ಲಡಾಖ್‌ನ ಕಾರ್ಗಿಲ್‌ನಲ್ಲಿ - 22 ಡಿ.ಸೆ. ಉಷ್ಣಾಂಶ

| Published : Feb 11 2024, 01:53 AM IST / Updated: Feb 11 2024, 07:31 AM IST

 ladakh

ಸಾರಾಂಶ

ಜಮ್ಮು ಕಾಶ್ಮೀರ ಮತ್ತು ಲಡಾಕ್‌ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೈಕೊರೆಯುವ ಚಳಿ ಮುಂದುವರೆದಿದ್ದು, ಲಡಾಖ್‌ನ ಕಾರ್ಗಿಲ್‌ನಲ್ಲಿ ಅತ್ಯಂತ ಕನಿಷ್ಠ ಮೈನಸ್‌ 22 ಡಿಗ್ರಿ ಸೆಲ್ಷಿಯಸ್‌ ತಾಪಮಾನ ದಾಖಲಾಗಿದೆ.

ಶ್ರೀನಗರ: ಜಮ್ಮು ಕಾಶ್ಮೀರ ಮತ್ತು ಲಡಾಕ್‌ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೈಕೊರೆಯುವ ಚಳಿ ಮುಂದುವರೆದಿದ್ದು, ಲಡಾಖ್‌ನ ಕಾರ್ಗಿಲ್‌ನಲ್ಲಿ ಅತ್ಯಂತ ಕನಿಷ್ಠ ಮೈನಸ್‌ 22 ಡಿಗ್ರಿ ಸೆಲ್ಷಿಯಸ್‌ ತಾಪಮಾನ ದಾಖಲಾಗಿದೆ.

ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಉಷ್ಣಾಂಶ ಹೆಪ್ಪುಗಟ್ಟುವ ಸ್ಥಿತಿಗಿಂತ ಕೆಳಮಟ್ಟದಲ್ಲೇ ದಾಖಲಾಗಿದೆ. ಗುಲ್ಮಾರ್ಗ್‌ನಲ್ಲಿ ಮೈನಸ್‌ 7 ಡಿ.ಸೆ., ಅಮರನಾಥ್‌ ಯಾತ್ರೆಯ ಬೇಸ್‌ ಕ್ಯಾಂಪ್‌ ಆದಂತಹ ಪಹಲ್ಗಾಮ್‌ನಲ್ಲಿ ಮೈನಸ್‌ 8.6 ಡಿ.ಸೆ., ಕೋಕೆರ್ನಾಗ್‌ ಮತ್ತು ಕ್ವಾಜಿಗುಂಡ್‌ಗಳಲ್ಲಿ ಮೈನಸ್‌ 3.7 ಡಿ.ಸೆ.

ಜಮ್ಮು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಮೈನಸ್‌ 4.9 ಡಿ.ಸೆ., ಲಡಾಕ್‌ನ ಲೇಹ್‌ನಲ್ಲಿ ಮೈನಸ್‌ 14.5 ಡಿ.ಸೆ., ಜಮ್ಮುವಿನಲ್ಲಿ ಮೈನಸ್‌ 7.3 ಡಿ.ಸೆ., ಕಟ್ರಾದಲ್ಲಿ ಮೈನಸ್‌ 6.1 ಡಿ.ಸೆ. ತಾಪಮಾನ ದಾಖಲಾಗಿದೆ.

ಜಮ್ಮು ಕಾಶ್ಮೀರ ವಲಯದಲ್ಲಿ ಅತ್ಯಂತ ಭೀಕರ ಚಳಿ ಇರುವ 40 ದಿನಗಳ ‘ಚಿಲ್ಲಾ ಐ ಕಲನ್‌’ ಮುಕ್ತಾಯವಾಗಿದ್ದು, ಇನ್ನು 1 ತಿಂಗಳಿನಲ್ಲಿ ಚಳಿ ನಿಧಾನವಾಗಿ ಕಡಿಮೆಯಾಗುತ್ತಾ ಸಾಗುತ್ತದೆ. ಫೆ.14ರವರೆಗೂ ಪ್ರಸ್ತುತ ಇರುವ ಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.