ಸಾರಾಂಶ
ಹಣದ ಆಸೆಗಾಗಿ ಕಳೆದ 12 ವರ್ಷದಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಪಠಾಣ್ ಖಾನ್ ಎಂಬ ವ್ಯಕ್ತಿ ಬಂಧನ
ಜೈಸಲ್ಮೇರ್: ಹಣದ ಆಸೆಗಾಗಿ ಕಳೆದ 12 ವರ್ಷದಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಪಠಾಣ್ ಖಾನ್ ಎಂಬ ವ್ಯಕ್ತಿಯನ್ನು ರಾಜಸ್ಥಾನ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ತನಿಖೆ ವೇಳೆ ಈತ ಬಿಎಸ್‌ಎಫ್‌ನ ಚಲನವಲನ, ಕಾರ್ಯಚಟುವಟಿಕೆ, ಗಡಿ ನಿಯೋಜನೆ ಮೊದಲಾದ ವಿಷಯಗಳ ಬಗ್ಗೆ ಪಾಕಿಸ್ತಾನದ ಜೊತೆ ಮಾಹಿತಿ ಹಂಚಿಕೊಂಡಿರುವುದು ಪತ್ತೆಯಾಗಿದೆ.
ಖಚಿತ ಮಾಹಿತಿ ಮೇರೆಗೆ ಕಳೆದ ತಿಂಗಳು ಜೈಸಲ್ಮೇರ್‌ನ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ತನ್ನ ಹೆಸರು ರವಿ ಕಿಶನ್, ತಾವು ರೈತ ಎಂದು ಆತ ಹೇಳಿದ್ದ. ಆದರೆ ತೀವ್ರ ವಿಚಾರಣೆ ವೇಳೆ ಈತನ ಹೆಸರು ಪಠಾಣ್ ಖಾನ್ ಎಂದು ದೃಢಪಟ್ಟಿದೆ.
2013ರಲ್ಲಿ ಖಾನ್ ಪಾಕಿಸ್ತಾನಕ್ಕೆ ತೆರಳಿದ್ದ ವೇಳೆ ಐಎಸ್‌ಐ, ಈತನಿಗೆ ಹಣದ ಆಮಿಷ ಒಡ್ಡಿ ತನ್ನ ಪರ ಗೂಢಚರ್ಯೆಗೆ ಒಪ್ಪಿಸಿತ್ತು. ಅದರಂತೆ ಆತ 12 ವರ್ಷಗಳಿಂದ ನಿರಂತರವಾಗಿ ಐಎಸ್‌ಐಗೆ ಸೇನೆಯ ಮಾಹಿತಿಯನ್ನು ನಾನಾ ಸಾಮಾಜಿಕ ಜಾಲತಾಣಗಳ ಮೂಲಕ ನೀಡುತ್ತಿದ್ದ. ಇದಕ್ಕೆ ಆತನಿಗೆ ನಿರಂತರವಾಗಿ ಹಣ ಕೂಡಾ ಪಾವತಿಯಾಗುತ್ತಿತ್ತು ಎಂಬುದು ತನಿಖೆ ವೇಳೆ ಕಂಡುಬಂದಿದೆ.