ಗಣಿತದ ಮೂಲ ಇಸ್ಲಾಂ’ ಎನ್ನುವ ಮೂಲಕ ಮತ್ತೊಂದು ವಿವಾದ ಹುಟ್ಟುಹಾಕಿದ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್

| N/A | Published : Mar 07 2025, 11:49 PM IST / Updated: Mar 08 2025, 05:19 AM IST

ಗಣಿತದ ಮೂಲ ಇಸ್ಲಾಂ’ ಎನ್ನುವ ಮೂಲಕ ಮತ್ತೊಂದು ವಿವಾದ ಹುಟ್ಟುಹಾಕಿದ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಟೀಕಿಸಿ ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಇದೀಗ ‘ಗಣಿತದ ಮೂಲ ಇಸ್ಲಾಂ’ ಎನ್ನುವ ಮೂಲಕ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.

ನವದೆಹಲಿ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಟೀಕಿಸಿ ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಇದೀಗ ‘ಗಣಿತದ ಮೂಲ ಇಸ್ಲಾಂ’ ಎನ್ನುವ ಮೂಲಕ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.

ರಂಜಾನ್ ತಿಂಗಳಲ್ಲಿ ಉಪವಾಸ ಆಚರಿಸದ್ದಕ್ಕಾಗಿ ವೇಗಿ ಮೊಹಮ್ಮದ್ ಶಮಿ ಅವರನ್ನು ಮುಸ್ಲಿಂ ಜಮಾತ್ ಅಧ್ಯಕ್ಷ ಶಹಾಬುದ್ದೀನ್ ರಜ್ವಿ ‘ಕ್ರಿಮಿನಲ್’ ಎಂದು ಕರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸುವ ವೇಳೆ ‘ಪ್ರಯಾಣದಲ್ಲಿರುವವರು ಉಪವಾಸ ಮಾಡಬೇಕೆಂದು ಇಸ್ಲಾಂ ಹೇಳಿಲ್ಲ. ಇಸ್ಲಾಂ ಅತ್ಯಂತ ವೈಜ್ಞಾನಿಕ ಧರ್ಮವಾಗಿದೆ. ಗಣಿತದ ಮೂಲ ಕೂಡ ಇಸ್ಲಾಂ’ ಎಂದು ಶಮಾ ಹೇಳಿಕೆ ನೀಡಿದ್ದಾರೆ .

 ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನು‘ಅಸಂಬದ್ಧ’ ಎಂದಿರುವ ಬಿಜೆಪಿ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ‘ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿಯೊಬ್ಬರೇ ಅಸಂಬದ್ಧ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಶಮಾ ನಿರ್ಧರಿಸಿದಂತಿದೆ’ ಎಂದು ಟೀಕಿಸಿದ್ದಾರೆ.