ಸಾರಾಂಶ
ಗುಣಾ: ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಯುವಕನೊಬ್ಬ ನೆರೆಮನೆಯ ಯುವತಿಯನ್ನು ಮನೆಗೆ ಎಳೆದೊಯ್ದು ಕೊಠಡಿಯಲ್ಲಿ ಕೂಡಿಹಾಕಿ ಬೆಲ್ಟ್ ಹಾಗೂ ಪೈಪ್‌ನಲ್ಲಿ ಬಲವಾಗಿ ಹೊಡೆದು ತಿಂಗಳಾದ್ಯಂತ ಅತ್ಯಾಚಾರ ಮಾಡಿದ್ದ ಘಟನೆ ಬೆಳಕಿಗೆ ಬಂದಿದೆ.
ಕಾಮುಕ ಯುವತಿಯನ್ನು ಮದುವೆಯಾಗುವ ಜೊತೆಗೆ ಆಕೆಯ ಎಲ್ಲ ಪಿತ್ರಾರ್ಜಿತ ಆಸ್ತಿಯನ್ನು ತನಗೇ ಬರೆಯುವಂತೆ ಪೀಡಿಸುತ್ತಿದ್ದ. ಒಂದು ದಿನ ಆಕೆಯ ತಾಯಿ ಬೇರೆ ಊರಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಯುವತಿಯನ್ನು ತನ್ನ ಮನೆಯ ಕೊಠಡಿಯೊಂದಕ್ಕೆ ಎಳೆದೊಯ್ದು ಕೂಡಿಹಾಕಿದ್ದಾನೆ. ಅಲ್ಲಿ ಆಕೆಗೆ ತಿಂಗಳ ಕಾಲ ದೈಹಿಕವಾಗಿ ಹಲ್ಲೆ ಮಾಡುವ ಜೊತೆಗೆ ನಿರಂತರ ಅತ್ಯಾಚಾರ ಕೂಡ ಮಾಡಿದ್ದಾನೆ. ಜೊತೆಗೆ ಯುವತಿ ಕೂಗಿಕೊಳ್ಳದಂತೆ ಬಾಯಿಗೆ ಗ್ಲೂ ಹಾಕಿ ಬಾಯಿ ಬಿಡದಂತೆ ಕಟ್ಟಿಹಾಕಿದ್ದಾನೆ.
ಜೊತೆಗೆ ತಾನು ಮಾಡಿದ್ದ ಗಾಯದ ಮೇಲೆ ಮೆಣಸಿನ ಪುಡಿಯನ್ನು ಹಾಕಿದ್ದಾನೆ. ಆದರೆ ಯುವತಿ ಹೇಗೋ ತಪ್ಪಿಸಿಕೊಂಡು ಒಂದು ರಾತ್ರಿ ಮನೆಯಿಂದ ಓಡಿಬಂದು ಹತ್ತಿರದ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಬಳಿಕ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಕಾಮುಕನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.