ಮುಂದಿನ ತಿಂಗಳಿಂದ ದೇಶವ್ಯಾಪಿ ಮತಪಟ್ಟಿ ಪರಿಷ್ಕಕರಣೆ ಆರಂಭ?

| Published : Sep 11 2025, 12:04 AM IST

ಮುಂದಿನ ತಿಂಗಳಿಂದ ದೇಶವ್ಯಾಪಿ ಮತಪಟ್ಟಿ ಪರಿಷ್ಕಕರಣೆ ಆರಂಭ?
Share this Article
  • FB
  • TW
  • Linkdin
  • Email

ಸಾರಾಂಶ

ಬಿಹಾರದಲ್ಲಿ ಜೂನ್‌ನಲ್ಲಿ ಶುರುವಾಗಿ ಭಾರಿ ವಿವಾದದ ಅಲೆ ಸೃಷ್ಟಿ ಮಾಡಿದ್ದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ (ಎಸ್ಐಆರ್), ಅಕ್ಟೋಬರ್‌ನಿಂದ ದೇಶವ್ಯಾಪಿಯಾಗಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಚುನಾವಣಾ ಆಯೋಗದ ಮೂಲಗಳು ಮಾಹಿತಿ ನೀಡಿವೆ.

ಬಿಹಾರದ ರೀತಿ ಎಲ್ಲಾ ರಾಜ್ಯಗಳಲ್ಲಿ ಪರಿಷ್ಕರಣೆ

ಅನರ್ಹರನ್ನು ಮತಪಟ್ಟಿಯಿಂದ ತೆಗೆಯುವ ಉದ್ದೇಶ

ನವದೆಹಲಿ: ಬಿಹಾರದಲ್ಲಿ ಜೂನ್‌ನಲ್ಲಿ ಶುರುವಾಗಿ ಭಾರಿ ವಿವಾದದ ಅಲೆ ಸೃಷ್ಟಿ ಮಾಡಿದ್ದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ (ಎಸ್ಐಆರ್), ಅಕ್ಟೋಬರ್‌ನಿಂದ ದೇಶವ್ಯಾಪಿಯಾಗಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಚುನಾವಣಾ ಆಯೋಗದ ಮೂಲಗಳು ಮಾಹಿತಿ ನೀಡಿವೆ.

ಈ ಸಂಬಂಧ ಬುಧವಾರ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳ ಸಭೆ ನಡೆದಿದ್ದು, ಅದರಲ್ಲಿ ದೇಶವ್ಯಾಪಿ ಮತಪಟ್ಟಿ ಪರಿಷ್ಕರಣೆಯ ತಯಾರಿಯ ಬಗ್ಗೆ ಚರ್ಚಿಸಲಾಗಿದೆ. ಪರಿಶೀಲನೆಗೆ ಪರಿಗಣಿಸಬಹುದಾದ ದಾಖಲೆಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಚುನಾವಣಾ ಆಯೋಗವು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದೆ. ಸೆಪ್ಟೆಂಬರ್‌ ಅಂತ್ಯದೊಳಗೆ ಆರಂಭಿಕ ಕೆಲಸಗಳೆಲ್ಲಾ ಮುಗಿದು, ಅಕ್ಟೋಬರ್‌ನಲ್ಲಿ ಪ್ರಕ್ರಿಯೆ ಆರಂಭಿಸಬಹುದು ಎಂದು ಬಹುತೇಕ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಮೃತಪಟ್ಟವರು, ಸ್ಥಳಾಂತರ ಗೊಂಡವರು, ನಕಲಿ ದಾಖಲೆ ಹೊಂದಿರುವವರು, ಭಾರತದ ನಿವಾಸಿಗಳು ಅಲ್ಲದವರು ಸೇರಿದಂತೆ ಅನರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಅದರ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ.

ಹಲವು ವಿರೋಧ, ಗೊಂದಲಗಳ ನಡುವೆಯೂ ಬಿಹಾರದಲ್ಲಿ ಈ ಪ್ರಕ್ರಿಯೆ ಯಶಸ್ಸು ಕಾಣುತ್ತಿದೆ. ವಿಪಕ್ಷಗಳು, ಈ ಪ್ರಕ್ರಿಯೆ ವಿರೋಧಿಸಿದ್ದು, ವಿಪಕ್ಷಗಳ ಪರ ಮತದಾರರನ್ನು ತೆಗೆದು ಹಾಕುವ ದುರುದ್ಧೇಶ ಇದೆ ಎಂದು ಆರೋಪಿಸುತ್ತಿವೆ. ಸುಪ್ರೀಂ ಕೋರ್ಟಲ್ಲಿ ಈ ಕುರಿತು ವಿಚಾರಣೆ ಕೂಡ ನಡೆಯುತ್ತಿದೆ.