ತಮಿಳುನಾಡಿನಲ್ಲಿ ಡಿಎಂಕೆ ‘ಹಿಂದಿ ವಿರೋಧಿ’ ನಿಲುವಿಗೆ ಆಂಧ್ರ ಡಿಸಿಎಂ ಪವನ್‌ ಟಾಂಗ್‌

| N/A | Published : Mar 16 2025, 01:47 AM IST / Updated: Mar 16 2025, 07:02 AM IST

ಸಾರಾಂಶ

ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ವಿರೋಧ ಸೃಷ್ಟಿಯಾಗಿರುವ ಬೆನ್ನಲ್ಲೇ ಡಿಎಂಕೆ ಸರ್ಕಾರದ ನಡೆಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ವಿರೋಧ ವ್ಯಕ್ತ ಪಡಿಸಿದ್ದಾರೆ.‘ ಹಿಂದಿ ವಿರೋಧಿಸುವ ಡಿಎಂಕೆ, ತಮಿಳು ಚಿತ್ರಗಳನ್ನು ಹಿಂದಿಗೆ ಡಬ್ಬಿಂಗ್ ಮಾಡುವುದಕ್ಕೆ ಏಕೆ ಅವಕಾಶ ನೀಡುತ್ತದೆ?’ ಎಂದು ಪ್ರಶ್ನಿಸಿದ್ದಾರೆ.

ಚೆನ್ನೈ: ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ವಿರೋಧ ಸೃಷ್ಟಿಯಾಗಿರುವ ಬೆನ್ನಲ್ಲೇ ಡಿಎಂಕೆ ಸರ್ಕಾರದ ನಡೆಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ವಿರೋಧ ವ್ಯಕ್ತ ಪಡಿಸಿದ್ದಾರೆ.‘ ಹಿಂದಿ ವಿರೋಧಿಸುವ ಡಿಎಂಕೆ, ತಮಿಳು ಚಿತ್ರಗಳನ್ನು ಹಿಂದಿಗೆ ಡಬ್ಬಿಂಗ್ ಮಾಡುವುದಕ್ಕೆ ಏಕೆ ಅವಕಾಶ ನೀಡುತ್ತದೆ?’ ಎಂದು ಪ್ರಶ್ನಿಸಿದ್ದಾರೆ.

ಹಿಂದಿ ಭಾಷೆ ವಿರೋಧಿಸುವ ತಮಿಳುನಾಡಿನ ಡಿಎಂಕೆ ನಾಯಕರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ‘ಕೆಲವರು ಹಿಂದಿಯನ್ನು ಏಕೆ ಟೀಕಿಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ತಮಿಳುನಾಡು ರಾಜಕಾರಣಿಗಳು ಆರ್ಥಿಕ ಲಾಭಕ್ಕಾಗಿ ತಮ್ಮ ಭಾಷೆಯ ಚಲನಚಿತ್ರಗಳನ್ನು ಹಿಂದಿಗೆ ಡಬ್ ಮಾಡಲು ಅವಕಾಶ ನೀಡುವಾಗ ಹಿಂದಿಯನ್ನು ಏಕೆ ವಿರೋಧಿಸುತ್ತಾರೆ? ಅವರು ಬಾಲಿವುಡ್‌ನಿಂದ ಹಣ ಬಯಸುತ್ತಾರೆ. ಆದರೆ ಹಿಂದಿಯನ್ನು ಏಕೆ ನಿರಾಕರಿಸುತ್ತಾರೆ? ಇದು ಯಾವ ರೀತಿಯ ತರ್ಕ?’ ಎಂದು ಪ್ರಶ್ನಿಸಿದ್ದಾರೆ.

ಡಿಎಂಕೆ ತಿರುಗೇಟು:ಪವನ್ ಹೇಳಿಕೆಗೆ ಡಿಎಂಕೆ ನಾಯಕರು ತಿರುಗೇಟು ನೀಡಿದ್ದು, ‘ಹಿಂದಿ ಅಥವಾ ಇತರ ಯಾವುದೇ ಭಾಷೆಯನ್ನು ಕಲಿಯುವ ವ್ಯಕ್ತಿಗಳನ್ನು ತಮಿಳುನಾಡು ಎಂದಿಗೂ ವಿರೋಧಿಸಿಲ್ಲ. ನಮ್ಮ ವಿರೋಧ ಹಿಂದಿ ಹೇರಿಕೆಗೆ ವಿನಾ ಹಿಂದಿ ಭಾಷೆಗಲ್ಲ. ಅಲ್ಲದೇ ತಮಿಳುನಾಡಿನಲ್ಲಿ ಈಗಾಗಲೇ ಕೆಲವು ಸಂಸ್ಥೆಗಳಿದ್ದು ಅವುಗಳು ಸ್ವಯಂಪ್ರೇರಣೆಯಿಂದ ಹಿಂದಿ ಕಲಿಸುತ್ತವೆ. ಜನರು ಹಿಂದಿ ಕಲಿಯಲು ಬಯಸಿದರೆ ಅದರಲ್ಲಿ ಕಲಿಯಬಹುದು’ ಎಂದಿದ್ದಾರೆ.

ಬರೀ ತ.ನಾಡಿಗೇ ಅನ್ಯಾಯ: ಸಚಿವ

ಚೆನ್ನೈ: ಕೇಂದ್ರೀಯ ಪಾಲಿನಲ್ಲಿ ತಮಿಳುನಾಡಿಗೆ ಕೇವಲ 1 ರು. ಸಿಕ್ಕರೆ ಉತ್ತರ ಪ್ರದೇಶಕ್ಕೆ 4.90 ರು. ಸಿಗುತ್ತಿದೆ. ಆದರೂ ಉತ್ತರ ಪ್ರದೇಶದ ತಲಾದಾಯ ಕೂಡ ಏರುತ್ತಿಲ್ಲ. ಹೆಚ್ಚು ತೆರಿಗೆಯನ್ನು ತಮಿಳ್ನಾಡು ಸಂಗ್ರಹಿಸಿಕೊಟ್ಟರೂ ಅನ್ಯಾಯವಾಗುತ್ತಿದೆ. ಉತ್ತರ ರಾಜ್ಯಗಳ ತಲಾದಾಯ ಹೆಚ್ಚದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ ಎಂದು ತಮಿಳುನಾಡು ಸಚಿವ ತ್ಯಾಗರಾಜನ್‌ ಹೇಳಿದ್ದಾರೆ.