ಸಾರಾಂಶ
ಹುಲಿಯೊಂದನ್ನು ಬೇಟೆಯಾಡಿ ಅದರ ಉಗುರನ್ನು ತನ್ನ ಕುತ್ತಿಗೆಯಲ್ಲಿ ಧರಿಸಿರುವುದಾಗಿ ಶಿವಸೇನಾ ಶಾಸಕ ಸಂಜಯ್ ಗಾಯಕ್‌ವಾಡ್ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಮುಂಬೈ: ಹುಲಿಯನ್ನು ಬೇಟೆಯಾಡಿ ಅದರ ಉಗುರನ್ನು ತಮ್ಮ ಕುತ್ತಿಗೆಯಲ್ಲಿ ಧರಿಸಿರುವುದಾಗಿ ಏಕನಾಥ ಶಿಂಧೆ ಬಣದ ಶಿವಸೇನಾ ಶಾಸಕ ಸಂಜಯ್ ಗಾಯಕ್‌ವಾಡ್ ಹೇಳಿದ್ದಾರೆ.
ಬುಲ್ಧಾನಾ ಕ್ಷೇತ್ರದ ಶಾಸಕರಾಗಿರುವ ಸಂಜಯ್ ಗಾಯಕ್‌ವಾಡ್ ಅವರನ್ನು ಅವರ ಕತ್ತಿನಲ್ಲಿ ಧರಿಸಿರುವ ಹುಲಿಯುಗುರಿನ ಕುರಿತು ಪ್ರಶ್ನಿಸಿದಾಗ, ‘ತಾನು 1987ರಲ್ಲಿ ಹುಲಿಯೊಂದನ್ನು ಬೇಟೆಯಾಡಿ ಕೊಂದಿದ್ದು, ಅದರ ಉಗುರನ್ನು ನಾನು ಕುತ್ತಿಗೆಯಲ್ಲಿ ಧರಿಸಿದ್ದೇನೆ’ ಎಂದು ತಿಳಿಸಿದ್ದಾರೆ.ಇದನ್ನು ಶಿವಸೇನೆಯ ಮುಖವಾಣಿಯಾಗಿರುವ ಸಾಮ್ನಾ ತನ್ನ ಆನ್‌ಲೈನ್ ಅವತರಣಿಕೆಯಲ್ಲೂ ಪ್ರಕಟಿಸಿದೆ.