ಸಾರಾಂಶ
ಚಳಿಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪಿತನಾಗಿರುವ ಬಾಲ ರಾಮನನ್ನು ಬೆಚ್ಚಗಿಡಲು ಸಕಲ ಸಿದ್ಧತೆಗಳು ನಡೆದಿವೆ.
ಅಯೋಧ್ಯೆ: ಚಳಿಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪಿತನಾಗಿರುವ ಬಾಲ ರಾಮನನ್ನು ಬೆಚ್ಚಗಿಡಲು ಸಕಲ ಸಿದ್ಧತೆಗಳು ನಡೆದಿವೆ. ಇದರ ಪ್ರಯುಕ್ತ ಬಾಲರಾಮನ ಮೂರ್ತಿಗೆ ನಾಗರ ಪಂಚಮಿಯ ದಿನದಿಂದ ಚಾದರ, ಪಶ್ಮಿನಾ ಶಾಲುಗಳಂತಹ ಡಿಸೈನರ್ ವಸ್ತ್ರಗಳನ್ನೇ ಹೊದಿಸಲಾಗುವುದು. ದೆಹಲಿ ಮೂಲದ ವಸ್ತ್ರವಿನ್ಯಾಸಕರಿಂದ ಇವುಗಳು ತಯಾರಾಗುತ್ತಿವೆ.
ಅಂತೆಯೇ, ರಾಮನ ಮೂರ್ತಿಗೆ ನ.20ರಿಂದ ಬೆಚ್ಚಗಿನ ನೀರಿನಲ್ಲಿ ಅಭಿಷೇಕ ಮಾಡಲಾಗುವುದು. ಗರ್ಭಗುಡಿಯನ್ನು ಬೆಚ್ಚಗಿಡಲು ಹೀಟರ್ ಹಾಗೂ ಬೆಚ್ಚಗಿನ ಗಾಳಿ ಸೂಸುವ ಬ್ಲೋವರ್‌ಗಳನ್ನು ಅಳವಡಿಸಲಾಗುವುದು. ನೈವೇದ್ಯಕ್ಕೆ ಮೊಸರಿನ ಬದಲು ರಬ್ಡಿ ಖೀರು ಹಾಗೂ ಒಣ ಹಣ್ಣುಗಳನ್ನು ಅರ್ಪಿಸಲಾಗುವುದು.