ಸಾರಾಂಶ
ಓಲಾ ಎಲೆಕ್ಟ್ರಿಕಲ್ ಎಸ್1 ಎಕ್ಸ್ ಸ್ಕೂಟರ್‌ನ ವಿವಿಧ ರೀತಿಯ ಮಾಡೆಲ್‌ಗಳ ಬೆಲೆಯನ್ನು 5 ಸಾವಿರದಿಂದ 10 ಸಾವಿರ ರು.ವರೆಗೆ ಇಳಿಕೆ ಮಾಡಲಾಗಿದೆ.
ನವದೆಹಲಿ: ಓಲಾ ಎಲೆಕ್ಟ್ರಿಕಲ್ ಎಸ್1 ಎಕ್ಸ್ ಸ್ಕೂಟರ್‌ನ ವಿವಿಧ ರೀತಿಯ ಮಾಡೆಲ್‌ಗಳ ಬೆಲೆಯನ್ನು 5 ಸಾವಿರದಿಂದ 10 ಸಾವಿರ ರು.ವರೆಗೆ ಇಳಿಕೆ ಮಾಡಲಾಗಿದೆ.
ಈ ಬಗ್ಗೆ ಓಲಾ ಎಲೆಕ್ಟ್ರಿಕ್ ಮಾರ್ಕೆಟಿಂಗ್ ಅಧಿಕಾರಿ ಅನ್ಶುಲ್ ಖಂಡೇಲ್ವಾಲ್ ಮಾಹಿತಿ ನೀಡಿದ್ದು, ಗ್ರಾಹಕರಿಗೆ ಉಪಯೋಗವಾಗುವಂತಹ ನಿಟ್ಟಿನಲ್ಲಿ ನಮ್ಮ ಕಂಪನಿಯ ಎಸ್1 ಎಕ್ಸ್ ಸ್ಕೂಟರ್‌ನ ವಿವಿಧ ಮಾಡೆಲ್‌ಗಳ ಬೆಲೆಯನ್ನು ಇಳಿಕೆ ಮಾಡಲಾಗಿದ್ದು, ಈ ವಾಹನಗಳು ಮುಂದಿನ ವಾರದೊಳಗೆ ವಿತರಣೆ ಆರಂಭವಾಗಲಿದೆ ಎಂದಿದ್ದಾರೆ.ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾದ 3 ಮಾಡೆಲ್‌ಗಳ ದರ 79, 999 ರಿಂದ 1,09,999 ರು.ವರೆಗೆ ಇದೆ. 4ವ್ಯಾಟ್ ಬ್ಯಾಟರಿ ಹೊಂದಿರುವ ಎಸ್1 ಎಕ್ಸ್ ಇವಿ ಬೆಲೆ 99,9999 ರು.ಗೆ, 3 ವ್ಯಾಟ್ ಬ್ಯಾಟರಿ ಹೊಂದಿರುವ ಎಸ್1 ಎಕ್ಸ್ ಇವಿ ಬೆಲೆ 84,999 ರು.ಗೆ ಹಾಗೂ 2 ವ್ಯಾಟ್ ಬ್ಯಾಟರಿ ಹೊಂದಿರುವ ಎಸ್1 ಎಕ್ಸ್ ಇವಿ ಬೆಲೆ 69,999 ರು.ಗೆ ಇಳಿಸಲಾಗಿದೆ.