ಸೆನ್ಸೆಕ್ಸ್‌ 808 ಅಂಕ ಇಳಿದು 81688ರಲ್ಲಿ ಅಂತ್ಯ : 5 ದಿನಕ್ಕೆ 16 ಲಕ್ಷ ಕೋಟಿ ಹೂಡಿಕೆ ನಷ್ಟ

| Published : Oct 05 2024, 01:37 AM IST / Updated: Oct 05 2024, 05:11 AM IST

ಸಾರಾಂಶ

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಶುಕ್ರವಾರ 808 ಅಂಕಗಳ ಕುಸಿದು 81688ರಲ್ಲಿ ಅಂತ್ಯವಾಗಿದೆ.

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಶುಕ್ರವಾರ 808 ಅಂಕಗಳ ಕುಸಿದು 81688ರಲ್ಲಿ ಅಂತ್ಯವಾಗಿದೆ. ಇದು ಕಳೆದ ಮೂರು ವಾರಗಳ ಕನಿಷ್ಠವಾಗಿದೆ. ಇದೇ ವೇಳೆ ನಿಫ್ಟಿ ಕೂಡಾ 235 ಅಂಕ ಇಳಿದು 25014 ಅಂಕಗಳಲ್ಲಿ ಕೊನೆಗೊಂಡಿತು. 

ಮಧ್ಯಪ್ರಾಚ್ಯದಲ್ಲಿ ಕಂಡುಬಂದಿರುವ ಯುದ್ಧ ಭೀತಿ, ಕಳೆದ 5 ದಿನಗಳಿಂದ ಸೆನ್ಸೆಕ್ಸ್‌ ಸತತವಾಗಿ ಕುಸಿಯುವಂತೆ ಮಾಡಿದೆ. ಪರಿಣಾಮ ಹೂಡಿಕೆದಾರರ 16.2 ಲಕ್ಷ ಕೋಟಿ ರು.ನಷ್ಟು ಸಂಪತ್ತು ಕರಗಿ ಹೋಗಿದೆ. 

ಕಳೆದ 5 ದಿನಗಳಲ್ಲಿ ಸೆನ್ಸೆಕ್ಸ್‌ 3883 ಅಂಕ ಮತ್ತು ನಿಫ್ಟಿ 1164 ಕುಸಿತ ಕಂಡಿದೆ. ಇದು ಕಳೆದ 2 ವರ್ಷಗಳಲ್ಲೇ ವಾರವೊಂದರಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಅತ್ಯಂತ ಗರಿಷ್ಠ ಕುಸಿತವಾಗಿದೆ.