ಸಾರಾಂಶ
ತೂಕ ಇಳಿಸಲು ಯೂಟ್ಯೂಬ್ ನೋಡಿಕೊಂಡು ಡಯಟ್ ಮಾಡುತ್ತಿದ್ದ ಕೇರಳದ 18 ವರ್ಷದ ಯುವತಿ ಸರಿಯಾಗಿ ಆಹಾರ ಸೇವಿಸದೇ, ಕೇವಲ ನೀರು ಮಾತ್ರ ಕುಡಿದ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಣ್ಣೂರು: ತೂಕ ಇಳಿಸಲು ಯೂಟ್ಯೂಬ್ ನೋಡಿಕೊಂಡು ಡಯಟ್ ಮಾಡುತ್ತಿದ್ದ ಕೇರಳದ 18 ವರ್ಷದ ಯುವತಿ ಸರಿಯಾಗಿ ಆಹಾರ ಸೇವಿಸದೇ, ಕೇವಲ ನೀರು ಮಾತ್ರ ಕುಡಿದ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಣ್ಣೂರಿನ ಕೂತುಪರಂಬ ನಿವಾಸಿ ಶ್ರೀನಂದಾ ಮೃತ ಯುವತಿ. ಆಕೆತೂಕ ಹೆಚ್ಚಾಗುವ ಭಯ ಹೊಂದಿರುವ ಅನೋರೆಕ್ಸಿಯಾ ನರ್ವೋಸಾ ಎನ್ನುವ ಅಸ್ವಸ್ಥತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.
ಈ ಸಮಸ್ಯೆಯಿಂದಾಗಿ ಆಕೆ ಯೂಟ್ಯೂಬ್ ನೋಡಿ ಡಯಟ್ ಪ್ಲ್ಯಾನ್ ಅರಂಭಿಸಿದ್ದಳು. 5-6 ತಿಂಗಳ ಕಾಲ ಆಹಾರವನ್ನು ಸೇವಿಸದೇ ಕೇವಲ ಬಿಸಿ ನೀರು ಸೇವಿಸಿಕೊಂಡಿದ್ದಳು. ಈ ವಿಚಾರವನ್ನು ಕುಟುಂಬಸ್ಥರಿಂದ ಮುಚ್ಚಿಟ್ಟಿದ್ದರು. ವೈದ್ಯರು ತಿಂಗಳ ಹಿಂದೆಯೇ ಸರಿಯಾಗಿ ತಿನ್ನುವಂತೆ ಸಲಹೆ ನೀಡಿದರೂ ಆಕೆ ಡಯಟ್ ಮುಂದುವರೆಸಿದ್ದರ ಪರಿಣಾಮ ಆರೋಗ್ಯ ಕ್ಷೀಣಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಶ್ರೀನಂದಾ 12 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೇವಲ 24 ಕೇಜಿ ತೂಕ ಹೊಂದಿದ್ದರು ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.