ಸಾರಾಂಶ
ಮನೆ ನಿರ್ಮಾಣಕ್ಕೆಂದು ತೆಗೆದುಕೊಂಡ ಸಾಲವನ್ನು ತೀರಿಸಲಾಗದ ಕೇರಳ ಮಹಿಳೆಯ ಸಾಲವನ್ನು ಭಾರತೀಯ ಮೂಲದ ಶ್ರೀಮಂತ ಉದ್ಯಮಿ, ಲೂಲು ಗ್ರೂಪ್ ಅಧ್ಯಕ್ಷ ಎಂ.ಎ. ಯೂಸುಫ್ ಅಲಿ ಪೂರ್ಣವಾಗಿ ತೀರಿಸಿದ್ದಾರೆ.
ಕೊಚ್ಚಿ: ಮನೆ ನಿರ್ಮಾಣಕ್ಕೆಂದು ತೆಗೆದುಕೊಂಡ ಸಾಲವನ್ನು ತೀರಿಸಲಾಗದ ಕೇರಳ ಮಹಿಳೆಯ ಸಾಲವನ್ನು ಭಾರತೀಯ ಮೂಲದ ಶ್ರೀಮಂತ ಉದ್ಯಮಿ, ಲೂಲು ಗ್ರೂಪ್ ಅಧ್ಯಕ್ಷ ಎಂ.ಎ. ಯೂಸುಫ್ ಅಲಿ ಪೂರ್ಣವಾಗಿ ತೀರಿಸಿದ್ದಾರೆ.
ಉತ್ತರ ಪರವೂರಿನಲ್ಲಿ ನೆಲೆಸಿರುವ ಸಂಧ್ಯಾ ಎಂಬ ಮಹಿಳೆ 2019ರಲ್ಲಿ ಮನೆ ನಿರ್ಮಾಣಕ್ಕೆಂದು ಮಣಪ್ಪುರಂ ಫೈನಾನ್ಸ್‌ನಲ್ಲಿ 4 ಲಕ್ಷ ರು. ಸಾಲ ಪಡೆದುಕೊಂಡಿದ್ದರು. ಆಕೆಯ ಪತಿ ಸಾವನ್ನಪ್ಪಿದ್ದರಿಂದ 2021ರಿಂದ ಬಡ್ಡಿ ಕಟ್ಟುವುದೂ ಸಾಧ್ಯವಾಗದೇ ನಿಲ್ಲಿಸಿದ್ದರು. ಪರಿಣಾಮ ಅಸಲು-ಬಡ್ಡಿ 8 ಲಕ್ಷಕ್ಕೇರಿತ್ತು. ಬ್ಯಾಂಕ್ ಸೋಮವಾರ ಮನೆಯನ್ನು ಜಪ್ತಿ ಮಾಡಿತ್ತು.
ಇದರಿಂದ ಸಂಧ್ಯಾ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ನಿರಾಶ್ರಿತರಾಗಿದ್ದರು. ಸುದ್ದಿ ತಿಳಿದ ಯೂಸುಫ್ ಅಲಿ ಅವರು ಬ್ಯಾಂಕಿಗೆ 10 ಲಕ್ಷ ರು. ಪಾವತಿಸುವ ಮೂಲಕ ಸಾಲವನ್ನು ತೀರಿಸಿ, ಉಳಿದ ಹಣವನ್ನು ಸಂಧ್ಯಾ ಅವರ ಭವಿಷ್ಯಕ್ಕೆ ಅವಧಿಕ ಠೇವಣಿ ಇಟ್ಟಿದ್ದಾರೆ.