ಉ.ಪ್ರ.: 25 ಸ್ಥಾನಗಳಿಗೆ ಬಿಎಸ್‌ಪಿ ಅಭ್ಯರ್ಥಿ ಘೋಷಣೆ

| Published : Mar 25 2024, 12:46 AM IST / Updated: Mar 25 2024, 03:34 PM IST

ಸಾರಾಂಶ

ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 25 ಸ್ಥಾನಗಳಿಗೆ ಮಾಯಾವತಿ ಅವರ ಬಿಎಸ್‌ಪಿ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.

ಲಕ್ನೋ: ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 25 ಸ್ಥಾನಗಳಿಗೆ ಮಾಯಾವತಿ ಅವರ ಬಿಎಸ್‌ಪಿ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.

ಸಹಾರನ್‌ಪುರದಿಂದ ಮಜೀದ್ ಅಲಿ, ಕೈರಾನಾದಿಂದ ಶ್ರೀಪಾಲ್ ಸಿಂಗ್, ಮುಜಫ್ಫರ್‌ ನಗರದಿಂದ ದಾರಾ ಸಿಂಗ್ ಪ್ರಜಾಪತಿ, ಬಿಜ್ನೋರ್‌ನಿಂದ ವಿಜಯೇಂದ್ರ ಸಿಂಗ್, ನಗೀನಾದಿಂದ ಸುರೇಂದ್ರ ಪಾಲ್ ಸಿಂಗ್, ಮೊರಾದಾಬಾದ್‌ದಿಂದ ಮೊಹಮ್ಮದ್ ಇರ್ಫಾನ್ ಸೈಫಿರನ್ನು ಕಣಕ್ಕಿಳಿಸಿದೆ.

ರಾಂಪುರದಿಂದ ಜಿಶಾನ್ ಖಾನ್, ಸಂಭಲ್‌ನಿಂದ ಶೌಲತ್ ಅಲಿ, ಅಮ್ರೋಹಾದಿಂದ ಮೊಜಾಹಿದ್ ಹುಸೇನ್, ಮೇರಠ್‌ನಿಂದ ದೇವವ್ರತ್ ತ್ಯಾಗಿ, ಬಾಗ್‌ಪತ್‌ನಿಂದ ಪ್ರವೀಣ್‌ ಬನ್ಸಲ್‌ ಅವರಿಗೆ ಟಿಕೆಟ್ ನೀಡಲಾಗಿದೆ.