ಫೆಮಾ ಕೇಸಲ್ಲಿ ಮಹುವಾ ಮೊಯಿತ್ರಾಗೆ ಇ.ಡಿ. ಸಮನ್ಸ್‌

| Published : Feb 16 2024, 01:55 AM IST / Updated: Feb 16 2024, 08:46 AM IST

ಸಾರಾಂಶ

ಫೆಮಾ ಪ್ರಕರಣದಲ್ಲಿ ವಿಚಾರಣೆಗೆ ಫೆ.19ರಂದು ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಮಹುವಾ ಮೊಯಿತ್ರಾ ಅವರಿಗೆ ಸೂಚನೆ ನೀಡಿದೆ.

ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ತನಿಖೆ ಎದುರಿಸುತ್ತಿರುವ ಟಿಎಂಸಿ ಮಾಜಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಫೆ.19ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಸಮನ್ಸ್‌ ನೀಡಿದೆ. ಅಂದು ಅಕ್ರಮ ವಿದೇಶಿ ವಿನಿಮಯಕ್ಕೆ ಸಂಬಂಧಿಸಿದಂತೆ ಮಹುವಾ ಮೊಯಿತ್ರಾ ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗುವುದು ಎಂದು ಇಡಿ ಮೂಲಗಳು ತಿಳಿಸಿವೆ.

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಉದ್ಯಮಿ ದರ್ಶನ್‌ ಹಿರಾನಂದಾನಿ ಅವರಿಂದ ಲಂಚ ಪಡೆದ ಆರೋಪ ಎದುರಿಸುತ್ತಿರುವ ಮಹುವಾ ಮೊಯಿತ್ರಾ ಅವರನ್ನು ಸಿಬಿಐ ಈಗಾಗಲೇ ವಿಚಾರಣೆ ನಡೆಸುತ್ತಿದೆ.