ಪುರುಷರ ಗರ್ಭನಿರೋಧಕ ಮಾತ್ರೆ ಪ್ರಯೋಗ ಯಶಸ್ವಿ

| N/A | Published : Aug 05 2025, 06:23 AM IST

Male Contraceptive Pills

ಸಾರಾಂಶ

ಜನಸಂಖ್ಯೆ ಸ್ಫೋಟ ನಿಯಂತ್ರಣಕ್ಕೆ ಈವರೆಗೆ ಮಹಿಳೆಯರಿಗಾಗಿ ಇದ್ದ ಗರ್ಭನಿರೋಧಕ ಮಾತ್ರೆಗಳು ಗಂಡಸರಿಗೂ ಬರುವ ಕಾಲ ಸನ್ನಿಹಿತವಾಗಿದೆ

ಲಂಡನ್‌: ಜನಸಂಖ್ಯೆ ಸ್ಫೋಟ ನಿಯಂತ್ರಣಕ್ಕೆ ಈವರೆಗೆ ಮಹಿಳೆಯರಿಗಾಗಿ ಇದ್ದ ಗರ್ಭನಿರೋಧಕ ಮಾತ್ರೆಗಳು ಗಂಡಸರಿಗೂ ಬರುವ ಕಾಲ ಸನ್ನಿಹಿತವಾಗಿದೆ. ಈ ಕುರಿತ ಪ್ರಯೋಗದ ಮೊದಲ ಹಂತವು ಯಶಸ್ವಿಯಾಗಿದ್ದು, ಇನ್ನೆರಡು ಹಂತದ ಪರೀಕ್ಷೆ ನಡೆವುದು ಬಾಕಿ ಇದೆ. ಗಂಡಸರಲ್ಲಿ ವೀರ್ಯ ಉತ್ಪಾದನೆ ತಡೆವ ಮಾತ್ರೆಯ ಪರೀಕ್ಷೆಯು 16 ಜನರಲ್ಲಿ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಯಾವುದೇ ಅಡ್ಡ ಪರಿಣಾಮವಿಲ್ಲದೇ ಮೊದಲ ಹಂತ ಪಾಸಾಗಿದೆ.

ಯಾವ ರೀತಿ ಪರೀಕ್ಷೆ:

ಪುರುಷರ ಗರ್ಭನಿರೋಧಕ ಮಾತ್ರೆಯನ್ನು ‘ವೈಸಿಟಿ-529’ ಎಂದು ಹೆಸರಿಸಲಾಗಿದೆ. ಈ ಮಾತ್ರೆಯು ಪುರುಷರ ರೆಟಿನೊಯಿಕ್ ಆಮ್ಲದ ಸಂಕೇತವನ್ನು ದುರ್ಬಲಗೊಳಿಸುವ ಮೂಲಕ ವೀರ್ಯಾಣುಗಳ ಉತ್ಪಾದನೆಯನ್ನು ಕಡಿಮೆಗೊಳಿಸುತ್ತದೆ. 16 ಪುರುಷರಲ್ಲಿ ಈ ಪರೀಕ್ಷೆ ನಡೆಸಲಾಗಿದೆ. 15 ದಿನಗಳ ಕಾಲ ಅವರಿಗೆ ಊಟಕ್ಕಿಂತ ಮೊದಲು, ಊಟದ ಬಳಿಕ 10, 30, 90 ಮತ್ತು 180 ಎಂಜಿ ಮಾತ್ರೆ ಕೊಡಲಾಗಿದೆ.

ಈ ವೇಳೆ ಹಾರ್ಮೋನ್‌, ಹೃದಯ ಬಡಿತ, ಕಿಡ್ನಿ, ಯಕೃತ್‌ ಮೇಲಿನ ಪರಿಣಾಮ, ಉರಿಯೂತ , ಲೈಂಗಿಕ ಆಸಕ್ತಿ, ಜೀವಕೋಶದ ಮೇಲಿನ ಪರಿಣಾಮಗಳನ್ನು ಅಧ್ಯಯನ ನಡೆಸಲಾಗಿದೆ. ಅದರಲ್ಲಿ ಯಾವುದೇ ಅಡ್ಡ ಪರಿಣಾಮವೂ ಹೊರಹೊಮ್ಮಿಲ್ಲ ಎಂಬುದು ತಿಳಿದುಬಂದಿದೆ.

Read more Articles on