ಪಿಒಕೆ ಮರುವಶಕ್ಕೆ ಮೋಹನ್‌ ಭಾಗವತ್‌ ಕರೆ

| N/A | Published : Oct 06 2025, 01:01 AM IST

ಸಾರಾಂಶ

ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಅನ್ನು ಭಾರತ ಎಂಬ ಮನೆಯೊಳಗಿನ ಕೋಣೆ ಇದ್ದಂತೆ. ಆದರೆ ಅಪರಿಚಿತರು ಒಳಗೆ ಬಂದಿದ್ದಾರೆ. ಆ ಕೊಠಡಿಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

 ಸತ್ನಾ (ಮ.ಪ್ರ.): ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಅನ್ನು ಭಾರತ ಎಂಬ ಮನೆಯೊಳಗಿನ ಕೋಣೆ ಇದ್ದಂತೆ. ಆದರೆ ಅಪರಿಚಿತರು ಒಳಗೆ ಬಂದಿದ್ದಾರೆ. ಆ ಕೊಠಡಿಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಮಧ್ಯಪ್ರದೇಶದ ಸತ್ನಾದಲ್ಲಿ ಸಿಂಧಿ ಜನಾಂಗದ ಸಭೆಯಲ್ಲಿ ಮಾತನಾಡಿದ ಅವರು, ‘ಇಡೀ ಭಾರತ ಒಂದೇ ಮನೆ, ಆದರೆ ಯಾರೋ ನಮ್ಮ ಮನೆಯ ಒಂದು ಕೋಣೆಯನ್ನು ಮನೆಯಿಂದ ಬೇರ್ಪಡಿಸಿದ್ದಾರೆ. ಅಲ್ಲಿ ನನ್ನ ಮೇಜು, ಕುರ್ಚಿ ಮತ್ತು ಬಟ್ಟೆಗಳನ್ನು ಇಡಲಾಗುತ್ತಿತ್ತು. ಅವರು (ಪಾಕ್‌) ಅದನ್ನು ಆಕ್ರಮಿಸಿಕೊಂಡಿದ್ದಾರೆ. ನಾಳೆ, ನಾನು ಅದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು’ ಎಂದು ಕರತಾಡನದ ಮಧ್ಯೆ ಹೇಳಿದರು.

‘ಸಭೆಗೆ ಅನೇಕ ಸಿಂಧಿ ಸಹೋದರರು ಕುಳಿತಿದ್ದಾರೆ. ನನಗೆ ತುಂಬಾ ಸಂತೋಷವಾಗಿದೆ. ಅವರು ಪಾಕಿಸ್ತಾನಕ್ಕೆ ಹೋಗಲಿಲ್ಲ. ಅವರು ಅವಿಭಜಿತ ಭಾರತಕ್ಕೆ ಬಂದರು. ಪರಿಸ್ಥಿತಿಯ ವೈಪರಿತ್ಯದ ಕಾರಣ ಅವರು ಈ ಮನೆಗೆ ಆಗಮಿಸಿದರು. ಏಕೆಮದರೆ ಇದೂ ಅವರದ್ದೇ ಮನೆ’ ಎಂದೂ ಹಳೆಯ ಮೆಲುಕು ಹಾಕಿದರು.

Read more Articles on