ಸಾರಾಂಶ
ಹಿಂದೂ ಮಹಾಸಾಗರದಲ್ಲಿ ಚೀನಾ ಆಕ್ರಮಣದ ಆತಂಕ ಹೆಚ್ಚುತ್ತಿರುವ ನಡುವೆಯೇ, ಶತ್ರು ದೇಶದ ಸಬ್‌ಮರೀನ್‌ಗಳನ್ನು ಪತ್ತೆ ಮಾಡಿ, ಅದನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿರುವ ಸ್ವದೇಶಿ ದಾಳಿ ನೌಕೆಯೊಂದು ಭಾರತೀಯ ನೌಕಾಪಡೆ ಸೇರ್ಪಡೆಯಾಗಿದೆ.
-ನೌಕಾಪಡೆಯ ಸಾಮರ್ಥ್ಯ ಹೆಚ್ಚಿಸಲಿರುವ ‘ಆ್ಯನ್‌ಡ್ರೋಟ್’
- ಚೀನಾದ ಕಡಲದಾಳಿ ಆತಂಕದ ಮಧ್ಯೆ ಹೊಸ ಮೈಲುಗಲ್ಲುನವದೆಹಲಿ: ಹಿಂದೂ ಮಹಾಸಾಗರದಲ್ಲಿ ಚೀನಾ ಆಕ್ರಮಣದ ಆತಂಕ ಹೆಚ್ಚುತ್ತಿರುವ ನಡುವೆಯೇ, ಶತ್ರು ದೇಶದ ಸಬ್‌ಮರೀನ್‌ಗಳನ್ನು ಪತ್ತೆ ಮಾಡಿ, ಅದನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿರುವ ಸ್ವದೇಶಿ ದಾಳಿ ನೌಕೆಯೊಂದು ಭಾರತೀಯ ನೌಕಾಪಡೆ ಸೇರ್ಪಡೆಯಾಗಿದೆ.
ನೌಕಾಪಡೆಗಾಗಿ ಕೋಲ್ಕತಾದ ಗಾರ್ಡನ್ ರೀಚ್ ಶಿಪ್‌ಬಲ್ಡರ್ಸ್ & ಇಂಜಿನಿಯರ್ಸ್ (ಜಿಆರ್‌ಎಸ್‌ಇ) ಸಂಸ್ಥೆ ಒಟ್ಟು 8 ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆಗಳನ್ನು ನಿರ್ಮಿಸುತ್ತಿದೆ. ಈ ಪೈಕೆ 2ನೆಯ ನೌಕೆ ‘ಆ್ಯನ್‌ಡ್ರೋಟ್’ ಅನ್ನು ಶನಿವಾರ ನೌಕಾಪಡೆಗೆ ಹಸ್ತಾಂತರಿಸಲಾಗಿದೆ. ‘ಆ್ಯನ್‌ಡ್ರೋಟ್’ ಲಕ್ಷದ್ವೀಪದಲ್ಲಿರುವ ದ್ವೀಪವೊಂದರ ಹೆಸರು. ಭಾರತ ತನ್ನ ವಿಶಾಲವಾದ ಕಡಲ ಪ್ರದೇಶಗಳನ್ನು ರಕ್ಷಿಸುವ ಬದ್ಧತೆ ಹೊಂದಿದೆ ಎಂಬುದನ್ನು ಸೂಚಿಸಲು ಯುದ್ಧನೌಕೆಗೆ ಈ ಹೆಸರು ಇಡಲಾಗಿದೆ.ವಿಶೇಷತೆಗಳೇನು?:
77 ಮೀ. ಉದ್ದದ ಈ ಯುದ್ಧನೌಕೆಯನ್ನು ಡೀಸೆಲ್ ಎಂಜಿನ್ ಮತ್ತು ವಾಟರ್ ಜೆಟ್ ಸಂಯೋಜನೆಯಿಂದ ನಿರ್ಮಿಸಲಾಗಿದೆ. ಇದು ಭಾರತೀಯ ನೌಕಾಪಡೆಯ ಅತಿದೊಡ್ಡ ಯುದ್ಧನೌಕೆಯಾಗಿದ್ದು, ಅತ್ಯಾಧುನಿಕ ಟಾರ್ಪಿಡೊ ಮತ್ತು ಸ್ಥಳೀಯ ಜಲಾಂತರ್ಗಾಮಿ ಧ್ವಂಸ ಅಸ್ತ್ರಗಳನ್ನು ಹೊಂದಿದೆ.