‘ಉಡಾನ್’ ಖ್ಯಾತಿಯ ಕಿರುತೆರೆ ನಟಿ ಕವಿತಾ ಚೌಧರಿ ನಿಧನ

| Published : Feb 17 2024, 01:15 AM IST / Updated: Feb 17 2024, 12:01 PM IST

ಸಾರಾಂಶ

ಸರ್ಫ್‌ ಎಕ್ಸೆಲ್‌ ಜಾಹೀರಾತಿನ ಮೂಲಕ ಖ್ಯಾತಿ ಗಳಿಸಿದ್ದ ಉಡಾನ್‌ ಧಾರಾವಾಹಿಯ ನಟಿ ಕವಿತಾ ಚೌಧರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅಮೃತ್‌ಸರ್‌ (ಪಂಜಾಬ್‌): ದೂರದರ್ಶನ ವಾಹಿನಿಯ ಜನಪ್ರಿಯ ‘ಉಡಾನ್’ ಧಾರಾವಾಹಿಯ ನಟಿ ಹಾಗೂ ಸರ್ಫ್ ಎಕ್ಸೆಲ್‌ ಜಾಹೀರಾತು ಮೂಲಕ ಹೆಸರು ಮಾಡಿದ್ದ ಕವಿತಾ ಚೌಧರಿ ಇಲ್ಲಿಯ ಆಸ್ಪತ್ರೆಯೊಂದರಲ್ಲಿ ಗುರುವಾರ ರಾತ್ರಿ ಹೃದಯಸ್ತಂಭನದಿಂದ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಕೆಲವು ದಿನಗಳ ಹಿಂದೆ ಇವರು ಅಬಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ‘ಗುರುವಾರ ರಾತ್ರಿ 8.30ರ ಸುಮಾರಿನಲ್ಲಿ ಅಮೃತಸರದ ಆಸ್ಪತ್ರೆಯಲ್ಲಿ ಕವಿತಾ ಮೃತಪಟ್ಟಿದ್ದಾರೆ. 

ಅವರಿಗೆ ಕಡಿಮೆ ರಕ್ತದೊತ್ತಡ ಉಂಟಾಗಿ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು’ ಎಂದು ಕವಿತಾ ಅವರ ಅಳಿಯ ಅಜಯ್‌ ಸಾಯಲ್‌ ಪಿಟಿಐಗೆ ತಿಳಿಸಿದರು. 

1980ರ ದಶಕದಲ್ಲಿ ಬಟ್ಟೆ ಒಗೆಯುವ ಸರ್ಫ್‌ ಸಾಬೂನಿನ ಜಾಹೀರಾತಿಯನ್ನು ಗೃಹಿಣಿ ಲಲಿತಾ ಹೆಸರಿನಲ್ಲಿ ಕಾಣಿಸಿಕೊಂಡು ಬಹಳ ಜನಪ್ರಿಯತೆ ಗಳಿಸಿದ್ದರು. 

ದೂರದರ್ಶನದಲ್ಲಿ 1989 ರಿಂದ 1991 ರವರೆಗೆ ಪ್ರಸಾರವಾದ ಉಡಾನ್‌ ಧಾರಾವಾಹಿಯ ಐಪಿಎಸ್‌ ಅಧಿಕಾರಿ ಕಲ್ಯಾಣಿ ಸಿಂಗ್‌ ಪಾತ್ರದ ಮೂಲಕ ಕವಿತಾ ಪ್ರಸಿದ್ಧಿ ಪಡೆದಿದ್ದರು. ನಟನೆ ಮಾತ್ರವಲ್ಲದೆ ಉಡಾನ್‌ ಧಾರಾವಾಹಿಯನ್ನು ರಚಿಸಿ ನಿರ್ದೇಶಿಸಿದ್ದರು.