ಸಾರಾಂಶ
ಪೇಟಿಎಂ ಮೇಲಿನ ನಿರ್ಬಂಧವನ್ನು ಆರ್‌ಬಿಐ ಮಾ.15ರವರೆಗೂ ವಿಸ್ತರಿಸಿದ್ದು, ಪೇಟಿಎಂ ತನ್ನ ಒಪ್ಪಂದವನ್ನು ಎಕ್ಸಿಸ್ ಬ್ಯಾಂಕ್ ಜೊತೆ ಮಾಡಿಕೊಂಡಿದೆ.
ಮುಂಬೈ: ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲಿನ ಹಲವು ಸೇವೆಗಳ ಸ್ಥಗಿತಕ್ಕೆ ವಿಧಿಸಿದ್ದ ಗಡುವನ್ನು ಆರ್‌ಬಿಐ, ಫೆ.29ರ ಬದಲು ಮಾ.15ಕ್ಕೆ ವಿಸ್ತರಿಸಿದೆ.
ಇದರಿಂದಾಗಿ ನಿರ್ಬಂಧಗಳು ಮಾ.16ರಿಂದ ಜಾರಿಯಾಗಲಿವೆ. ಪೇಟಿಎಂ ಫಾಸ್ಟ್ಯಾಗ್, ವ್ಯಾಲೆಟ್, ಹೊಸ ಖಾತೆ ಆರಂಭ, ಹೊಸ ಠೇವಣಿಗಳ ಮೇಲೆ ನಿರ್ಬಂಧ ಜಾರಿಗೆ ಬರಲಿದೆ.
ಆದರೆ ಹಾಲಿ ಇರುವ ಠೇವಣಿದಾರರು ಹಣ ವಾಪಸು ಪಡೆಯಲು ಯಾಔಉದೇ ನಿರ್ಭಂಧ ಇರುವುದಿಲ್ಲ.
ಪೇಟಿಎಂ ಬ್ಯಾಂಕ್ ಕೆವೈಸಿ ನಿಯಮ ಪಾಲಿಸಿಲ್ಲ ಹಾಗೂ ಅಕ್ರಮ ಹಣ ವರ್ಗ ಮಾಡಿದೆ ಎಂದು ಆರೋಪಿಸಿ ಆರ್‌ಬಿಐ ನಿರ್ಬಂಧ ಹೇರಿದೆ.
ಎಕ್ಸಿಸ್ ಬ್ಯಾಂಕ್‌ಗೆ ಪೇಟಿಎಂ ಶಿಫ್ಟ್
ಪೇಟಿಎಂ ಬ್ಯಾಂಕ್ ಮೂಲಕ ವ್ಯವಹಾರ ನಡೆಸುತ್ತಿದ್ದ ಪೇಟಿಎಂ, ಈಗ ತನ್ನ ವ್ಯವಹಾರವನ್ನು ಎಕ್ಸಿಸ್ ಬ್ಯಾಂಕ್ ಮೂಲಕ ನಡೆಸಲು ಒಪ್ಪಂದ ಮಾಡಿ ಕೊಂಡಿದೆ. ಇದರಿಂದ ಪೇಟಿಎಂ ಆ್ಯಪ್ ಸೇವೆ ಅಬಾಧಿತವಾಗಲಿದೆ.