ಸಾರಾಂಶ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುತ್ತಿರುವ ಚೊಚ್ಚಲ ಆವೃತ್ತಿಯ ಮಹಾರಾಣಿ ಟ್ರೋಫಿ ಟಿ20 ಟೂರ್ನಿಯ ಲೀಗ್ ಹಂತಕ್ಕೆ ತೆರೆ ಬಿದ್ದಿದೆ.
ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುತ್ತಿರುವ ಚೊಚ್ಚಲ ಆವೃತ್ತಿಯ ಮಹಾರಾಣಿ ಟ್ರೋಫಿ ಟಿ20 ಟೂರ್ನಿಯ ಲೀಗ್ ಹಂತಕ್ಕೆ ತೆರೆ ಬಿದ್ದಿದೆ. ಟೂರ್ನಿಯಲ್ಲಿ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದು, ಬೆಂಗಳೂರು ಬ್ಲಾಸ್ಟರ್ಸ್ ತಂಡ ಒಂದೂ ಗೆಲುವು ಕಾಣದೆ ಲೀಗ್ ಹಂತದಲ್ಲೇ ಹೊರಬಿತ್ತು.
ಲೀಗ್ ಹಂತದಲ್ಲಿ ಪ್ರತಿ ತಂಡಗಳು 4 ಪಂದ್ಯಗಳನ್ನಾಡಿದವು. ಮೈಸೂರು ವಾರಿಯರ್ಸ್ 4ರಲ್ಲಿ 3 ಗೆದ್ದು ಅಗ್ರಸ್ಥಾನಿಯಾದರೆ, ಹುಬ್ಬಳ್ಳಿ ಟೈಗರ್ಸ್ 2 ಪಂದ್ಯಗಳಲ್ಲಿ ಜಯಗಳಿಸಿ 2ನೇ ಸ್ಥಾನ ಪಡೆಯಿತು. ಮಂಗಳೂರು ಡ್ರ್ಯಾಗನ್ಸ್ ಕೂಡಾ 2 ಪಂದ್ಯಗಳಲ್ಲಿ ಗೆದ್ದರೂ, ನೆಟ್ ರನ್‌ರೇಟ್ ಕಡಿಮೆ ಇದ್ದಿದ್ದರಿಂದ 3ನೇ ಸ್ಥಾನಿಯಾದರೆ, ಶಿವಮೊಗ್ಗ ಲಯನ್ಸ್ ಕೇವಲ 1 ಪಂದ್ಯ ಗೆದ್ದು 4ನೇ ಸ್ಥಾನಿಯಾಗಿ ಸೆಮಿಫೈನಲ್ ತಲುಪಿತು. ಬೆಂಗಳೂರು ಆಡಿದ 4 ಪಂದ್ಯಗಳ ಪೈಕಿ 2ರಲ್ಲಿ ಸೋತರೆ, 2 ಪಂದ್ಯ ರದ್ದಾಗಿದೆ.
ಮೈಸೂರಿಗ 12 ರನ್ ಜಯ:
ಮೈಸೂರು ತಂಡ ಶುಕ್ರವಾರದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 12 ರನ್ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಮೈಸೂರು 6 ವಿಕೆಟ್‌ಗೆ 110 ರನ್ ಕಲೆಹಾಕಿತು. ರಚಿತಾ ಹತ್ವಾರ್(43 ಎಸೆತಕ್ಕೆ 57) ಅಭೂತಪೂರ್ವ ಪ್ರದರ್ಶನ ಮುಂದುವರಿಸಿದರು. ಸಿಲ್ಕಿನ್ ಪಟೇಲ್ 23 ರನ್ ಗಳಿಸಿದರು. ಬೆಂಗಳೂರಿನ ಪುಷ್ಪಾ 3 ವಿಕೆಟ್ ಕಿತ್ತರು. ಸಾಧಾರಣ ಗುರಿ ಪಡೆದರೂ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾದ ಬೆಂಗಳೂರು 9 ವಿಕೆಟ್‌ಗೆ 98 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನಾಯಕಿ ಕಂಡಿಕುಪ್ಪ ಕಾಶ್ವಿ(42 ಎಸೆತಕ್ಕೆ 48) ಏಕಾಂಗಿ ಹೋರಾಟ ವ್ಯರ್ಥವಾಯಿತು. ದೀಕ್ಷಾ ಹೊನುಶ್ರೀ 3 ವಿಕೆಟ್ ಪಡೆದರು.
ಮಂಗಳೂರಿಗೆ 2ನೇ ಜಯ:
ಶುಕ್ರವಾರದ 2ನೇ ಪಂದ್ಯದಲ್ಲಿ ಮಂಗಳೂರು ತಂಡ ಶಿವಮೊಗ್ಗ ವಿರುದ್ಧ 6 ವಿಕೆಟ್ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ 6 ವಿಕೆಟ್‌ಗೆ 113 ರನ್ ಗಳಿಸಿತು. ಲಾವನ್ಯ 39, ನಾಯಕಿ ರೋಶನಿ ಕಿರಣ್ 31 ರನ್ ಸಿಡಿಸಿದರು. ಲಿಯಾಂಕ ಶೆಟ್ಟಿ 2 ವಿಕೆಟ್ ಪಡೆದರು. ಸುಲಭ ಗುರಿ ಬೆನ್ನತ್ತಿದ ಮಂಗಳೂರು 17.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಜಯಗಳಿಸಿತು. ಇಂಚರ ಸಿ.ಯು. ಔಟಾಗದೆ 51, ನಾಯಕಿ ಪ್ರತ್ಯೂಷಾ ಕುಮಾರ್ 37 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.--ನಾಕೌಟ್ ವೇಳಾಪಟ್ಟಿಪಂದ್ಯತಂಡಗಳುದಿನಾಂಕಸಮಯ
ಸೆಮಿಫೈನಲ್ 1ಮೈಸೂರು-ಶಿವಮೊಗ್ಗಆ.9ಬೆಳಗ್ಗೆ 9.45
ಸೆಮಿಫೈನಲ್ 2ಮಂಗಳೂರು-ಹುಬ್ಬಳ್ಳಿಆ.9ಮಧ್ಯಾಹ್ನ 1.45
ಫೈನಲ್-ಆ.10ಬೆಳಗ್ಗೆ 10.00