ದೇಶದಲ್ಲಿ ಹಾಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.10ರಷ್ಟಿರುವ ಹಿರಿಯ ನಾಗರಿಕರ ಸಂಖ್ಯೆ 2050ರ ವೇಳೆಗೆ ಶೇ.20ಕ್ಕೆ ತಲುಪಬಹುದು ಎಂಬ ಅಂಶಗವನ್ನು ಗಂಭೀರವಾಗಿ ಪರಿಗಣಿಸಿರುವ ನೀತಿ ಆಯೋಗ ಅವರ ಅಭ್ಯುದಯ ಸಂಬಂಧ ಕೇಂದ್ರ ಸರ್ಕಾರಕ್ಕೆ ಹಲವು ಶಿಫಾರಸು ಮಾಡಿದೆ.

ನವದೆಹಲಿ: ದೇಶದಲ್ಲಿ ಹಾಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.10ರಷ್ಟಿರುವ ಹಿರಿಯ ನಾಗರಿಕರ ಸಂಖ್ಯೆ 2050ರ ವೇಳೆಗೆ ಶೇ.20ಕ್ಕೆ ತಲುಪಬಹುದು ಎಂಬ ಅಂಶಗವನ್ನು ಗಂಭೀರವಾಗಿ ಪರಿಗಣಿಸಿರುವ ನೀತಿ ಆಯೋಗ ಅವರ ಅಭ್ಯುದಯ ಸಂಬಂಧ ಕೇಂದ್ರ ಸರ್ಕಾರಕ್ಕೆ ಹಲವು ಶಿಫಾರಸು ಮಾಡಿದೆ.

ದೇಶದಲ್ಲಿ ಸಾಮಾಜಿಕ ಭದ್ರತಾ ಚೌಕಟ್ಟು ಸೀಮಿತವಾಗಿರುವ ಕಾರಣ ಹಿರಿಯ ನಾಗರಿಕರ ಕಲ್ಯಾಣಕ್ಕೆ ಒಂದಿಷ್ಟು ಹೊಸ ನೀತಿ ರೂಪಿಸಬೇಕು ಎಂದು ಆಯೋಗ ಸಲಹೆ ನೀಡಿದೆ.

ಏನೇನು ಶಿಫಾರಸು?

  • ಹಿರಿಯ ನಾಗರಿಕರ ಸೇವೆಗೆ ರಾಷ್ಟ್ರೀಯ ಪೋರ್ಟಲ್ ಸ್ಥಾಪಿಸಿ, ಅದರಲ್ಲಿ ಅವರಿಗೆ ಎಲ್ಲಾ ಸೇವೆಗಳು ಲಭ್ಯವಾಗುವಂತೆ ಮಾಡಬೇಕು. 
  • ಹಿರಿಯರು ಠೇವಣಿಗಳ ಬಡ್ಡಿ ಮೇಲೆ ಅವಲಂಬಿತರಾಗಿರುವ ಕಾರಣ ಅವರಿಗೆ ಹೆಚ್ಚಿನ ಬಡ್ಡಿ ನೀಡಬೇಕು. 
  • ಮಹಿಳೆಯರಿಗೆ ರಿಯಾಯಿತಿ, ವಿನಾಯಿತಿ ನೀಡಬೇಕು. ರಿವರ್ಸ್ ಮಾರ್ಟ್ಗೇಜ್ ಕಾರ್ಯವಿಧಾನದ ಮರುಮೌಲ್ಯಮಾಪನ ಮಾಡಬೇಕು.
  • ಹಿರಿಯರ ಆರೈಕೆ ಉತ್ಪನ್ನಗಳ ಮೇಲೆ ಕಡಿಮೆ ಜಿಎಸ್‌ಟಿ ವಿಧಿಸಬೇಕು. 
  • ಖಾಸಗಿ ಸಹಭಾಗಿತ್ವದೊಂದಿಗೆ ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವುದನ್ನು ಖಚಿತಪಡಿಸಬೇಕು ಎಂದು ಆಯೋಗ ಸಲಹೆ ನೀಡಿದೆ.