ಸಾರಾಂಶ
ಇತ್ತೀಚೆಗೆ ಉತ್ತರ ಕೊರಿಯಾದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಕ್ಕೆ ಕಾರಣರಾದ 30 ಅಧಿಕಾರಿಗಳನ್ನು ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಗಲ್ಲಿಗೇರಿಸಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಆರೋಪಗಳನ್ನು ಹೊರಿಸಲಾಗಿತ್ತು.
ಸೋಲ್: ಇತ್ತೀಚೆಗೆ ದೇಶದಲ್ಲಿ ಕಂಡುಬಂದ ಭಾರೀ ಪ್ರವಾಹ ಮತ್ತು ಭೂಕುಸಿತದ ವೇಳೆ ಸಾವಿರಾರು ಜನರು ಸಾವನ್ನಪ್ಪಿದನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜೊಂಗ್ ಉನ್, 30 ಅಧಿಕಾರಿಗಳನ್ನು ಗಲ್ಲಿಗೇರಿಸಿದ್ದಾರೆ.
ಇತ್ತೀಚೆಗೆ ಉಂಟಾದ ಪ್ರವಾಹದಲ್ಲಿ ಸುಮಾರು 1000 ಮಂದಿ ಸಾವನ್ನಪ್ಪಿದ್ದು, 4000 ಸಾವಿರ ಮನೆಗಳು ಹಾನಿಯಾಗಿದ್ದವು. 15000 ಮಂದಿಯನ್ನು ಸ್ಥಳಾಂತರಗೊಳಿಸಲಾಗಿತ್ತು. ಈ ದುರಂತ ಸ್ವೀಕಾರಾರ್ಹವಲ್ಲ ಎಂದು ಹೇಳಿದ ಕಿಮ್ ಜಾಂಗ್ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ್ದಾರೆ ಎಂದು ವರದಿ ಮಾಡಿದೆ.ಜತೆಗೆ ಈ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಹಾಗೂ ಕರ್ತವ್ಯಲೋಪ ಆರೋಪವನ್ನು ಹೊರಿಸಲಾಗಿತ್ತು. ಕಳೆದ ತಿಂಗಳ ಕೊನೆಯಲ್ಲಿ 30 ಅಧಿಕಾರಿಗಳಿಗೂ ಒಂದೇ ಬಾರಿ ಗಲ್ಲಿಗೇರಿಸಲಾಗಿದೆ ಎನ್ನಲಾಗಿದೆ.