- 24 ಗಂಡೆಯಲ್ಲಿ ಒಂದೂ ಹಡಗು ಸಂಚರರಿಸಿಲ್ಲ
- ನಿರ್ಬಂಧ ತೆರವಾಗದಿದ್ರೆ ವಿನಾಶ: ಇರಾನ್--
- ಹೋರ್ಮುಜ್ ಜಲಸಂಧಿ ಮೇಲೆ ಈಗ ನಮ್ಮ ಸಂಪೂರ್ಣ ಹಿಡಿತ: ಅಮೆರಿಕ- ಜಲಸಂಧಿ ದಾಟಲು ಬಂದ 6 ಹಡಗು ವಾಪಸು ಕಳಿಸಿದ ಅಮೆರಿಕ ಪಡೆಗಳು
- ಅಮೆರಿಕದ ನಡೆಯಿಂದ ಇರಾನ್ ಬಂದರಲ್ಲಿ ನಿಂತಲ್ಲೇ ನಿಂತ ಹಡಗುಗಳು
- ಟ್ರಂಪ್‌ರ ಈ ನಿರ್ಬಂಧದಿಂದ ಇರಾನ್‌ಗೆ ತೀವ್ರ ಆರ್ಥಿಕ ಸಂಕಷ್ಟ ಸಾಧ್ಯತೆ
- ಇದೇ ವೇಳೆ ಇರಾನ್‌ನತ್ತ ಮತ್ತೆ 10 ಸಾವಿರ ಅಮೆರಿಕ ಯೋಧರ ರವಾನೆ- ಹೋರ್ಮುಜ್ ಬಿಕ್ಕಟ್ಟು ಉಲ್ಬಣಿಸಿದರೆ ಭೂದಾಳಿ ಸಂಭವ ಎಂಬ ಗುಸುಗುಸು
-- =ವಾಷಿಂಗ್ಟನ್: ಹೋರ್ಮುಜ್ ಜಲಸಂಧಿಯನ್ನು ವಿಶ್ವದ ಎಲ್ಲಾ ದೇಶಗಳಿಗೂ ಮುಕ್ತ ಮಾಡುವ ನಿಟ್ಟಿನಲ್ಲಿ ತಾನು ಘೋಷಿಸಿದ್ದ ಹೋರ್ಮುಜ್ ನಿರ್ಬಂಧ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆ. ಇಡೀ ವಲಯ ನಮ್ಮ ತೆಕ್ಕೆಯಲ್ಲಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಜಲಸಂಧಿಯನ್ನು ಯಾವುದೇ ಹಡಗುಗಳು ಕೂಡಾ ದಾಟಿಲ್ಲ. ಜಲಸಂಧಿ ದಾಟಲು ಬಂದಿದ್ದ 6 ಹಡಗುಗಳಿಗೆ ಎಚ್ಚರಿಕೆ ನೀಡಿದ ಬಳಿಕ ಅವು ಮರಳಿ ಇರಾನ್ ಜಲಸೀಮೆಗೆ ಮರಳಿವೆ ಎಂದು ಅಮೆರಿಕ ಹೇಳಿದೆ.ಈ ನಡುವೆ ಅಮೆರಿಕದ ಈ ಕ್ರಮದ ವಿರುದ್ಧ ಕೆಂಡಾಮಂಡಲವಾಗಿರುವ ಇರಾನ್, ‘ಅಮೆರಿಕದ ಈ ನಡೆ ಕದನವಿರಾಮದ ಅಂಶಗಳಿಗೆ ವಿರುದ್ಧವಾಗಿದೆ. ಇದನ್ನು ತಕ್ಷಣವೇ ತೆಗೆಯದೇ ಹೋದರೆ, ಇಡೀ ಪರ್ಷಿಯನ್ ಕೊಲ್ಲಿ ಪ್ರದೇಶ, ಕೆಂಪು ಸಮುದ್ರ, ಒಮಾನ್ ಸಮುದ್ರ ತೀರದಲ್ಲಿನ ಎಲ್ಲಾ ರೀತಿಯ ಸರಕು ಸಂಚಾರವನ್ನೇ ಬಂದ್ ಮಾಡುವುದಾಗಿ ಇರಾನ್ ಎಚ್ಚರಿಸಿದೆ.
ಹೆಚ್ಚುವರಿ ಯೋಧರು:ಈ ನಡುವೆ ಇರಾನ್ ಜೊತೆಗೆ ಒಂದೆರೆಡು ದಿನಗಳಲ್ಲೇ ಮತ್ತೆ ಸಂಧಾನ ಸಭೆಯ ಸುಳಿವು ನೀಡಿದ್ದ ಅಧ್ಯಕ್ಷ ಟ್ರಂಪ್, ಅದರ ನಡುವೆಯೇ ಮಧ್ಯಪ್ರಾಚ್ಯಕ್ಕೆ ಮತ್ತೆ 10000 ಯೋಧರನ್ನು ಕಳುಹಿಸಿಕೊಟ್ಟಿದ್ದಾರೆ. ಇದು ಇರಾನ್ ಮೇಲೆ ಅಮೆರಿಕ ಭೂದಾಳಿಗೆ ಸಿದ್ಧತೆ ನಡೆಸುತ್ತಿರುವ ಅನುಮಾನ ಹುಟ್ಟುಹಾಕಿದೆ.
ಇರಾನ್‌ಗೆ ಬಂದ್:ಹೋರ್ಮುಜ್ ಜಲಸಂಧಿಯನ್ನು ಇರಾನ್‌ನ ಬಂದರಿನಿಂದ ಬರುವ ಮತ್ತು ಇರಾನ್ ಬಂದಿಗೆ ಹೋಗುವ ಹಡಗುಗಳಿಗೆ ಮುಚ್ಚಲಾಗುವುದು ಎಂದು ಅಮೆರಿಕ ಘೋಷಿಸಿತ್ತು. ಈ ಮೂಲಕ ಇರಾನ್ ದೇಶವನ್ನು ಆರ್ಥಿಕವಾಗಿ ಕಟ್ಟಿಹಾಕುವ ಯೋಜನೆ ರೂಪಿಸಿದೆ. ಆದರೆ ಇರಾನ್‌ಗೆ ಯಾವುದೇ ಹಡಗೂ ತೆರಳುವಂತಿಲ್ಲ ಎಂದು ಘೋಷಿಸಿರುವ ಕಾರಣ ವಿವಿಧ ದೇಶಗಳ ಸರಕು ಹೊತ್ತ ಹಡಗುಗಳು ಕೂಡಾ ಸಮುದ್ರದಲ್ಲೇ ನಿಲ್ಲುವಂತೆ ಆಗಿದೆ.
