ಲಘು ಯುದ್ಧ ಟ್ಯಾಂಕ್ ಜೋರಾವರ್‌ ಅನಾವರಣ

| Published : Jul 07 2024, 01:15 AM IST / Updated: Jul 07 2024, 05:55 AM IST

ಸಾರಾಂಶ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಶನಿವಾರ ಗುಜರಾತ್‌ನ ಹಜಿರಾದಲ್ಲಿ ತನ್ನ ಲಘು ಯುದ್ಧ ಟ್ಯಾಂಕ್ ಜೊರಾವರ್ ಅನ್ನು ಪರೀಕ್ಷಿಸಿದೆ ಹಾಗೂ ಅನಾವರಣ ಮಾಡಿದೆ.

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಶನಿವಾರ ಗುಜರಾತ್‌ನ ಹಜಿರಾದಲ್ಲಿ ತನ್ನ ಲಘು ಯುದ್ಧ ಟ್ಯಾಂಕ್ ಜೊರಾವರ್ ಅನ್ನು ಪರೀಕ್ಷಿಸಿದೆ ಹಾಗೂ ಅನಾವರಣ ಮಾಡಿದೆ. ಈ ಟ್ಯಾಂಕ್‌ಗಳನ್ನು ಕಡಿದಾದ ಚೀನಾ-ಲಡಾಖ್ ಗಡಿಯಲ್ಲಿ ನಿಯೋಜಿಸಲಾಗುತ್ತದೆ.ಜೋರಾವರ್ ಅನ್ನು ಡಿಆರ್‌ಡಿಒ ಮತ್ತು ಲಾರ್ಸೆನ್ ಮತ್ತು ಟೂಬ್ರೊ ಕೇವಲ ದಾಖಲೆಯ 2 ವರ್ಷದಲ್ಲಿ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಭಾರತೀಯ ಸೇನೆಗಾಗಿ ಸಿದ್ಧಪಡಿಸಲಾಗಿರುವ ಟ್ಯಾಂಕ್‌ಅನ್ನು ಡಿಆರ್‌ಡಿಒ ಮುಖ್ಯಸ್ಥ ಡಾ ಸಮೀರ್ ವಿ. ಕಾಮತ್ ಪರಿಶೀಲಿಸಿದರು.

ಭಾರವಾದ ಟಿ-72 ಮತ್ತು ಟಿ-90 ಟ್ಯಾಂಕ್‌ಗಳಿಗಿಂತ ಹಗುರವಾದ ಮತ್ತು ನೀರು/ಭೂಮಿಯಲ್ಲಿ ಚಲಿಸಬಹುದಾದ ಸಾಮರ್ಥ್ಯಗಳನ್ನು ಹೊಂದಿರುವ ಈ ಲಘು ಟ್ಯಾಂಕ್ 25 ಟನ್‌ ತೂಗುತ್ತದೆ. ಪರ್ವತಗಳಲ್ಲಿ ಕಡಿದಾದ ಆರೋಹಣಗಳ ಮೂಲಕ ಮತ್ತು ನದಿಗಳು ಮತ್ತು ಇತರ ಜಲಮೂಲಗಳನ್ನು ಸುಲಭವಾಗಿ ದಾಟುತ್ತವೆ. ಕಾಮತ್‌ ಪ್ರಕಾರ, ಟ್ಯಾಂಕ್ 2027 ರ ವೇಳೆಗೆ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.