ಬೈಜೂಸ್‌ ಸಂಸ್ಥಾಪಕರ ವಿರುದ್ಧ ಕಠಿಣ ಲುಕೌಟ್‌ ನೋಟಿಸ್‌ ಜಾರಿ

| Published : Feb 23 2024, 01:45 AM IST

ಬೈಜೂಸ್‌ ಸಂಸ್ಥಾಪಕರ ವಿರುದ್ಧ ಕಠಿಣ ಲುಕೌಟ್‌ ನೋಟಿಸ್‌ ಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬೈಜೂಸ್‌ ಸಂಸ್ಥಾಪಕ ರವೀಂದ್ರನ್‌ ವಿರುದ್ಧ ಜಅರಿ ನಿರ್ದೇಶನಾಲಯ ಕಠಿಣ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ್ದು, ದೇಶದಿಂದ ಪರಾರಿಗೆ ಯತ್ನಿಸಿದರೆ ತಡೆಗೆ ಸೂಚನೆ ನೀಡಿದೆ.

ನವದೆಹಲಿ: ಲಾಕ್‌ಡೌನ್‌ ವೇಳೆ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಕಾಲೇಜು ಶಿಕ್ಷಣ ನೀಡಿ ಹೆಸರು ಮಾಡಿದ್ದ ಬೈಜೂಸ್‌ ಕಂಪನಿ ಸಂಸ್ಥಾಪಕ ಹಾಗೂ ಸಿಇಒ ಬೈಜು ರವೀಂದ್ರನ್‌ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.), ಫೆಮಾ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಮತ್ತಷ್ಟು ಕಠಿಣ ಲುಕೌಟ್‌ ನೋಟಿಸ್‌ ಜಾರಿ ಮಾಡಿದೆ.ಈ ಹಿಂದಿನ ಲುಕೌಟ್ ನೋಟಿಸ್‌ನಲ್ಲಿ ರವೀಂದ್ರನ್‌ ಚಲನವಲನಗಳ ಮೇಲೆ ಗಮನ ಇಡಿ ಎಂದು ಮಾತ್ರ ಏರ್‌ಪೋರ್ಟ್‌, ಬಂದರುಗಳಿಗೆ ಸೂಚನೆ ನೀಡಲಾಗಿತ್ತು. ಈಗ ಲುಕೌಟ್‌ ನೋಟಿಸ್‌ ಅನ್ನು ಪರಿಷ್ಕರಿಸಲಾಗಿದ್ದು, ಯಾವುದೇ ಏರ್‌ಪೋರ್ಟ್‌, ಬಂದರು ಅಥವಾ ಭೂಮಾರ್ಗದ ಮೂಲಕ ಅವರು ದೇಶ ಬಿಟ್ಟು ಹೋಗಲು ಯತ್ನಿಸುತ್ತಿದ್ದರೆ ತಡೆಯಿರಿ ಎಂದು ಸೂಚಿಸಲಾಗಿದೆ.ಆದಾಗ್ಯೂ ರವೀಂದ್ರನ್‌ ಈಗಾಗಲೇ ಭಾರತದಿಂದ ಹೊರಹೋಗಿದ್ದು, ದುಬೈನಲ್ಲಿ ನೆಲೆಸಿದ್ದಾರೆ ಎಂದು ಮೂಲಗಳು ಹೇಳಿವೆ.ಬೈಜು ಮೇಲೆ ಆರೋಪವೇನು?:ಬೈಜು ರವೀಂದ್ರನ್‌ ಅವರು ಸರ್ಕಾರಕ್ಕೆ ಸರಿಯಾಗಿ ಲೆಕ್ಕಪತ್ರ ಒದಗಿಸದೆ 9300 ಕೋಟಿ ರು.ನಷ್ಟು ವ್ಯವಹಾರವನ್ನು ವಿದೇಶಗಳ ಜತೆ ನಡೆಸಿದ ಆರೋಪ ಹೊತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಇ.ಡಿ. ತನಿಖೆ ನಡೆಸುತ್ತಿದೆ.