ಸಾರಾಂಶ
ಪ್ರಸ್ತುತ ಪಾಕಿಸ್ತಾನದ ನಿರುದ್ಯೋಗ ದರಕ್ಕಿಂತ ಭಾರತದ ನಿರುದ್ಯೋಗ ಪ್ರಮಾಣ ಎರಡರಷ್ಟು ಹೆಚ್ಚಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನವದೆಹಲಿ: ಭಾರತದ ನಿರುದ್ಯೋಗ ದರ ಕಳೆದ 40 ವರ್ಷಗಳಲ್ಲೇ ಅಧಿಕ ಮಟ್ಟಕ್ಕೆ ಏರಿದ್ದು, ಪ್ರಸ್ತುತ ಪಾಕಿಸ್ತಾನದ ನಿರುದ್ಯೋಗ ದರಕ್ಕಿಂತ ಭಾರತದ ನಿರುದ್ಯೋಗ ಪ್ರಮಾಣ ಎರಡರಷ್ಟು ಹೆಚ್ಚಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಗ್ವಾಲಿಯರ್‌ನಲ್ಲಿ ನಡೆದ ಭಾರತ್ ನ್ಯಾಯ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ‘ಭಾರತದಲ್ಲಿ ಪ್ರಸ್ತುತ ನಿರುದ್ಯೋಗ ದರ ಶೇ.233ರಷ್ಟಿದ್ದು, ಪಾಕಿಸ್ತಾನದಲ್ಲಿ ಕೇವಲ ಶೇ.12ರಷ್ಟು ಹೆಚ್ಚಿದೆ.
ಅಲ್ಲದೆ ಭಾರತದಲ್ಲಿ ಭೂತಾನ್ ಮತ್ತು ಬಾಂಗ್ಲಾದೇಶಕ್ಕಿಂತ ಹೆಚ್ಚು ನಿರುದ್ಯೋಗಿಗಳಿದ್ದಾರೆ. ಇಂತಹ ದುಸ್ಥಿತಿಗೆ ಪ್ರಧಾನಿ ಮೋದಿ ಜಾರಿಗೆ ತಂದ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ತೆರಿಗೆ ಪದ್ಧತಿಯೇ ಕಾರಣ’ ಎಂದು ವಾಗ್ದಾಳಿ ನಡೆಸಿದರು.