ಸಾರಾಂಶ
ಅಯ್ಯಪ್ಪ ಯಾತ್ರೆಗೆ ಬರುವವರಿಗೆ ಸ್ಥಳದಲ್ಲೇ ಟಿಕೆಟ್ ನೀಡುವ ‘ಸ್ಪಾಟ್ ಬುಕಿಂಗ್’ಗೆ ಅವಕಾಶ ನೀಡುವುದಿಲ್ಲ. ಮಂಡಲಪೂಜೆ ಹಾಗೂ ಮಕರವಿಳಕ್ಕು ಸಮಯದಲ್ಲಿ ದರ್ಶನ ಪಡೆಯಲು ಬರುವ ಎಲ್ಲರಿಗೂ ದರ್ಶನಾವಕಾಶ ನೀಡಲಾಗುವುದು ಎಂದು ಕೇರಳ ದೇಗುಲ ಸಚಿವ ವಿ.ಎನ್.ವಾಸವನ್ ಅವರು ಭಾನುವಾರ ಸ್ಪಷ್ಪಪಡಿಸಿದ್ದಾರೆ.
ತಿರುವನಂತಪುರ : ಶಬರಿಮಲೆ ಅಯ್ಯಪ್ಪ ಯಾತ್ರೆಗೆ ಬರುವವರಿಗೆ ಸ್ಥಳದಲ್ಲೇ ಟಿಕೆಟ್ ನೀಡುವ ‘ಸ್ಪಾಟ್ ಬುಕಿಂಗ್’ಗೆ ಅವಕಾಶ ನೀಡುವುದಿಲ್ಲ. ಆದರೆ ಮಂಡಲಪೂಜೆ ಹಾಗೂ ಮಕರವಿಳಕ್ಕು ಯತ್ರಾ ಸಮಯದಲ್ಲಿ ಅಯ್ಯಪ್ಪ ದರ್ಶನ ಪಡೆಯಲು ಬರುವ ಎಲ್ಲರಿಗೂ ದರ್ಶನಾವಕಾಶ ನೀಡಲಾಗುವುದು ಎಂದು ಕೇರಳ ದೇಗುಲ ಸಚಿವ ವಿ.ಎನ್.ವಾಸವನ್ ಅವರು ಭಾನುವಾರ ಸ್ಪಷ್ಪಪಡಿಸಿದ್ದಾರೆ.
ಆನ್‌ಲೈನ್ ಮೂಲಕ ಟಿಕೆಟ್ ಕಾದಿರಿಸಿದರಷ್ಟೇ ಅವಕಾಶ ನೀಡುವ ಸರ್ಕಾರ ನೀತಿಯನ್ನು ಹಿಂಪಡೆಯದಿದ್ದರೆ ಹೋರಾಟ ನಡೆಸುವುದಾಗಿ ಬಿಜೆಪಿ ಹೇಳಿತ್ತು. ಅದರ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿದ್ದಾರೆ.
‘ಸ್ಪಾಟ್ ಬುಕಿಂಗ್‌ಗೆ ಅವಕಾಶ ನೀಡುವುದಿಲ್ಲ. ಆದರೆ, ಯಾತ್ರಿಕರ ವಿಶ್ರಾಂತಿ ಹಾಗೂ ನಿರೀಕ್ಷಣೆಗಾಗಿ ತೆರೆಯಲಾಗುವ ಅಕ್ಷಯ ಕೇಂದ್ರಗಳಲ್ಲಿ ಅವರು ಟಿಕೆಟ್ ಕಾದಿರಿಸಿಲು ಅವಕಾಶ ನೀಡಲಾಗುವುದು. ಎಲ್ಲ ಸಂಪ್ರದಾಯ ಪಾಲಿಸಿ ಬರುವ ಯಾತ್ರಿಕರಿಗೆ ದರ್ಶನ ಅವಕಾಶ ನಿರಾಕರಿಸುವುದಿಲ್ಲ. ದಿನವೊಂದಕ್ಕೆ 80 ಸಾವಿರ ಮಂದಿಗಷ್ಟೇ ದರ್ಶನಾವಕಾಶವಿರಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.