- ಬಂಗಾಳ, ತ.ನಾಡು ಸೋಲಿನ ನಂತರ ಮೊದಲ ಸಭೆ

- ಬಿಜೆಪಿ ವಿರುದ್ಧದ ಕಾರ್ಯತಂತ್ರ ರೂಪಿಸಲು ಚರ್ಚೆ

- 23 ಪಕ್ಷಗಳು ಭಾಗಿ । ಡಿಎಂಕೆ, ಆಪ್‌ ಗೈರು ಸಾಧ್ಯತೆಪಿಟಿಐ ನವದೆಹಲಿ

ಬಂಗಾಳ ಹಾಗೂ ತಮಿಳುನಾಡು ಸೇರಿದಂತೆ ಇತ್ತೀಚಿನ ಕೆಲವು ಚುನಾವಣೆಗಳಲ್ಲಿ ಭಾರಿ ಸೋಲಿನ ಬಳಿಕ, ಇದೇ ಮೊದಲ ಬಾರಿ ವಿಪಕ್ಷಗಳ ಇಂಡಿಯಾ ಒಕ್ಕೂಟವು ಸೋಮವಾರ ಸಭೆ ಸೇರಲಿದೆ.

‘ಬಿಜೆಪಿ ನೇತೃತ್ವದ ಸರ್ಕಾರವನ್ನು ಎದುರಿಸಲು ಮತ್ತು ವಿರೋಧ ಪಕ್ಷದ ಏಕತೆಯನ್ನು ಬಲಪಡಿಸಲು ಜಂಟಿ ಕಾರ್ಯತಂತ್ರ ರೂಪಿಸುವುದು ಸಭೆಯ ಉದ್ದೇಶ. ‘ಇಂಡಿಯಾ ಜನಬಂಧನ ಸಭೆ’ಯಲ್ಲಿ ಇದರಲ್ಲಿ 23 ಪಕ್ಷಗಳು ತಮ್ಮ ಪಾಲ್ಗೊಳ್ಳುವಿಕೆ ಖಚಿತಪಡಿಸಿವೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಹೇಳಿದ್ದಾರೆ.


ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ರಾಹುಲ್ ಗಾಂಧಿ ಮತ್ತು ಖರ್ಗೆ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಇನ್ನು ಕಾಂಗ್ರೆಸ್‌-ಬಿಜೆಪಿ ಒಳಮೈತ್ರಿ ಮಾಡಿಕೊಂಡಿವೆ ಎಂದು ಸಂದೇಹಿಸಿದ್ದರೂ ಸಿಪಿಎಂ ಈ ಸಣೆಯಲ್ಲಿ ಭಾಗವಹಿಸುವಿಕೆ ಖಚಿತಪಡಿಸಿದೆ. ಆದರೆ ಕಾಂಗ್ರೆಸ್‌ ಮೈತ್ರಿ ತೊರೆದಿರುವ ಡಿಎಂಕೆ ಮತ್ತು ಎಎಪಿ ಸಭೆಗೆ ಹಾಜರಾಗುವ ಸಾಧ್ಯತೆ ಕಡಿಮೆ.