ಸಾರಾಂಶ
ನವದೆಹಲಿ: ಭಾರತದ ಈಶಾನ್ಯ ಭಾಗದ ಪುಟ್ಟ ರಾಜ್ಯ ಮಿಜೋರಂ ಇದೀಗ ದೇಶದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ಶೇ.98.2ರಷ್ಟು ಮಂದಿ ಓದಲು, ಬರೆಯಲು ಕಲಿತಿದ್ದಾರೆ!
ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ಅವರ ಉಪಸ್ಥಿತಿಯಲ್ಲಿ ಮಿಜೋರಂ ವಿವಿಯಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಲಾಲ್ದುಹೊಮಾ ಅವರು ಮಿಜೋರಂ ಸಂಪೂರ್ಣ ಸಾಕ್ಷರ ರಾಜ್ಯ ಎಂಬ ಘೋಷಣೆ ಮಾಡಿದರು.
ದೇಶದಲ್ಲೇ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಟಾಪ್ 10 ರಾಜ್ಯಗಳು ಮತ್ತು ಕೇಂದ್ರಾಡಳಿತಗಳ ಪಟ್ಟಿಯಲ್ಲಿ ಮಿಜೋರಂ, ನಾಗಾಲ್ಯಾಂಡ್, ಮಣಿಪುರ ಮತ್ತು ತ್ರಿಪುರ ಹೀಗೆ ಐದು ಈಶಾನ್ಯ ರಾಜ್ಯಗಳು ಸ್ಥಾನ ಪಡೆದಿವೆ. 2011ರ ಜನಗಣತಿ ಪ್ರಕಾರ ಮಿಜೋರಾಂನ ಸಾಕ್ಷರತೆ ಪ್ರಮಾಣ ಶೇ.91.33ರಷ್ಟಿತ್ತು.
ಶಿಕ್ಷಕರು, ವಿದ್ಯಾರ್ಥಿಗಳು, ಸಂಪನ್ಮೂಲ ಅಧಿಕಾರಿಗಳು ಸೇರಿ 292 ಸ್ವಯಂ ಸೇವಕ ಶಿಕ್ಷಕರು ಮತ್ತು ಕ್ಲಸ್ಟರ್ ಸಂಪನ್ಮೂಲ ಕೇಂದ್ರ ಸಮನ್ವಯಕಾರರು ಸೇರಿಕೊಂಡು ಇವರಿಗೆ ಶಿಕ್ಷಣ ನೀಡುವ ಕೆಲಸ ಮಾಡಿದರು. ಇದರ ಪರಿಣಾಮವಾಗಿ ಇದೀಗ ಮಿಜೋರಾಂ ಸಂಪೂರ್ಣ ಸಾಕ್ಷರ ರಾಜ್ಯವಾಗಿ ಪರಿವರ್ತನೆಯಾಗಿದೆ. ದೇಶದ ಟಾಪ್ 10 ಸಾಕ್ಷರ ರಾಜ್ಯ/ಕೇಂದ್ರಾಡಳಿತ ಪ್ರದೇಸರಾಜ್ಯ/ಕೇಂದ್ರಾಡಳಿತ ಪ್ರದೇಶಸಾಕ್ಷರತೆ ಪ್ರಮಾಣ
1 ಮಿಜೋರಂ-ಶೇ.98.2
2 ಲಕ್ಷದ್ವೀಪ-ಶೇ.97.3%
3 ನಾಗಾಲ್ಯಾಂಡ್-ಶೇ.95.7%4 ಕೇರಳ-ಶೇ95.3%5 ಮೇಘಾಲಯ-ಶೇ.94.2%6 ತ್ರಿಪುರಾ-ಶೇ.93.7%6 ಚಂಡೀಗಢ-ಶೇ.93.7%8 ಗೋವಾ-ಶೇ.93.6%9 ಪುದುಚೇರಿ-ಶೇ.92.7%10 ಮಣಿಪುರ- ಶೇ.92%
ಸ್ತ್ರೀ ನಿಂದನೆ ಪೋಸ್ಟ್ ತೆಗೆಯಿರಿ: ವಿಶ್ಲೇಷಕ ಅಯ್ಯರ್‌ಗೆ ದೆಹಲಿ ಹೈ ಚಾಟಿ
ನವದೆಹಲಿ: ಮಾಧ್ಯಮ ಸಂಸ್ಥೆಯಾದ ನ್ಯೂಸ್‌ಲಾಂಡ್ರಿ ಪತ್ರಕರ್ತೆಯರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಮತ್ತು ನಿಂದನೀಯ ಪೋಸ್ಟ್ ಹಾಕಿದ್ದ ರಾಜಕೀಯ ವಿಶ್ಲೇಷಕ ಅಭಿಜಿತ್ ಅಯ್ಯರ್ ಮಿತ್ರಾ ಅವರಿಗೆ ದೆಹಲಿಯ ಹೈಕೋರ್ಟ್ ಬುಧವಾರ ಚಾಟಿ ಬೀಸಿದ್ದು, ಪೋಸ್ಟ್‌ಗಳನ್ನು ತೆಗೆದುಹಾಕಲು 5 ಗಂಟೆ ಗಡುವು ನೀಡಿದೆ.ತಮ್ಮ ಬಗ್ಗೆ ಮಿತ್ರಾ ಎಕ್ಸ್‌ನಲ್ಲಿ ಮಾನನಷ್ಟಕರ, ಸುಳ್ಳು, ದುರುದ್ದೇಶಪೂರಿತ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದ 9 ಪತ್ರಕರ್ತೆಯರು, ತಡೆಯಾಜ್ಞೆ ಮತ್ತು 2 ಕೋಟಿ ರು. ಪರಿಹಾರ ಕೋರಿ ಹೈ ಕೋರ್ಟ್ ಮೊರೆ ಹೋಗಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾ। ಪುರುಷೀಂದ್ರ ಕುಮಾರ್ ಕೌರವ್, ‘ನಾಗರಿಕ ಸಮಾಜದಲ್ಲಿ ಇಂತಹ ಭಾಷೆ ಮತ್ತು ಪದಗಳ ಬಳಕೆಯನ್ನು ಅನುಮತಿಸಲಾಗುವುದಿಲ್ಲ. ಪೋಸ್ಟ್ ತೆಗೆದುಹಾಕಿದ ಬಳಿಕವೇ ನಿಮ್ಮ ವಾದವನ್ನು ಆಲಿಸುತ್ತೇವೆ’ ಎಂದು ಖಾರವಾಗಿ ನಿರ್ದೇಶಿಸಿದ್ದರು.ಇದರ ಬೆನ್ನಲ್ಲೇ, ಮಿತ್ರಾ ಪೋಸ್ಟ್‌ಗಳನ್ನು ತೆಗೆಯುವ ಭರವಸೆ ನೀಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ಮೇ 26ಕ್ಕೆ ನಿಗದಿಪಡಿಸಲಾಗಿದೆ.
ನ್ಯಾ। ವರ್ಮಾ ವಿರುದ್ಧ ಎಫ್‌ಐಆರ್ ಕೋರಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ
ನವದೆಹಲಿ: ದಿಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾ। ಯಶವಂತ್ ವರ್ಮಾ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.ನ್ಯಾ। ವರ್ಮಾ ನಿವಾಸದಲ್ಲಿ ಹಣ ಪತ್ತೆ ಸುಪ್ರೀಂ ಕೋರ್ಟ್ ನೇಮಿಸಿದ್ದ ತ್ರಿಸದಸ್ಯ ತನಿಖಾ ಸಂಸ್ಥೆಯ ವರದಿಯಲ್ಲಿ ದೃಢವಾಗಿತ್ತು. ಈ ಸಂಬಂಧ ಮಾಜಿ ಸಿಜೆಐ ಸಂಜೀವ್ ಖನ್ನಾ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ವಾಗ್ದಂಡನೆಗೆ ಕೋರಿದ್ದರು.ಇದನ್ನು ಪ್ರಸ್ತಾಪಿಸಿದ ನ್ಯಾ। ಅಭಯ್ ಓಕಾ ಹಾಗೂ ಉಜ್ಜಲ್ ಭುಯಾನ್ ಅವರ ಪೀಠ, ‘ಈಗಾಗಲೇ ರಾಷ್ಟ್ರಪತಿ ಹಾಗೂ ಪ್ರಧಾನಿಗೆ ತನಿಖಾ ವರದಿ ಸಲ್ಲಿಸಲಾಗಿದೆ. ಅಲ್ಲಿ ನೀವು ದೂರು ನೀಡಬಹುದು’ ಎಂದು ಹೇಳಿ ಅರ್ಜಿ ವಜಾಗೊಳಿಸಿತು.
ನವದೆಹಲಿ: ದಿಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾ। ಯಶವಂತ್ ವರ್ಮಾ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ರಾಗಾ, ಕಾಂಗ್ರೆಸ್ ಅವಹೇಳನ: ಮಾಳವೀಯ, ಗೋಸ್ವಾಮಿ ವಿರುದ್ಧ ಕ್ರಮಕ್ಕೆ ಕೈ ಆಗ್ರಹ
ನವದೆಹಲಿ: ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ ಅವಹೇಳನ ಮಾಡಿದ ಪತ್ರಕರ್ತ ಅರ್ನಬ್ ಗೋಸ್ವಾಮಿ ಮತ್ತು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರ ವಿರುದ್ಧ ಕಠಿಣ ಕ್ರಮಕ್ಕೆ ಕಾಂಗ್ರೆಸ್ ಆಗ್ರಹಿಸಿದೆ.ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಗೋಸ್ವಾಮಿ ಮತ್ತು ಮಾಳವೀಯ ಅವರ ದುರುದ್ದೇಶಪೂರಿತ ಕೆಸದಿಂದ ರಾಷ್ಟ್ರಕ್ಕೆ ಉಂಟಾದ ಹಾನಿಯನ್ನು ನ್ಯಾಯಾಲಯ ಪರಿಶೀಲಿಸಬೇಕು’ ಎಂದಿದ್ದಾರೆ. ಈಗಾಗಲೇ ಬೆಂಗಳೂರು ಹಾಗೂ ದಿಲ್ಲಿಯಲ್ಲಿ ಇವರ ವಿರುದ್ಧ ಪಕ್ಷ ಪ್ರಕರಣ ದಾಖಲಿಸಿದೆ.‘ಕಾಂಗ್ರೆ’ ಎಂದು ಬರೆಯಲಾಗಿದ್ದ ಟರ್ಕಿಯ ಕಟ್ಟಡವೊಂದನ್ನು ಅಲ್ಲಿನ ಕಾಂಗ್ರೆಸ್ ಕಚೇರಿ ಎಂದು ಬಿಂಬಿಸಿ, ಅದನ್ನು ರಾಜಕೀಯ ದ್ವೇಷ ಹರಡಲು ಬಳಸಲಾಗುತ್ತಿತ್ತೆಂದು ರಿಪಬ್ಲಿಕ್ ಟಿವಿ ವರದಿ ಮಾಡಿತ್ತು ಎನ್ನಲಾಗಿದೆ.
ಇದರ ಬೆನ್ನಲ್ಲೇ, ಅದರ ಸಂಪಾದಕರಾದ ಗೋಸ್ವಾಮಿ ಮತ್ತು ಬಿಜೆಪಿಯ ಮಾಳವೀಯ ಅವರ ವಿರುದ್ಧ ವಿವಿಧೆಡೆಗಳಲ್ಲಿ ಹಲವು ದೂರುಗಳು ದಾಖಲಾಗಿದ್ದವು. ಬಳಿಕ ರಿಪಬ್ಲಿಕ್ ಟೀವಿ ಕೂಡ ಯಾಚಿಸಿತ್ತು.ನ್ಯಾ। ವರ್ಮಾ ನಿವಾಸದಲ್ಲಿ ಹಣ ಪತ್ತೆ ಸುಪ್ರೀಂ ಕೋರ್ಟ್ ನೇಮಿಸಿದ್ದ ತ್ರಿಸದಸ್ಯ ತನಿಖಾ ಸಂಸ್ಥೆಯ ವರದಿಯಲ್ಲಿ ದೃಢವಾಗಿತ್ತು.
ಈ ಸಂಬಂಧ ಮಾಜಿ ಸಿಜೆಐ ಸಂಜೀವ್ ಖನ್ನಾ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ವಾಗ್ದಂಡನೆಗೆ ಕೋರಿದ್ದರು.ಇದನ್ನು ಪ್ರಸ್ತಾಪಿಸಿದ ನ್ಯಾ। ಅಭಯ್ ಓಕಾ ಹಾಗೂ ಉಜ್ಜಲ್ ಭುಯಾನ್ ಅವರ ಪೀಠ, ‘ಈಗಾಗಲೇ ರಾಷ್ಟ್ರಪತಿ ಹಾಗೂ ಪ್ರಧಾನಿಗೆ ತನಿಖಾ ವರದಿ ಸಲ್ಲಿಸಲಾಗಿದೆ. ಅಲ್ಲಿ ನೀವು ದೂರು ನೀಡಬಹುದು’ ಎಂದು ಹೇಳಿ ಅರ್ಜಿ ವಜಾಗೊಳಿಸಿತು.
ಕ। ಖುರೇಷಿ ಟೀಕಿಸಿದ್ದ ಪ್ರಾಧ್ಯಾಪಕರಿಗೆ ಮಧ್ಯಂತರ ಜಾಮೀನು
- 24 ತಾಸಲ್ಲಿ ತನಿಖೆ ಪೂರ್ಣಗೊಳಿಸಲು ಎಸ್‌ಐಟಿ ರಚನೆನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆಯ ಕುರಿತ ಕ। ಸೋಫಿಯಾ ಖುರೇಷಿ ಸುದ್ದಿಗೋಷ್ಠಿ ಬೂಟಾಟಿಕೆಯದ್ದು ಪೋಸ್ಟ್ ಹಾಕಿ ಬಂಧನಕ್ಕೊಳಗಾಗಿದ್ದ ಅಶೋಕ್ ವಿವಿಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಅಲಿ ಖಾನ್ ಮಹ್ಮದಾಬಾದ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.ಆದರೆ ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿದ್ದು, ಐಜಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಎಸ್ಪಿ ದರ್ಜೆಯ ಮಹಿಳಾ ಅಧಿಕಾರಿಯನ್ನೊಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದು, 24 ಗಂಟೆಯಲ್ಲಿ ತನಿಖೆ ಪೂರ್ಣಗೊಳಿಸುವಂತೆ ಆದೇಶಿಸಿದೆ. ಜಾಮೀನು ನೀಡಿದರೂ ಕೂಡ, ಅಲಿ ಖಾನ್ ಬಳಸಿದ ಪದಗಳ ಆಯ್ಕೆಯನ್ನು ಪ್ರಶ್ನಿಸಿದೆ ಹಾಗೂ ಮುಂದೆ ಭಾರತ-ಪಾಕ್ ಕದನದ ಬಗಗೆ ಯಾವುದೇ ಪೋಸ್ಟ್ ಹಾಕದೇ ತನಿಖೆಗೆ ಸಹಕರಿಸುವಂತೆ ಸೂಚಿಸಿದೆ.