ನವರಾತ್ರಿಯ ವೇಳೆ ಹಿಂಸಾ ಪ್ರವೃತ್ತಿಯಲ್ಲಿ ದುಷ್ಟರನ್ನು ಕೊಲ್ಲಲಾಗುವಂತೆ ನಿಮ್ಮನ್ನೂ (ಬ್ರೇಕ್ಸ್‌ಫೀಲ್ಡ್ ನಗರದ ಮೇಯರ್ ಮತ್ತು ಇತರ ಸದಸ್ಯರು) ಕೊಲ್ಲುತ್ತೇನೆ ಎಂದು ಹೇಳಿದ್ದ ಪ್ಯಾಲೆಸ್ತೀನ್ ಪರ ಭಾರತ ಮೂಲದ ಅಮೆರಿಕ ಹೋರಾಟಗಾರ್ತಿ ರಿದ್ಧಿ ಪಟೇಲ್ ಅವರನ್ನು ಬಂಧಿಸಲಾಗಿದೆ.
ವಾಷಿಂಗ್ಟನ್: ನವರಾತ್ರಿಯ ವೇಳೆ ಹಿಂಸಾ ಪ್ರವೃತ್ತಿಯಲ್ಲಿ ದುಷ್ಟರನ್ನು ಕೊಲ್ಲಲಾಗುವಂತೆ ನಿಮ್ಮನ್ನೂ (ಬ್ರೇಕ್ಸ್‌ಫೀಲ್ಡ್ ನಗರದ ಮೇಯರ್ ಮತ್ತು ಇತರ ಸದಸ್ಯರು) ಕೊಲ್ಲುತ್ತೇನೆ ಎಂದು ಹೇಳಿದ್ದ ಪ್ಯಾಲೆಸ್ತೀನ್ ಪರ ಭಾರತ ಮೂಲದ ಅಮೆರಿಕ ಹೋರಾಟಗಾರ್ತಿ ರಿದ್ಧಿ ಪಟೇಲ್ ಅವರನ್ನು ಬಂಧಿಸಲಾಗಿದೆ.
ಬ್ರೇಕ್ಸ್‌ಫೀಲ್ಡ್ ನಗರ ಮಂಡಳಿ ಸಭೆಯಲ್ಲಿ ಸಾರ್ವಜನಿಕರಿಗೆ ಮಾತನಾಡಲು ಅವಕಾಶ ಕಲ್ಪಿಸಿದ್ದ ವೇಳೆ ಮಾತನಾಡಿದ ರಿದ್ಧಿ, ‘ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲು ಕ್ರಮ ಕೈಗೊಂಡಿದ್ದೀರಿ. ಈ ಮೂಲಕ ನೀವು ನಮ್ಮನ್ನು ಕ್ರಿಮಿನಲ್‌ಗಳ ರೀತಿ ಏಕೆ ನೋಡುತ್ತೀರಿ? ನಿಮ್ಮನ್ನು ಜೀಸಸ್ ಇನ್ನೂ ಉಳಿಸಿರುವುದೇ ದೊಡ್ಡ ವಿಷಯ. ಪ್ಯಾಲೆಸ್ತೀನ್‌ನಲ್ಲಿ ದಮನಿತರನ್ನು ತುಳಿದು ಹಾಕುವಂತೆ ನಿಮ್ಮನ್ನೂ ನಾನು ಮನೆಗೆ ಬಂದು ಗಿಲೋಟಿನ್ ಯಂತ್ರದ ಮೂಲಕ ಕೊಲೆ ಮಾಡುತ್ತೇನೆ. ಹೇಗೂ ಭಾರತದಲ್ಲಿ ದುಷ್ಟರನ್ನು ಸಂಹರಿಸುವ ನವರಾತ್ರಿ ಹಬ್ಬ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ’ ಎಂದು ಹೇಳಿಕೆ ನೀಡಿದರು.
ಈ ಕೂಡಲೇ ಅವರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಬಳಿಕ ಅವರು ಕಂಬನಿ ಮಿಡಿದಿದ್ದಾರೆಂದು ವರದಿಯಾಗಿದೆ. ಇವರು 2021ರಲ್ಲೂ ಸಹ ನರೇಂದ್ರ ಮೋದಿಯ ಕುರಿತು ಅವಹೇಳನಕಾರಿಯಾಗಿ ಪೋಸ್ಟ್ ಹಾಕಿ ವಿವಾದ ಸೃಷ್ಟಿಸಿದ್ದರು. ಇವರ ಈ ಹೇಳಿಕೆಗೆ ಅಮೆರಿಕದ ಹಿಂದೂ ಮಹಾಸಭಾ ಖಂಡಿಸಿದ್ದು, ಹೇಳಿಕೆ ಅಚ್ಚರಿ ಮೂಡಿಸಿದೆ ಎಂಬುದಾಗಿ ಪ್ರತಿಕ್ರಿಯಿಸಿದೆ.