ್ನಷ್ಟೇ ಹೊಂದಿದ್ದವು. ಆದರೆ 2014ರ ಬಳಿಕ ನಾವು ತಂತ್ರಜ್ಞಾನವನ್ನು ಬಳಸುವುದಕ್ಕೆ ಮುಂದಾದಾಗ, ನಿಷ್ಕ್ರಿಯ ಆಡಳಿತವೇ ಬದಲಾಯಿತು.80ರ ದಶಕದಲ್ಲಿ ಭಾರತದ ಮಾಜಿ ಪ್ರಧಾನಿಯೊಬ್ಬರು, ‘ಜನರಿಗಾಗಿ ಸರ್ಕಾರ 100 ರು. ಅನುದಾನ ಮೀಸಲಿರಿಸಿದರೆ ಅದರಲ್ಲಿ 15 ರು. ಹಣ ಮಾತ್ರ ಅವರಿಗೆ ತಲುಪುತ್ತದೆ.
ಉಳಿದ ಹಣ ಅಕ್ರಮದ ರೂಪದಲ್ಲಿ ಅನ್ಯರ ಪಾಲಾಗುತ್ತದೆ’ ಎಂದಿದ್ದರು. ಆದರೆ ಡಿಜಿಟಲೀಕರಣ, ತಂತ್ರಜ್ಙಾನ ಎನ್ನುವುದು ಈ ರೀತಿಯ ಅಕ್ರಮವನ್ನು ತಡೆಗಟ್ಟಿದೆ. ಇದರಿಂದ ನಮ್ಮ 27 ಶತಕೋಟಿ ಡಾಲರ್ (2.24 ಲಕ್ಷ ಕೋಟಿ ರು.) ಉಳಿತಾಯವಾಗಿದೆ. ಸುಮಾರು 350 ಶತಕೋಟಿ ಡಾಲರ್ (29 ಲಕ್ಷ ಕೋಟಿ ರು.) ಸಬ್ಸಿಡಿಗಳನ್ನು ಡಿಜಿಟಲ್ ಐಡಿ ಮೂಲಕ ಜನರಿಗೆ ತಲುಪಿಸಲಾಗಿದೆ. ತಂತ್ರಜ್ಞಾನದ ಮೂಲಕ ಯಾವುದೇ ಅಕ್ರಮಗಳಿರದೇ ಸರ್ಕಾರದಿಂದ ಜನರಿಗೆ ಸೌಲಭ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ತಲುಪಿಸುವುದಕ್ಕೆ ಸಾಧ್ಯವಾಗಿದೆ. ಪ್ರಸ್ತುತ ದೇಶದಲ್ಲಿ ಶೇ.80 ರಷ್ಟು ಜನರು ಬ್ಯಾಂಕ್ ಖಾತೆ ಹೊಂದಿದ್ದಾರೆ.
ದಶಕದ ಹಿಂದೆ ಕೇವಲ ಶೇ.17ರಷ್ಟು ಜನರು ಮಾತ್ರ ಬ್ಯಾಂಕು ಖಾತೆ ಹೊಂದಿದ್ದರು. ಹೀಗಾಗಿಯೇ ಜನರಿಗೆ ಮೀಸಲಿಡುವ 100 ರು. ಪೂರ್ಣವಾಗಿ ಜನರನ್ನು ತಲುಪುವುದಕ್ಕೆ ಸಾಧ್ಯವಾಗಿದೆ.ಜನರು, ಸರ್ಕಾರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?ಪ್ರಜಾಪ್ರಭುತ್ವ ಸರ್ಕಾರ ಎನ್ನುವುದು ಜನರಿಗೆ ತಲುಪುವುದಿಲ್ಲ ಎನ್ನುವುದನ್ನು ಬದಲಾಯಿಸಿ ಬರೆಯಬೇಕು. ನಾವು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿದ್ದೇವೆ. ನಾವು ವಿವಿಧತೆಯಲ್ಲಿ ಏಕತೆ ಎನ್ನುವ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯೂ ಜನರಿಗೆ ತಲುಪುತ್ತದೆ ಎನ್ನುವ ರೀತಿಯಲ್ಲಿ ಬರೆಯಬೇಕು. ಇದರಿಂದ ಜನರು ಸರ್ಕಾರದ ಮೇಲೆ ನಂಬಿಕೆ, ಪಾರದರ್ಶಕತೆ ಮತ್ತು ಜವಾಬ್ದಾರಿ ಆಡಳಿತದ ಮೇಲೆ ಉತ್ತಮ ಸಂಬಂಧವನ್ನು ನಿರೀಕ್ಷಿಸುವುದಕ್ಕೆ ಸಾಧ್ಯ.ಅತಿ ಹೆಚ್ಚು ಜನಸಂಖ್ಯೆಯಿರುವಲ್ಲಿ ಡಿಜಿಟಲೀಕರಣದ ಸವಾಲುಗಳೇನು?ಡಿಜಿಟಲೀಕರಣಗೊಳಿಸುವ ಹಾದಿಯಲ್ಲಿ ನಮಗೆ ಕೆಲ ಮೂಲಭೂತ ಸಮಸ್ಯೆ ಎದುರಾಗಿತ್ತು.
ಅದರಲ್ಲಿ ಮುಖ್ಯವಾದುದು ಇಂಟರ್ನೆಟ್ ಸಮಸ್ಯೆ. ಇಂಟರ್ನೆಟ್ ಮೂಲಕ 120 ಕೋಟಿ ಭಾರತೀಯರನ್ನು ಸಂಪರ್ಕಿಸಬೇಕು. ಅದು ಮೊದಲನೆಯ ಸಮಸ್ಯೆ. 2014ಕ್ಕೂ ಮುನ್ನ ಭಾರತದಲ್ಲಿ ಕೇವಲ 15 ಕೋಟಿ ಭಾರತೀಯರಿಗೆ ಇಂಟರ್ನೆಟ್ ಸೌಲಭ್ಯವಿತ್ತು. ಆದರೆ ಇಂದು ನಾವು 90 ಕೋಟಿ ಭಾರತೀಯರನ್ನು ಇಂಟರ್ನೆಟ್ ಮೂಲಕ ಸಂಪರ್ಕಿಸಿದ್ದೇವೆ. 2026ರ ವೇಳೆಗೆ ಅದು 120 ಕೋಟಿ ತಲುಪುವ ಗುರಿಯನ್ನು ಹೊಂದಿದ್ದೇವೆ. ಜನರನ್ನು ಏಕಕಾಲಕ್ಕೆ ಸಂಪರ್ಕಿಸುವುದು ಮೊದಲನೇ ಸವಾಲು.ಎರಡನೆಯದಾಗಿ, ಹೊಸತನ್ನು ಪರಿಚಯಿಸಿದಾಗ ಜನರಿಗೆ ಒಪ್ಪಿಕೊಳ್ಳುವ ರೀತಿಯಲ್ಲಿ ಮಾಡುವುದೇ ಸವಾಲು.
ಡಿಜಿಟಲ್ ಪರಿಚಯವಾದಾಗ ಡೇಟಾ ಸಂರಕ್ಷಣೆ, ಗೌಪ್ಯತೆ ಸೇರಿದಂತೆ ಹಲವು ಚರ್ಚೆ ಹುಟ್ಟಿಕೊಂಡವು. ಈ ವೇಳೆ ನಾವು ಆ ವಿಚಾರಗಳ ಬಗ್ಗೆ ವ್ಯವಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಮೂರನೇಯದಾಗಿ, ಭಾರತ ಇಷ್ಟೊಂದು ಅಭಿವೃದ್ಧಿಯನ್ನು ಹೊಂದಿದ್ದರೂ ಕೂಡ, ಹೆಚ್ಚಿನ ಪ್ರಮಾಣದಲ್ಲಿ ಬಡತನವನ್ನು ಹೊಂದಿದೆ. ಜೊತೆಗೆ ಡಿಜಿಟಲ್, ತಂತ್ರಜ್ಞಾನದ ಸಾಕ್ಷರತೆಯು ಕಡಿಮೆ ಸಂಖ್ಯೆಯಲ್ಲಿತ್ತು. ಈ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯ ಭಾರತೀಯರು ಡಿಜಿಟಲ್ ಮೂಲಕ ಸರ್ಕಾರವನ್ನು ಸಂಪರ್ಕಿಸಲು, ಆ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳಲು, ಅದನ್ನು ಹೇಗೆ ಮಾಡಬೇಕು ಎಂದು ಕಲಿಸಲು ಸಮಯ ಹಿಡಿಯಿತು. ಸುಮಾರು 5-6 ವರ್ಷ 40 ಕೋಟಿ ಭಾರತೀಯರನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡುವ ದೊಡ್ಡ ಸಮಸ್ಯೆಗಳು ಎದುರಾಗಿತ್ತು. 2015ರ ವೇಳೆಗೆ ಈ ರೀತಿ ಸವಾಲುಗಳನ್ನು ನೋಡಿದ್ದೇವೆ. ಅದರೆ ಅದನ್ನು ಪರಿಹರಿಸಿದ್ದಕ್ಕೆ ಕೃತಜ್ಞರಾಗಿದ್ದೇವೆ.
ಡೇಟಾ ಸುರಕ್ಷತೆಗೆ ಕ್ರಮಗಳು ಹೇಗಿವೆ?
ಗೌಪ್ಯತೆ ಮತ್ತು ಡಿಜಿಟಲೀಕರಣ ಎನ್ನುವುದು ವಿರೋಧಾಭಾಸ ಎನ್ನುವುದು ತಪ್ಪು ಕಲ್ಪನೆ. ಗೌಪ್ಯತೆ, ಗೌಪ್ಯತೆ ಹಕ್ಕು, ಡೇಟಾ ಸುರಕ್ಷತೆಗಳು ಕೂಡ ಡಿಜಿಲೀಕರಣ ರೀತಿಯೇ ಎಂದು ಹೇಳಬಹುದು. ಭಾರತದಲ್ಲಿ ಮಾಡಿದಂತೆ ನಿಯಮಗಳನ್ನು , ತಿದ್ದುಪಡಿಗಳನ್ನು, ಕಾನೂನುಗಳನ್ನು ರಚಿಸಬಹುದು. ಭಾರತದಲ್ಲಿ ಡೇಟಾ ಸುರಕ್ಷತೆ ಕಾನೂನು, ಗೌಪ್ಯತೆ ಹಕ್ಕುಗಳನ್ನು ರಕ್ಷಿಸಲು ನಿಯಮವಿದೆ. ಪ್ರತಿಯೊಬ್ಬರಿಗೂ ಅವರ ವೈಯುಕ್ತಿಕ ಡೇಟಾ ಮೇಲಿರುವ ಹಕ್ಕುಗಳನ್ನು ರಕ್ಷಿಸಲು ಕ್ರಮವನ್ನು ತೆಗೆದುಕೊಂಡಿದ್ದೇವೆ. ಇದರ ಜೊತೆಗೆ ಸರ್ಕಾರ ಮತ್ತು ಆಡಳಿತದಲ್ಲಿ ಅತ್ಯುತ್ತಮ ಸುಧಾರಣೆ, ತಂತ್ರಜ್ಞಾನಗಳನ್ನು ತರುವುದರಿಂದ ಡಿಜಿಟಲ್ ಕಲ್ಪನೆ ಎನ್ನುವುದು ಸ್ವಯಂ ಪ್ರೇರಿತವಾಗಿಯೇ ನಡೆಯುತ್ತದೆ. ಇದರಿಂದ ಜನರ ವೈಯುಕ್ತಿಕ ಮಾಹಿತಿ ಮತ್ತು ಗೌಪ್ಯತೆಯನ್ನು ಹಾನಿಗೊಳಿಸುವ ಪ್ರಯತ್ನಗಳು ನಡೆಯುವುದಿಲ್ಲ.
ಸ್ವಾತಂತ್ರ್ಯ ಹಕ್ಕಿನ ಉಲ್ಲಂಘನೆಯಾಗುವುದಿಲ್ಲವೇ?ಭಾರತದಲ್ಲಿ ಡೇಟಾ ರಕ್ಷಣೆ ಮತ್ತು ಅದನ್ನು ಸೋರಿಕೆಯಾಗದಂತೆ ತಡೆಗಟ್ಟುವುದು ಮೂಲಭೂತ ಹಕ್ಕು. ಇದು ಸಂವಿಧಾನ ಹಕ್ಕು, ಶಾಸಕಾಂಗದಲ್ಲಿ ರೂಪಿತವಾಗಿರುವುದಲ್ಲ. ಸಂಸತ್‌ನಲ್ಲಿ ಡೇಟಾ ಸಂರಕ್ಷಣಾ ಕಾಯ್ದೆಯನ್ನು ಅಂಗೀಕರಿಸಿದ ಬಳಿಕ ಅದನ್ನು ಪರಿಣಾಮಕಾರಿಯಾಗಿ ಜನರ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಲು ಜೊತೆಗೆ ಅವಿಷ್ಕಾರ, ಡಿಜಿಟಲ್ ಆರ್ಥಿಕತೆಯನ್ನು ವಿಸ್ತರಿಸಲು ಬಳಸಿದ್ದೇವೆ.ಡಿಜಿಟಲೀಕರಣ ಎನ್ನುವುದು ವಿರೋಧಾಭಾಸವಲ್ಲ. ಗ್ರಹಿಕೆಯಲ್ಲ. ನೀವು ಆಳವಾಗಿ ಅಧ್ಯಯನ ಮಾಡುವುದಕ್ಕೆ ಹೋದಂತೆ ಜನರ ಮಾಹಿತಿ ಮತ್ತು ಗೌಪ್ಯತೆಯ ವೈಯುಕ್ತಿಕ ಹಕ್ಕಿನ ರಕ್ಷಣೆ ಮತ್ತು ಅಭಿವೃದ್ಧಿ, ಅವಿಷ್ಕಾರ, ಉತ್ತಮ ದಕ್ಷತೆಗೂ ಅಲ್ಲಿ ಪರಿಹಾರ ಸಿಗುತ್ತದೆ.
ಡಿಜಿಟಲ್ ಸಾಕ್ಷರನ್ನಾಗಿ ಮಾಡುವುದು ಯಾವ ರೀತಿ ಸವಾಲು?
ನಾನು ದೊಡ್ಡ ತಂತ್ರಜ್ಞಾನಗಳ ಅಭಿಮಾನಿಯಲ್ಲ. ಆದರೆ ದೊಡ್ದ ದೊಡ್ಡ ತಂತ್ರಜ್ಞಾನಗಳು ಹುಟ್ಟಿಕೊಂಡಾಗ ಪ್ರಜಾಪ್ರಭುತ್ವದಲ್ಲಿ ಜನರೇ ಯುಟ್ಯೂಬ್ , ಫೇಸ್ಬುಕ್, ವಾಟ್ಸಾಪ್‌ನಂತಹ ತಂತ್ರಜ್ಞಾನಗಳನ್ನು ನಿರ್ವಹಿಸುವುದನ್ನು ಕಲಿತರು. ಈ ಮೂಲಕ ಡಿಜಿಟಲ್ ಸಾಕ್ಷರತೆಗೆ ಅವರೇ ಸಹಾಯ ಮಾಡಿದರು. ದೊಡ್ಡ ತಂತ್ರಜ್ಞಾನ ವೇದಿಕೆ ಮೂಲಕ ಅದಾಗಲೇ ಜನರು ತಂತ್ರಜ್ಞಾನದ ಹಾದಿಯಲ್ಲಿ ತೊಡಗಿಕೊಂಡಿದ್ದರು. ಆ ವೇಳೆ ನಾವು ಮಹಿಳೆಯರು ತಂತ್ರಜ್ಞಾನವನ್ನು ಬಳಸಬೇಕು, ಡಿಜಿಟಲ್ ಸಾಕ್ಷರತೆ ಸಾಧಿಸಬೇಕು, ವಿವಿಧ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು, ಸರ್ಕಾರದ ಜೊತೆಗ ಸಂಪರ್ಕ ಸಾಧಿಸಬೇಕು ಎನ್ನುವ ಕಾರಣಕ್ಕೆ ಕಾರ್ಯಕ್ರಮಗಳನ್ನು ಜಾರಿಗೆ ತಂದವು. ಈ 10 ವರ್ಷಗಳಲ್ಲಿ ನಾವು 5.5 ಕೋಟಿ ಉಚಿತ ಮನೆಗಳನ್ನು ಕಟ್ಟಿದ್ದೇವೆ. ಈ ಪೈಕಿ ಶೇ. 80ರಷ್ಟು ಮನೆಗಳು ನೇರವಾಗಿ ಮಹಿಳೆಯರಿಗೆ ತಲುಪಿದೆ. ಈ ರೀತಿಯಲ್ಲಿ ಡಿಜಿಟಲೀಕರಣದಿಂದ ಸಾಕಷ್ಟು ಪ್ರಯೋಜನಗಳಿವೆ. ನೈಜ ರೀತಿಯಲ್ಲಿ ಸಬಲೀಕರಣ, ಸಂಪತ್ತು ಸೃಷ್ಟಿ ಡಿಜೀಟಲೀಕರಣದಿಂದ ಸಾಧ್ಯ.
ಯೋಜನೆ ಜನರಿಗೆ ತಲುಪಿಸುವಲ್ಲಿ ಎದುರಾದ ಸವಾಲುಗಳೇನು?
ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿ ಒಳ್ಳೆಯ ಉದ್ದೇಶಗಳು ಕೂಡ ತಳ್ಳಲ್ಪಡುತ್ತದೆ. ಡಿಜಿಟಲ್ ಗುರುತು, ಡೇಟಾ ಸಂರಕ್ಷಣಾ ಕಾಯ್ದೆಯ ಪ್ರತಿ ಹಂತದಲ್ಲಿ ನಾವು ಜನರನ್ನು ನಮ್ಮ ಜೊತೆಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಅತಿಯಾಗಿ ಅವರ ಬಗ್ಗೆ ಕಾಳಜಿ ವಹಿಸಿ ನಿರ್ಧಾರಗಳನ್ನು ತೆಗೆದುಕೊಂಡಿದ್ದೆವು. ಹೀಗಾಗಿ ಯಶಸ್ವಿಯಾಗಿ ಯೋಜನೆ ಜಾರಿ ಸಾಧ್ಯವಾಯಿತು.ಎಐನಲ್ಲಿ ಭಾರತ ಶ್ರೇಷ್ಠತೆ ಸಾಧಿಸುತ್ತದೆಯೇ?ಎಐ (ಕೃತಕ ಬುದ್ಧಿಮತ್ತೆ) ಎನ್ನುವುದು ದೇಶದ ಆರ್ಥಿಕತೆಗೆ ಹತ್ತಿರದ ಸಂಪರ್ಕವನ್ನು ಸಾಧಿಸುತ್ತದೆ. ಇದನ್ನು ನಿರಾಕರಿಸಿದರೆ ನೀವು ವಿಫಲಗೊಂಡಂತೆ ಅರ್ಥ. ಇದು ಪರಿವರ್ತನೆಯ ಹೊಸ ಗಾಳಿ. ಎಐ ಎನ್ನುವುದು ಕಡಿಮೆದರಲ್ಲಿ ಹೆಚ್ಚಿನದನ್ನು ಮಾಡುವುದು ಎನ್ನುವುದು ಸ್ಪಷ್ಟ. ಸರ್ಕಾರ ಕೃತಕ ಬುದ್ದಿಮತ್ತೆಯ ನೆರವಿನೊಂದಿಗೆ ಕಡಿಮೆ ಸಂಪನ್ಮೂಲ ಬಳಕೆಯಿಂದ ಹೆಚ್ಚಿನ ಕೆಲಸವನ್ನು ಮಾಡಲಿದೆ. ಎಐ ಇಂದು ವ್ಯಾಪಕವಾಗುತ್ತಿದೆ. ಕೃತಕ ಬುದ್ಧಿಮತ್ತೆಯನ್ನು ನಿರ್ಲಕ್ಷಿಸುವುದಕ್ಕೆ ಆಗುವುದಿಲ್ಲ. ಅದನ್ನು ಒಪ್ಪಿಕೊಳ್ಳಲೇಬೇಕು. ಸರ್ಕಾರ, ಅಧ್ಯಯನ, ಉದ್ಯಮಕ್ಕೂ ಎಐ ನೆರವಾಗಲಿದೆ.
ಆರ್ಥಿಕ ಅಭಿವೃದ್ಧಿಗೆ ಈ ರೀತಿಯ ತಂತ್ರಜ್ಞಾನಗಳು ನೆರವಾಗುತ್ತವೆಯೇ?
ತಂತ್ರಜ್ಞಾನ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಉತ್ತರ ಮತ್ತು ದಕ್ಷಿಣ ಎನ್ನುವ ಅಸಮಾನತೆಗೆ ಹೊಗಲಾಡಿಸುವುದಕ್ಕೆ ಸಹಕಾರಿ. ದಶಕದ ಈಚೆಗೆ ಇಂತಹ ಅಸಮಾನತೆಯನ್ನು ನೋಡಿಲ್ಲ.ಸಣ್ಣಪುಟ್ಟ ದೇಶಗಳಿಂದ ಹಿಡಿದು ದೊಡ್ಡ ರಾಷ್ಟ್ರಗಳವರೆಗೆ ಪ್ರತಿ ರಾಷ್ಟ್ರಗಳು ಎಐ ಮತ್ತು ಇತರ ತಂತ್ರಜ್ಞಾನವನ್ನು ಹಾರೈಸುತ್ತವೆ. ಅದು ಕೇವಲ ಅಭಿವೃದ್ಧಿಗೆ ಅಲ್ಲ. ಬದಲಾಗಿ ಅವರದ್ದೇ ಸಮಾನತೆ ಪದ್ಧತಿಯನ್ನು ಅವಿಷ್ಕರಿಸಲು, ಸ್ಟಾರ್ಟ್ ಅಪ್‌ಗಳ ಆರಂಭಕ್ಕಾಗಿ ಬಯಸುತ್ತಿವೆ. ನಾವು ಪ್ರಪಂಚದ ಭವಿಷ್ಯವನ್ನು ಸೃಷ್ಟಿಸಲು ಪಾಲ್ಗೊಳ್ಳುವುದರಿಂದ ಎಐ , ತಂತ್ರಜ್ಞಾನ ಆರ್ಥಿಕತೆಯನ್ನು ಕೂಡ ವೃದ್ಧಿಸುತ್ತದೆ. ಭಾರತದಲ್ಲಿ ಡಿಜಿಟಲ್ ವಿಶೇಷತೆ ಎನ್ನುವುದು ಹೊಸ ಮಗ್ಗುಲಿನ ತಂತ್ರಜ್ಞಾನಕ್ಕೆ ಮೊದಲ ಸಾಕ್ಷಿ. ನಾವು ಜಗತ್ತಿನ ರಾಷ್ಟ್ರಗಳೊಡನೆ ಮುಕ್ತ ತಂತ್ರಜ್ಞಾನ ಬಳಕೆ ಸಂಪರ್ಕ ಸಾಧಿಸಲು ಬಯಸುತ್ತೇವೆ.
ಭೌಗೋಳಿಕ ರಾಜಕೀಯದಲ್ಲಿ ತಂತ್ರಜ್ಞಾನ ಹೇಗೆ ಪ್ರಭಾವ ಬೀರುತ್ತದೆ?
ನೀವು 10 ವರ್ಷಗಳ ಹಿಂದೆ ನೋಡಿದರೆ ತಂತ್ರಜ್ಞಾನ ಕ್ಷೇತ್ರ ಎನ್ನುವುದು ದೇಶದ ಅತಿ ಸಣ್ಣ ಭಾಗವಾಗಿತ್ತು. ತಂತ್ರಜ್ಞಾನವನ್ನು ನಿಯಂತ್ರಿಸುತ್ತಿದ್ದರು. ತಂತ್ರಜ್ಞಾನ ಸ್ವಾಮ್ಯಕ್ಕೆ ಒಳಪಟ್ಟಿತ್ತು. ಅವರು ತಂತ್ರಜ್ಞಾನವನ್ನು ನೀಡುತ್ತಿದ್ದರೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಅದರ ಬಳಕೆದಾರರಾಗಿದ್ದರು. ಆದರೆ ಆ ಕಾಲ ಈಗ ಬದಲಾಗಿದೆ. ಎಐ, ಮುಕ್ತ ತಂತ್ರಜ್ಞಾನ , ವಿವಿಧ ಸಾಫ್ಟವೇರ್‌ಗಳ ಪರಿಚಯ ಅಸಮಾನತೆಯನ್ನು ಬದಲಾಯಿಸಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಟೆಕ್‌ನ ಭವಿಷ್ಯವನ್ನು ರೂಪಿಸುವುದಕ್ಕೆ ವಿಫುಲ ಅವಕಾಶವಿದೆ. ಭಾರತ, ಬ್ರಿಟನ್,ಅಮೆರಿಕದಂತಹ ರಾಷ್ಟ್ರಗಳು ಒಗ್ಗಟ್ಟಾಗಿ ಕೆಲಸ ನಿರ್ವಹಿಸಿದರೆ ಮಾತ್ರ ತಂತ್ರಜ್ಞಾನದ ಭವಿಷ್ಯವನ್ನು ಬಲಪಡಿಸುವುದಕ್ಕೆಸಾಧ್ಯ.
ತಂತ್ರಜ್ಞಾನ ಕ್ರಾಂತಿ ಹೇಗೆ ಪ್ರಭಾವ ಬೀರಲಿದೆ?
ತಂತ್ರಜ್ಞಾನದ ಪರಿವರ್ತನೆಯ ಅಲೆಯಲ್ಲಿ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳು ತಂತ್ರಜ್ಞಾನವನ್ನು ಮುನ್ನೆಡೆಸಲು ಮಹತ್ವದ ಹೆಜ್ಜೆಯನ್ನು ಇಡಬೇಕು.. ನಾವು ಭವಿಷ್ಯವನ್ನು ನೋಡಿದರೆ, ಜಾಗತಿಕ ವ್ಯಾಪಾರ, ಒಪ್ಪಂದಗಳ ಮುನ್ನೆಡೆಸಲು ತಂತ್ರಜ್ಞಾನ ಮುಖ್ಯ, ಯಾವುದೇ ದೇಶ ಇದಕ್ಕೆ ವ್ಯತಿರಿಕ್ತವಾಗಿದೆ ಅಂದರೆ ಆ ಭವಿಷ್ಯದ ಆರ್ಥಿಕತೆಯನ್ನು ಮಾತನಾಡಲು ಅಪ್ರಸ್ತುತವಾಗಿದೆ.ಸಂವಾದ ನಡೆಸಿದವರು: ಜಾಬ್ ಸೋಪೆಲ್