ಎನ್‌ಡಿಎ ಜೊತೆ ನನ್ನ ಸಂಬಂಧ ಶಾಶ್ವತ: ಮೋದಿಗೆ ನಿತೀಶ್‌ ಅಭಯ

| Published : Mar 03 2024, 01:35 AM IST

ಎನ್‌ಡಿಎ ಜೊತೆ ನನ್ನ ಸಂಬಂಧ ಶಾಶ್ವತ: ಮೋದಿಗೆ ನಿತೀಶ್‌ ಅಭಯ
Share this Article
  • FB
  • TW
  • Linkdin
  • Email

ಸಾರಾಂಶ

ಎನ್‌ಡಿಎ ಜೊತೆಗೆ ತಮ್ಮ ಸಂಬಂಧ ಶಾಶ್ವತವಾಗಿ ಮುಂದುವರೆಯಲಿದೆ ಎಂದು ಪ್ರಧಾನಿ ಮೋದಿ ಎದುರಿನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪುನರುಚ್ಚರಿಸಿದ್ದಾರೆ.

ಔರಂಗಾಬಾದ್‌ (ಬಿಹಾರ): ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಜೊತೆಗೆ ತಮ್ಮ ಸಂಬಂಧ ಶಾಶ್ವತವಾಗಿರಲಿದೆ ಎಂಬುದಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಪ್ರಧಾನಿ ನರೇಂದ್ರ ಮೋದಿಗೆ ವಾಗ್ದಾನ ನೀಡಿದರು. ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ಮೋದಿ ಸಮ್ಮುಖ ಮಾತನಾಡಿದ ನಿತೀಶ್‌, ‘ಪ್ರಧಾನಿ ಮೋದಿಯವರನ್ನು ಬಿಹಾರಕ್ಕೆ ಸ್ವಾಗತಿಸುವೆ. ಬಿಜೆಪಿ ಜೊತೆಗೆ ಮೈತ್ರಿ ಆದಂದಿನಿಂದ ಬಿಹಾರದಲ್ಲಿ ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತಿದ್ದು, ರಾಜ್ಯದ ಜನತೆ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಎನ್‌ಡಿಎ ದೇಶಾದ್ಯಂತ 400ಕ್ಕೂ ಹೆಚ್ಚು ಸೀಟು ಗೆಲ್ಲಲಿದ್ದು ನಾನು ಇನ್ನು ಎಂದಿಗೂ ಎನ್‌ಡಿಎ ಬಿಡುವುದಿಲ್ಲ’ ಎಂದರು.