ಬಿಹಾರದಲ್ಲಿ ಆಡಳಿತಾರೂಢ ಜೆಡಿಯು, 16 ಲೋಕಸಭೆ ಅಭ್ಯರ್ಥಿಗಳನ್ನು ಭಾನುವಾರ ಘೋಷಣೆ ಮಾಡಿದೆ.
ಪಟನಾ: ಬಿಹಾರದಲ್ಲಿ ಆಡಳಿತಾರೂಢ ಜೆಡಿಯು, 16 ಲೋಕಸಭೆ ಅಭ್ಯರ್ಥಿಗಳನ್ನು ಭಾನುವಾರ ಘೋಷಣೆ ಮಾಡಿದೆ. ಇಬ್ಬರು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ ಹಾಗೂ ಇಬ್ಬರು ಪಕ್ಷಾಂತರಿಗಳಿಗೆ ಟಿಕೆಟ್ ನೀಡಲಾಗಿದೆಎಂಬುದು ವಿಶೇಷ.
ಸೀತಾಮಢಿ ಹಾಗೂ ಶೋಹರ್ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ. ಸೀತಾಮಢಿಯಲ್ಲಿ ವಿಧಾನ ಪರಿಷತ್ ಸಭಾಪತಿ ದೇವೇಶ್ ಚಂದ್ರ ಠಾಕೂರ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಇನ್ನು ರಾಷ್ಟ್ರೀಯ ಲೋಕ ಮೋರ್ಚಾ ತೊರೆದು ಪತಿ ರಮೇಶ್ ಸಿಂಗ್ ಅವರೊಂದಿಗೆ ಪಕ್ಷಕ್ಕೆ ಸೇರಿದ್ದ ವಿಜಯಲಕ್ಷ್ಮಿ ಕುಶ್ವಾಹ ಅವರಿಗೆ ಪಕ್ಷಾಂತರ ಮಾಡಿದ ಒಂದೇ ದಿನದ್ಲಿ ಸಿವಾನ್ ಕ್ಷೇತ್ರದ ಟಿಕೆಟ್ ಕೊಡಲಾಗಿದೆ.
ಇನ್ನು ಶೋಹರ್‌ನಲ್ಲಿ ಆರ್‌ಜೆಡಿ ತೊರೆದು ಜೆಡಿಯು ಸೇರಿದ್ದ ಲವ್ಲಿ ಆನಂದ್‌ಗೆ ಟಿಕೆಟ್ ಘೋಷಣೆಯಾಗಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಇದ್ದು ಜೆಡಿಯುಗೆ 16 ಸ್ಥಾನಗಳ ಹಂಚಿಕೆ ಆಗಿತ್ತು.