ಸಾರಾಂಶ
ನೇಪಾಳಕ್ಕಿದ್ದ ಹಿಂದೂ ರಾಷ್ಟ್ರ ಎಂಬ ಸ್ಥಾನವನ್ನು ಮರಳಿ ನೀಡಬೇಕು ಎಂದು ನೇಪಾಳಿ ಕಾಂಗ್ರೆಸ್‌ನ 22 ಮಂದಿ ಸದಸ್ಯರು ಸೋಮವಾರ ಆಗ್ರಹಿಸಿದ್ದಾರೆ. ಆದರೆ ಅದೇ ಪಕ್ಷದ ಕೆಲವು ನಾಯಕರು ಇದಕ್ಕೆ ವಿರೋಧವನ್ನು ಸಹ ವ್ಯಕ್ತಪಡಿಸಿದ್ದಾರೆ.
ಕಾಠ್ಮಂಡು: ನೇಪಾಳಕ್ಕಿದ್ದ ಹಿಂದೂ ರಾಷ್ಟ್ರ ಎಂಬ ಸ್ಥಾನವನ್ನು ಮರಳಿ ನೀಡಬೇಕು ಎಂದು ನೇಪಾಳಿ ಕಾಂಗ್ರೆಸ್‌ನ 22 ಮಂದಿ ಸದಸ್ಯರು ಸೋಮವಾರ ಆಗ್ರಹಿಸಿದ್ದಾರೆ. ಆದರೆ ಅದೇ ಪಕ್ಷದ ಕೆಲವು ನಾಯಕರು ಇದಕ್ಕೆ ವಿರೋಧವನ್ನು ಸಹ ವ್ಯಕ್ತಪಡಿಸಿದ್ದಾರೆ.
ಲಾತಿಪುರ್‌ನ ಗೋದಾವರಿಯಲ್ಲಿ ಆಯೋಜಿಸಿದ್ದ ಮಹಾಸಮಿತಿ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಆಗ್ರಹ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ 22 ಮಂದಿ ನೇಪಾಳಿ ಕಾಂಗ್ರೆಸ್‌ನ ಸದಸ್ಯರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಆದರೆ ಪಕ್ಷದ ಕೇಂದ್ರೀಯ ಕಾರ್ಯಕಾರಿ ಸಮಿತಿ ಈ ಮನವಿಯನ್ನು ಒಪ್ಪಿಕೊಂಡಿಲ್ಲ. ನೇಪಾಳದಲ್ಲಿನ ಜನಸಂಖ್ಯೆಯಲ್ಲಿ ಶೇ.81ರಷ್ಟು ಮಂದಿ ಹಿಂದೂಗಳಾಗಿದ್ದಾರೆ. 2008ರಲ್ಲಿ ನೇಪಾಳಕ್ಕಿಂತ ಹಿಂದೂ ರಾಷ್ಟ್ರ ಪಟ್ಟ ತೆಗೆದು ಗಣರಾಜ್ಯ ಎಂದು ಘೋಷಿಸಲಾಗಿತ್ತು.