ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ನಡೆಸಿದ ಭರ್ಜರಿ ಕಾರ್ಯಾಚರಣೆ: ಒಂದೇ ದಿನ 28 ನಕ್ಸಲರ ಎನ್‌ಕೌಂಟರ್‌

| Published : Oct 05 2024, 07:11 AM IST

Naxals
ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ನಡೆಸಿದ ಭರ್ಜರಿ ಕಾರ್ಯಾಚರಣೆ: ಒಂದೇ ದಿನ 28 ನಕ್ಸಲರ ಎನ್‌ಕೌಂಟರ್‌
Share this Article
  • FB
  • TW
  • Linkdin
  • Email

ಸಾರಾಂಶ

ಛತ್ತೀಸ್‌ಗಢದಲ್ಲಿ ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಭರ್ಜರಿ ಕಾರ್ಯಾಚರಣೆಯೊಂದರಲ್ಲಿ 28 ನಕ್ಸಲರು ಹತರಾಗಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಒಂದೇ ಪ್ರಕರಣದಲ್ಲಿ ನಕ್ಸಲರು ಸಾವನ್ನಪ್ಪಿದ ಅತಿದೊಡ್ಡ ಘಟನೆಯಾಗಿದೆ

ದಂತೇವಾಡ : ಛತ್ತೀಸ್‌ಗಢದಲ್ಲಿ ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಭರ್ಜರಿ ಕಾರ್ಯಾಚರಣೆಯೊಂದರಲ್ಲಿ 28 ನಕ್ಸಲರು ಹತರಾಗಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಒಂದೇ ಪ್ರಕರಣದಲ್ಲಿ ನಕ್ಸಲರು ಸಾವನ್ನಪ್ಪಿದ ಅತಿದೊಡ್ಡ ಘಟನೆಯಾಗಿದೆ. ಇದರೊಂದಿಗೆ ಈ ವರ್ಷದಲ್ಲಿ ಛತ್ತೀಸ್‌ಗಢವೊಂದರಲ್ಲೇ ಬಲಿಯಾದ ನಕ್ಸಲರ ಸಂಖ್ಯೆ 185ಕ್ಕೆ ಏರಿದಂತಾಗಿದೆ. ಈ ಕಾರ್ಯಾಚರಣೆಗೆ ಭದ್ರತಾ ಪಡೆಗಳನ್ನು ಶ್ಲಾಘಿಸಿರುವ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್, 'ಇದು ನಕ್ಸಲ್ ಹಾವಳಿಯನ್ನು ಇನ್ನಿಲ್ಲವಾಗಿ ಸುವ ಡಬಲ್ ಎಂಜಿನ್ ಸರ್ಕಾರದ ಶಕ್ತಿಗೆ ಉದಾಹರಣೆ' ಎಂದಿದ್ದಾರೆ.

ಏನಾಯ್ತು?: ನಾರಾಯಣಪುರ- ದಂತೇವಾಡ ಅಂತ‌ ಜಿಲ್ಲಾ ಗಡಿಯಲ್ಲಿರುವ ಅಬುಜಮದ್ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಗಳ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಭದ್ರತಾ ಪಡೆಗಳು ಮತ್ತು ನಕ್ಸಲರ ಮುಖಾಮುಖಿಯಾಗಿ ಭಾರೀ ಗುಂಡಿನ ಚಕಮಕಿ ನಡೆದಿದೆ. ಕೆಲ ಗಂಟೆಗಳ ಬಳಿಕ ನಕಲರ ಕಡೆಯಿಂದ ಗುಂಡಿನ ದಾಳಿ ನಿಂತಿದೆ. ಈ ವೇಳೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ವೇಳೆ 28 ನಕ್ಸಲರ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದಿಂದ ಎಕೆ-47 ಬಂದೂಕು, ಎಸ್‌ಎಲ್‌ಆರ್ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಶಸ್ಸು ಸಿಕ್ಕಿದ್ದೇಗೆ?: ನಕ್ಸಲರು ಹೆಚ್ಚಿರುವ ಬಸ್ತರ್‌ಸೇರಿದಂತೆ ಪ್ರಮುಖ ಅರಣ್ಯ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ತಮ್ಮ ಕ್ಯಾಂಪ್‌ಗಳ ಪ್ರಮಾಣವನ್ನು ಈ ವರ್ಷ ಹೆಚ್ಚಿಸಿವೆ. ಹೀಗಾಗಿ ನಕಲರ ಓಡಾಟ, ಜನ ರೊಂದಿಗಿನ ನಂಟು ಕಡಿತವಾಗಿದೆ. ಜೊತೆಗೆ ಕಾಡಿನೊಳಗೆ ಮುಂಚೂಣಿ ಕ್ಯಾಂಪ್ ನಿರ್ಮಾಣದಿಂದ ಕಾರ್ಯಾಚರಣೆ ಸುಲಭವಾಗಿದೆ. ಹೀಗಾಗಿ ಈ ವರ್ಷವೊಂದರಲ್ಲೇ 185 ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ.