ಇಂದು ಕಾರ್ಗಿಲ್‌ ವಿಜಯ ದಿವಸ : 3 ಯೋಜನೆಗೆ ಚಾಲನೆ

| N/A | Published : Jul 26 2025, 08:30 AM IST

Kargil Vijay Diwas

ಸಾರಾಂಶ

1999ರ ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಸಾಧಿಸಿದ ಜಯದ ನೆನಪಿಗೆ ಆಚರಿಸಲಾಗುವ ‘ಕಾರ್ಗಿಲ್‌ ವಿಜಯ ದಿವಸ’ದ ನಿಮಿತ್ತ ಶನಿವಾರ ಸೇನೆಯು 3 ಯೋಜನೆಗಳ ಉದ್ಘಾಟನೆಗೆ ಸಜ್ಜಾಗಿದೆ.

ದ್ರಾಸ್‌: 1999ರ ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಸಾಧಿಸಿದ ಜಯದ ನೆನಪಿಗೆ ಆಚರಿಸಲಾಗುವ ‘ಕಾರ್ಗಿಲ್‌ ವಿಜಯ ದಿವಸ’ದ ನಿಮಿತ್ತ ಶನಿವಾರ ಸೇನೆಯು 3 ಯೋಜನೆಗಳ ಉದ್ಘಾಟನೆಗೆ ಸಜ್ಜಾಗಿದೆ.

ಮೊದಲನೆಯದಾಗಿ, ದೇಶಕ್ಕಾಗಿ ಮಡಿದ ಹುತಾತ್ಮರಿಗೆ ಸಾರ್ವಜನಿಕರು ಶ್ರದ್ಧಾಂಜಲಿ ಸಲ್ಲಿಸಲು ‘ಇ-ಶ್ರದ್ಧಾಂಜಲಿ’ ಎಂಬ ಪೋರ್ಟಲ್‌ ಆರಂಭಿಸಲಾಗುವುದು. ಈ ಮೂಲಕ, ಜನರಲ್ಲಿ ಯೋಧರ ತ್ಯಾಗ-ಬಲಿದಾನದ ಬಗ್ಗೆ ಅರಿವು ಮೂಡಿಸಲಾಗುವುದು.

ಇನ್ನೊಂದು ಯೋಜನೆಯಡಿ, ಕಾರ್ಗಿಲ್‌ ಯುದ್ಧದ ರೋಚಕ ಕತೆಗಳನ್ನು ಕೇಳಲು ಕ್ಯುಆರ್‌ ಕೋಡ್‌ ಆಧರಿತ ಆಡಿಯೋ ಆ್ಯಪ್‌ ಬಿಡುಗಡೆ ಮಾಡಲಾಗುವುದು.

ಅಂತೆಯೇ 3ನೇ ಯೋಜನೆಯಾದ ‘ಇಂಡಸ್‌ ಪಾಯಿಂಟ್‌’ ಅಡಿ, ಬಟಾಲಿಕ್‌ ಸೆಕ್ಟರ್‌ ವರೆಗೆ ಹೋಗಿ, ಭಾರತ-ಪಾಕ್‌ ನಡುವೆ ಇರುವ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು. ಇದರಿಂದ ಸೈನಿಕರ ಎಂಥ ಸ್ಥಿತಿಯಲ್ಲಿ ಹಗಲಿರುಳು ದೇಶ ಕಾಯುತ್ತಿರುತ್ತಾರೆ ಎಂಬುದನ್ನು ಮನವರಿಕೆ ಮಾಡಿಸಲಾಗುವುದು.

Read more Articles on