ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗೌಹರ್‌ ಸುಲ್ತಾನಾ ಗುಡ್‌ಬೈ

| Published : Aug 23 2025, 02:01 AM IST

ಸಾರಾಂಶ

ಭಾರತ ಮಹಿಳಾ ತಂಡದ ಅನುಭವಿ ಆಟಗಾರ್ತಿ, ಎಡಗೈ ಸ್ಪಿನ್ನರ್‌ ಗೌಹರ್‌ ಸುಲ್ತಾನಾ ಶುಕ್ರವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
ನವದೆಹಲಿ: ಭಾರತ ಮಹಿಳಾ ತಂಡದ ಅನುಭವಿ ಆಟಗಾರ್ತಿ, ಎಡಗೈ ಸ್ಪಿನ್ನರ್‌ ಗೌಹರ್‌ ಸುಲ್ತಾನಾ ಶುಕ್ರವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 2008ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಗೌಹರ್‌, 2014ರಲ್ಲಿ ಭಾರತ ಪರ ಕೊನೆಯದಾಗಿ ಆಡಿದ್ದರು. ಸುಲ್ತಾನಾ 50 ಏಕದಿನ, 37 ಟಿ20 ಪಂದ್ಯಗಳನ್ನಾಡಿದ್ದು ಕ್ರಮವಾಗಿ 66 ಮತ್ತು 29 ವಿಕೆಟ್‌ ಕಬಳಿಸಿದ್ದಾರೆ. 2024 ಮತ್ತು 2025ರ ಮಹಿಳಾ ಐಪಿಎಲ್‌ನಲ್ಲಿ ಯುಪಿ ವಾರಿಯರ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. 37 ವರ್ಷದ ಗೌಹರ್‌ ಸದ್ಯ ಬಿಸಿಸಿಐ ಲೆವೆಲ್‌-2 ಕೋಚ್‌ ಆಗಿದ್ದಾರೆ.

====

ತಮ್ಮ ನಿವೃತ್ತಿ ಬಗ್ಗೆ ಜಾಲತಾಣದಲ್ಲಿ ಘೋಷಿಸಿರುವ ಅವರು, ‘ಭಾರತ ತಂಡವನ್ನು ವಿಶ್ವಕಪ್‌ನಲ್ಲಿ ಪ್ರತಿನಿಧಿಸಿದ್ದು, ನನ್ನ ಜೀವನದ ಅತ್ಯಂತ ಮಹತ್ವದ ಕ್ಷಣ’ ಎಂದು ಬರೆದುಕೊಂಡಿದ್ದಾರೆ.